2000 Rupee Note : 6 ವರ್ಷಗಳ ಹಿಂದಿನ ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದೇಶಾದ್ಯಂತ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಏತನ್ಮಧ್ಯೆ, 2000 ರೂಪಾಯಿ ನೋಟುಗಳ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಮಾಹಿತಿಯನ್ನು ನೀಡಿದೆ. 


COMMERCIAL BREAK
SCROLL TO CONTINUE READING

2000 ನೋಟುಗಳು ಮುದ್ರಣವಾಗುತ್ತಿಲ್ಲ :
ಕಳೆದ ಮೂರು ವರ್ಷಗಳಿಂದ 2,000 ರೂ.ಗಳ ಒಂದೇ ಒಂದು ನೋಟು ಮುದ್ರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ನೋಟು ಚಲಾವಣೆಯಲ್ಲಿರುವುದು ತೀರಾ ಕಡಿಮೆ ಎಂದೇ ಹೇಳಬಹುದು. RTI ಪ್ರಕಾರ, 2019-20, 2020-21 ಮತ್ತು 2021-22 ವರ್ಷಗಳಲ್ಲಿ ಯಾವುದೇ 2,000 ರೂಪಾಯಿಯ ಹೊಸ ನೋಟುಗಳನ್ನು ಮುದ್ರಿಸಲಾಗಿಲ್ಲ. 


ಇದನ್ನೂ ಓದಿ : Gold Price Today : ಇಂದಿನ ಚಿನ್ನ ಬೆಳ್ಳಿ ದರ ಎಷ್ಟು ತಿಳಿಯಿರಿ


ಆರ್‌ಬಿಐ ಹೊರ ತರುತ್ತದೆ ನೋಟು :
ಆರ್ ಬಿ ಐ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿ 2, 5, 10, 20, 50, 100, 200, 500 ಮತ್ತು 2000 ರೂ.ಗಳ ನೋಟುಗಳನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತಿದೆ. ನವೆಂಬರ್ 8, 2016 ರಂದು ಪ್ರಧಾನಿ ಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದುಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ 2000 ಮತ್ತು 500 ರೂ.ಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು.  


ಹೊಸ ನೋಟುಗಳನ್ನು ಬಿಡುಗಡೆ ಮಾಡುವ ಉದ್ದೇಶವೆಂದರೆ ಹೊಸ ನೋಟುಗಳನ್ನು ಆದಷ್ಟು ಬೇಗ ದೇಶಾದ್ಯಂತ  ಸರ್ಕ್ಯುಲೇಟ್ ಮಾಡುವುದು.  ಆದರೆ ಪ್ರಸ್ತುತ 2000 ರೂಪಾಯಿ ನೋಟುಗಳು ಮಾರುಕಟ್ಟೆಯಲ್ಲಿ ಬಹಳ ವಿರಳ ಎಂದೇ ಹೇಳಬಹುದು. ಆರ್‌ಬಿಐನಿಂದ ಪಡೆದ ಮಾಹಿತಿಯ ಪ್ರಕಾರ, ಮಾರ್ಚ್ 31, 2022 ರ ಹೊತ್ತಿಗೆ, ದೇಶದ ಚಲಾವಣೆಯಲ್ಲಿರುವ 2000 ರೂ ನೋಟುಗಳ ಪಾಲು ಕೇವಲ ಶೇಕಡಾ 13.8 ರಷ್ಟು ಮಾತ್ರ. 


ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ


ನಕಲಿ ನೋಟುಗಳ ಸಂಖ್ಯೆ :
ನಾವು ನಕಲಿ ನೋಟುಗಳ ಸಂಖ್ಯೆಯ ಬಗ್ಗೆ ಹೇಳುವುದಾದರೆ, 2018 ರಲ್ಲಿ  ನಕಲಿ ನೋಟುಗಳ ಸಂಖ್ಯೆ  54,776 ಆಗಿತ್ತು. 2019 ರಲ್ಲಿ, ಈ ಅಂಕಿ 90,566ಕ್ಕೆ ಏರಿತ್ತು. ಅದೇ 2020 ರಲ್ಲಿ ಈ ನಕಲಿ ನೋಟುಗಳ  ಸಂಖ್ಯೆ 2,44,834ಕ್ಕೆ ಏರಿದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.