Indian Railways : ಭಾರತೀಯ ರೈಲ್ವೇ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ಪ್ರತಿದಿನ 40 ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೂರದ ಊರುಗಳಿಗೆ ಪ್ರಯಾಣ ಬೆಳಸಲು ಜನರು ಬಸ್ಸು, ಕಾರುಗಳ ಬದಲಾಗಿ ರೈಲನ್ನೇ ಅವಲಂಬಿಸುತ್ತಾರೆ. ನೀವು ಕೂಡಾ ಭಾರತೀಯ ರೈಲುಗಳಲ್ಲಿ ಪ್ರಯಾಣಿಸಿದ್ದರೆ, ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಐದು ಅಂಕೆಗಳನ್ನು ಬರೆದಿರುತ್ತಾರೆ ಎನ್ನುವುದನ್ನು ಗಮನಿಸಿರಬಹುದು. ಕೆಲವುಇ ರೈಲುಗಳಲ್ಲಿ ಈ ಸಂಖ್ಯೆ ಐದು ಅಂಕೆಗಳನ್ನು  ಹೊಂದಿದ್ದರೆ ಇನ್ನು ಕೆಲವು ರೈಲುಗಳಲ್ಲಿ ಇದು ಆರು ಅಂಕೆಗಳನ್ನು ಹೊಂದಿರುತ್ತದೆ. ಆದರೆ ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ  ಬರೆದಿರುವ ಈ ಅಂಕೆಗಳು ಏನನ್ನು ಸೂಚಿಸುತ್ತವೆ, ಅಥವಾ ಯಾವ ಕಾರಣಕ್ಕೆ ಈ ಸಂಖ್ಯೆಗಳನ್ನು ಅಲ್ಲಿ ನಮೊದಿಸಲಾಗಿರುತ್ತದೆ ಎನ್ನುವ ಮಾಹಿತಿ ನಮಾಗೇ ತಿಳಿದಿದೆಯೇ?  ಇಲ್ಲ ಎಂದಾದರೆ ಈ ಅಂಕೆಗಳ ಹಿಂದಿನ ಸತ್ಯ, ಯಾತಕ್ಕಾಗಿ ಇದನ್ನೂ ರೈಲಿನ ಮೇಲೆ ಬರೆಯಲಾಗಿರುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ :  Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!


ಈ ಸಂಖ್ಯೆಗಳಲ್ಲಿನ ಮೊದಲ ಎರಡು ಅಂಕೆಗಳು ನಿರ್ದಿಷ್ಟ ಬೋಗಿಯನ್ನು ತಯಾರಿಸಿದ ವರ್ಷವನ್ನು ಸೂಚಿಸುತ್ತವೆ. ಅದರ  ನಂತರದ ಅಂಕೆಗಳು ಆ ನಿರ್ದಿಷ್ಟ ವರ್ಷದಲ್ಲಿ ಎಷ್ಟು  ಬೋಗಿಗಳನ್ನು ತಯಾರಿಸಲಾಗಿದೆ ಎಂಬುದನ್ನು ಹೇಳುತ್ತದೆ. ಉದಾಹರಣೆಗೆ, ಕೋಚ್ ಸಂಖ್ಯೆ 98397 ರಲ್ಲಿ 98 ಎಂದರೆ ಈ ಕೋಚ್ ಅನ್ನು 1998 ರಲ್ಲಿ ತಯಾರಿಸಲಾಯಿತು ಎಂದರ್ಥ. ಅಲ್ಲದೆ ಕೊನೆಯ ಸಂಖ್ಯೆ 397 ರಿಂದ, ಕಂಪಾರ್ಟ್ಮೆಂಟ್ ಸ್ಲೀಪರ್ ಕ್ಲಾಸ್ ಎಂದು ತಿಳಿಯುತ್ತದೆ. ಮತ್ತೊಂದೆಡೆ 05497 ರ 497 ಅಂಕೆಗಳು ಸಾಮಾನ್ಯ  ಬೋಗಿ ಎನ್ನುವುದನ್ನು  ಪ್ರತಿನಿಧಿಸುತ್ತವೆ. ಇವುಗಳಲ್ಲಿ, AC ಪ್ರಥಮ ದರ್ಜೆಯು 001-025 ರಿಂದ ಸರಣಿ ಸಂಖ್ಯೆಗಳನ್ನು ಹೊಂದಿದೆ. ಮತ್ತೊಂದೆಡೆ, ಕೋಚ್‌ನಲ್ಲಿ 05497 ಸಂಖ್ಯೆಯನ್ನು ಬರೆದಿದ್ದರೆ ಆ ಬೋಗಿ 2005 ರಲ್ಲಿ ತಯಾರಿಸಲ್ಪಟ್ಟಿದೆ ಎನ್ನುವುದನ್ನು ತಿಳಿಸಿ ಹೇಳುತ್ತದೆ. 


ಹೀಗೆ ಪ್ರತಿ ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ  ನಮೂದಿಸಲಾಗಿರುವ ಈ ಸಂಖ್ಯೆಗಳ ಸಹಾಯದಿಂದ ರೈಲು ಮತ್ತು ಅದರ ಬೋಗಿ ಎಷ್ಟು ಹಳೆಯದ್ದು, ಅಥವಾ ಆ ಕಂಪಾರ್ಟ್‌ಮೆಂಟ್‌  ಯಾವ ಶ್ರೇಣಿಯದ್ದು ಎನ್ನುವುದನ್ನು ಸುಲಭವಾಗಿ ಕಂಡು ಹಿಡಿಯುವುದು ಸಾಧ್ಯವಾಗುತ್ತದೆ.  


ಇದನ್ನೂ ಓದಿ :  Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ!


ಕಂಪಾರ್ಟ್‌ಮೆಂಟ್‌ನಲ್ಲಿ   ಇರುವ ಈ ಸಂಖ್ಯೆಗಳ ಅರ್ಥ ಏನು ? : 
001-025 : AC ಪ್ರಥಮ ದರ್ಜೆ
026-050 :  1AC + AC-2T
051-100 : AC-2T
101-150 : AC-3T
151-200 : CC (AC ಚೇರ್ ಕಾರ್)
201-400 : SL (2ನೇ ದರ್ಜೆಯ ಸ್ಲೀಪರ್  )
401-600 : GS (ಸಾಮಾನ್ಯ ಸೆಕೆಂಡ್ ಕ್ಲಾಸ್ )
601-700 : 2S ( ಸೆಕೆಂಡ್ ಕ್ಲಾಸ್ ಕುಳಿತುಕೊಳ್ಳಲು ಮಾತ್ರ ಅವಕಾಶ /ಶತಾಬ್ದಿ  ಚೇರ್ ಕ್ಲಾಸ್ )
701-800 : ಸಿಟ್ಟಿಂಗ್ ಕಮ್ ಲಗೇಜ್ ರಾಕ್ 
801 + : ಪ್ಯಾಂಟ್ರಿ ಕಾರ್, ಜನರೇಟರ್ ಅಥವಾ ಮೇಲ್


ಮುಂದಿನ ಬಾರಿ ನೀವು ರೈಲಿನಲ್ಲಿ ಪ್ರಯಾಣಿಸುವಾಗ, ನೀವು ಪ್ರಯಾಣಿಸುವ ಕೋಚ್‌ನ ಇತಿಹಾಸವನ್ನು ಖಂಡಿತವಾಗಿಯೂ ತಿಳಿದುಕೊಳ್ಳಿ.


 ಸರ್ಕಾರಿ ನೌಕರರಿಗೆ ಬಂಪರ್ ! ವೇತನ ಹೆಚ್ಚಳದ ಬಗ್ಗೆ ನಾಳೆ ಹೊರ ಬೀಳುವುದು ನಿರ್ಧಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.