ಬೆಂಗಳೂರು : ಚಿನಿವಾರ ಪೇಟೆಯಲ್ಲಿ ಚಿನ್ನದ ಬೇಡಿಕೆ ಬಲು ಕುಸಿದಿದೆ. ಇದಕ್ಕೆ ಕಾರಣಗಳು ಹಲವಾರು. ಮೊದಲ ಕಾರಣ ಲಾಕ್ ಡೌನ್ (Lockdown) . ಜನ ಚಿನ್ನ ಖರೀದಿಗೆ ಮಾರುಕಟ್ಟೆಗೆ ಬರುತ್ತಿಲ್ಲ. ಎರಡನೇ ಕಾರಣ ಕರೋನಾ ಮಹಾಮಾರಿ (Coronavirus). ಕರೋನಾ ಮಹಾಮಾರಿಯ ಕಾರಣ ಜನರು ಅನಗತ್ಯ ಖರ್ಚಿಗೆ ತೊಡಗುತ್ತಿಲ್ಲ. ಅಗತ್ಯ ವಸ್ತುಗಳಿಗಾಗಿ ಮಾತ್ರ ವಿನಿಯೋಗ ಮಾಡುತ್ತಿದ್ದಾರೆ. ಮೂರನೇ ಕಾರಣ ಮದುವೆ ಮೊದಲಾದ ಶುಭ ಕಾರ್ಯಗಳು ಈಗ ಮೊದಲಿನಷ್ಟು ಸಂಭ್ರಮದಿಂದ ನಡೆಯುತ್ತಿಲ್ಲ. ಇವೆಲ್ಲಾ ಕಾರಣಗಳಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿದಿದೆ. ಬೆಲೆಯೂ ಅಷ್ಟರ ಮಟ್ಟಿಗೆ ಇದೆ. 


COMMERCIAL BREAK
SCROLL TO CONTINUE READING

ಚಿನ್ನದ ರೇಟ್ ಎಷ್ಟಿದೆ..?
ಮೇ ತಿಂಗಳಿನಲ್ಲಿ ಚಿನ್ನದ ಧಾರಣೆಯಲ್ಲಿ (Gold price) ಏರಿಳಿತ ಇತ್ತು. ಕಳೆದೆರಡು ದಿನಗಳಲ್ಲಿ ಚಿನ್ನದ ಧಾರಣೆ  ಸ್ಥಿರವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ (Gold rate)  45, 600 ರೂಪಾಯಿ. ಅದೇ ಅಪರಂಜಿ ಚಿನ್ನ ಹತ್ತು ಗ್ರಾಮಿಗೆ 49,750 ರೂಪಾಯಿ ಇದೆ. 


ಇದನ್ನೂ ಓದಿ : ಕರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ : ಟಾಟಾ ಸ್ಟೀಲ್


ಇದೇ ಚಿನ್ನ ಚೆನ್ನೈಯಲ್ಲಿ (Chennai) 22 ಕ್ಯಾರೆಟ್ ಹತ್ತು ಗ್ರಾಮಿಗೆ ಕೊಂಚ ಏರಿಕೆ ಇದೆ. 45, 910 ರೂಪಾಯಿ ದರ ದಾಖಲಿಸಿದೆ. 24 ಕ್ಯಾರೆಟ್ ಚಿನ್ನ ಹತ್ತು ಗ್ರಾಮಿಗೆ 50,060 ರೂಪಾಯಿ ಇದೆ. ಮುಂಬಯಿನಲ್ಲಿ(Mumbai)  22 ಕ್ಯಾರೆಟ್ ಹತ್ತು ಗ್ರಾಮಿಗೆ 46,000 ಹಾಗೂ ಅಪರಂಜಿ ಚಿನ್ನ 10 ಗ್ರಾಮಿಗೆ 47,000 ದಾಖಲಾಗಿದೆ. ಮತ್ತೊಂದು ಕಡೆ ಮುತ್ತಿನ ನಗರಿ ಹೈದರಾಬಾದಿನಲ್ಲಿ ಶುದ್ದಚಿನ್ನ ಹತ್ತು ಗ್ರಾಮಿಗೆ 45,600 ರೂಪಾಯಿ ಇದೆ. 


ಬೆಳ್ಳಿ ಬೆಲೆ ಕೊಂಚ ಏರಿಕೆ :
ಬೆಳ್ಳಿಯ ಧಾರಣೆ (Silver price) ಏರಿಕೆ ದಾಖಲಿಸುತ್ತಿದೆ. ಮುಂಬಯಿನಲ್ಲಿ ಒಂದು ಕೆಜಿ ಬೆಳ್ಳಿಗೆ 100 ರೂಪಾಯಿ ಏರಿಕೆಯಾಗಿದೆ. ಒಂದು ಕೆಜಿಗೆ 71200 ರೂಪಾಯಿ ದಾಖಲಾಗಿದೆ. ಹೈದರಾಬಾದಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ. 75700 ರೂಪಾಯಿ ಪ್ರತಿಕೆಜಿಗೆ ಮಾರಾಟವಾಗುತ್ತಿದೆ.  ಬೆಂಗಳೂರಿನಲ್ಲೂ (Bengaluru) ಬೆಳ್ಳಿ ಏರಿಕೆ ದಾಖಲಿಸಿದ್ದು, ಕೆ.ಜಿಗೆ 71,200 ರೂಪಾಯಿ ದಾಖಲಾಗಿದೆ.


ಇದನ್ನೂ ಓದಿ : Cheque Payment: ಜೂನ್ 1 ರಿಂದ ಈ ಬ್ಯಾಂಕಿನ ನಿಯಮಗಳಲ್ಲಿ ಬದಲಾವಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.