ನವದೆಹಲಿ : Hero MotoCorp Price Hike : ಕೊರೊನಾವೈರಸ್‌ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್‌ಡೌನ್ ನಿಂದಾಗಿ  ವಾಹನಗಳ ಮಾರಾಟ ಮತ್ತು ಖರೀದಿಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಈ ಹಿಂದೆ, ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಈಗ ಹೀರೋ ಮೊಟೊಕಾರ್ಪ್ ನಾಳೆ ಅಂದರೆ ಜುಲೈ 1 ರಿಂದ ಭಾರತದಾದ್ಯಂತ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ (Hero MotoCorp Price Hike) ಘೋಷಿಸಿದೆ. ತನ್ನ ಬೈಕ್ ಸ್ಕೂಟರ್ ಗಳ ಮೇಲೆ ಸುಮಾರು 3,000ಗಳಷ್ಟು ಹೆಚ್ಚಿಸುವುದಾಗಿ ಕಂಪನಿ ಹೇಳಿದೆ. 


COMMERCIAL BREAK
SCROLL TO CONTINUE READING

3,000 ರೂವರೆಗೆ ದುಬಾರಿಯಾಗಲಿದೆ : 
ಹೀರೋ ಮೊಟೊಕಾರ್ಪ್ (Hero motocorp) ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಜುಲೈ 1, 2021 ರಿಂದ ಹೆಚ್ಚಿಸುವುದಾಗಿ ಘೋಷಿಸಿದೆ. ಕಂಪನಿಯ ಪ್ರಕಾರ, ಬೆಲೆಗಳನ್ನು 3,000 ರೂ.ವರೆಗೆ ಹೆಚ್ಚಿಸಲಾಗುವುದು. ಹೊಸ ಬೆಲೆ ವಾಹನಗಳ ಮಾಡೆಲ್ ಮತ್ತು ಮತ್ತು ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಏಪ್ರಿಲ್ ನಲ್ಲಿ ಕಂಪನಿಯು ತನ್ನ ವಾಹನಗಳ ಬೆಲೆಯನ್ನು,  2,500 ವರೆಗೆ ಹೆಚ್ಚಿಸಿತ್ತು.


ಇದನ್ನೂ ಓದಿ : Changes From July: ಬ್ಯಾಂಕಿಂಗ್‌ನಿಂದ ಕಾರುಗಳವರೆಗೆ ನಾಳೆಯಿಂದ ಸಂಭವಿಸಲಿರುವ 10 ದೊಡ್ಡ ಬದಲಾವಣೆಗಳಿವು


ಕಚ್ಚಾ ವಸ್ತುಗಳು ದುಬಾರಿಯಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ : 
ಕಚ್ಚಾ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಸ್ಕೂಟರ್, ಬೈಕ್ ಗಳ ಬೆಲೆಯಲ್ಲಿಯೂ (Bike rate hike) ಏರಿಕೆಯಾಗಲಿದೆ. ಈ ನಡುವೆ ತನ್ನ ಗ್ರಾಹಕರಿಗೆ ಹೊರೆಯಾಗದಂತೆ, ವೆಚ್ಚ ಉಳಿಸುವ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಕಂಪನಿ ಹೇಳಿದೆ. ಮೇ 2021 ರಲ್ಲಿ, ದೇಶದಲ್ಲಿ ಕೊರೊನಾವೈರಸ್ (Coronavirus) ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಾವರದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದು ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಹೀರೋ ಮೊಟೊಕಾರ್ಪ್ ಇತ್ತೀಚೆಗೆ ಹೀರೋ ಕೋಲ್ಯಾಬ್ಸ್ ಡಿಸೈನ್ (Hero CoLabs design) ಚಾಲೆಂಜ್‌ನ ನಾಲ್ಕನೇ ಆವೃತ್ತಿಯನ್ನು ಪ್ರಕಟಿಸಿದೆ. 


ಮಾಸಿಕ ಮಾರಾಟದಲ್ಲಿ 50.83 ರಷ್ಟು ಕುಸಿತ :
ವಾಸ್ತವವಾಗಿ, ಮೇ 2021 ರಲ್ಲಿ, ಕಂಪನಿಯ (Company) ಮಾಸಿಕ ಮಾರಾಟವು 50.83 ಪ್ರತಿಶತದಷ್ಟು ಕುಸಿದಿದೆ.  ಇದೀಗ ಮತ್ತೆ ಬೆಲೆ ಏರಿಕೆ ಮಾಡಿರುವುದು ಮಾರಾಟದ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು. ಆದರೆ ಉತ್ತಮ ಮುಂಗಾರುವಿನ ಮುನ್ಸೂಚನೆಯೊಂದಿಗೆ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬೇಡಿಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ : Post Officeನ ನಿರಂತರ ಆದಾಯ ನೀಡುವ ಈ ಯೋಜನೆಯ ಬಗ್ಗೆ ನಿಮಗೆ ತಿಳಿದಿದೆಯಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.