Gravton Quanta: ಕೇವಲ ರೂ.10ಕ್ಕೆ 100 ಕಿ.ಮೀ ಓಡುತ್ತೆ ಈ ಬೈಕ್, ಭಾರತೀಯ ಕಂಪನಿಯಿಂದ ಪವರ್ಫುಲ್ ಇ-ಬೈಕ್ ಬಿಡುಗಡೆ

Gravton Quanta - ಹೈದರಾಬಾದ್ (Hyderabad) ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯಾಗಿರುವ (Electric Vehicle Company) ಗ್ರಾವ್ಟನ್ ಮೋಟಾರ್ಸ್ Gravton Quanta ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್‌ನ ಪರಿಚಯಾತ್ಮಕ ಬೆಲೆಯನ್ನು 99,000 ರೂ.ಗಳಿಗೆ ನಿಗದಿಪಡಿಸಿದೆ. 

Written by - Nitin Tabib | Last Updated : Jun 29, 2021, 04:20 PM IST
  • ಮಾರುಕಟ್ಟೆಗೆ Gravton Quanta e-Bike ಬಿಡುಗಡೆಗೊಳಿಸಿದ Gravton Motors.
  • ಕೇವಲ 10 ರೂ.ಗಳಿಗೆ 100 ಕಿ.ಮೀ ದೂರ ಕ್ರಮಿಸುತ್ತದೆ ಈ ಬೈಕ್.
  • ಈ ಬೈಕ್ ನ ಗರಿಷ್ಟ ಸ್ಪೀಡ್ ಗಂಟೆಗೆ 70kmph.
Gravton Quanta: ಕೇವಲ ರೂ.10ಕ್ಕೆ 100 ಕಿ.ಮೀ ಓಡುತ್ತೆ ಈ ಬೈಕ್, ಭಾರತೀಯ ಕಂಪನಿಯಿಂದ ಪವರ್ಫುಲ್ ಇ-ಬೈಕ್ ಬಿಡುಗಡೆ title=
Gravton Quanta (Photo- Video Grab)

Hyderabad: ಹೈದರಾಬಾದ್ (Hyderabad) ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯಾಗಿರುವ (Electric Vehicle Company) ಗ್ರಾವ್ಟನ್ ಮೋಟಾರ್ಸ್ (Gravton Motors) Gravton Quanta ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್‌ನ ಪರಿಚಯಾತ್ಮಕ ಬೆಲೆಯನ್ನು 99,000 ರೂ.ಗಳಿಗೆ ನಿಗದಿಪಡಿಸಿದೆ. ಇದು ಕೆಲವು ದಿನಗಳ ನಂತರ 1.1 ರಿಂದ 1.2 ಲಕ್ಷ ರೂ.ಗೆ ಏರಿಕೆಯಾಗಲಿದೆ ಎಂದು ಕಂಪನಿ ಹೇಳಿದೆ. ಆರಂಭದಲ್ಲಿ ಕ್ವಾಂಟಾ ಹೈದರಾಬಾದ್‌ನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರಲಿದೆ. ಆದರೆ ಕಂಪನಿಯು ನಂತರ ಅದನ್ನು ದೇಶದ ಇತರ ನಗರಗಳಲ್ಲಿಯೂ ಕೂಡ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ.

80ರೂ.ಗಳಲ್ಲಿ 800 ಕಿ.ಮೀ
ಗ್ರಾವ್ಟನ್ ಕ್ವಾಂಟಾ (Gravton Quanta) ಎಲೆಕ್ಟ್ರಿಕ್ ಬೈಕ್ 80 ರೂ. ವೆಚ್ಚದಲ್ಲಿ 800 ಕಿ.ಮೀ. ಓಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ, 100 ಕಿ.ಮೀ. ಚಾಲನೆಗೆ ನಿಮಗೆ ಕೇವಲ ರೂ.10 ವೆಚ್ಚ ಬರಲಿದೆ. ಇದರಲ್ಲಿ 3 kWh Li-ion ಬ್ಯಾಟರಿ ನೀಡಲಾಗಿದೆ, ಇದು ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ. ವರೆಗೆ ಓಡುತ್ತದೆ. ಎರಡು ಬ್ಯಾಟರಿಗಳನ್ನು ಒಟ್ಟಿಗೆ ಇಡುವ ಸೌಲಭ್ಯವನ್ನೂ ಕೂಡ ಈ ಬೈಕ್ ನಲ್ಲಿ ಕಲ್ಪಿಸಲಾಗಿದೆ. ಅಂದರೆ, ನೀವು ಒಂದೇ ಬಾರಿಯ ಚಾರ್ಜಿಂಗ್‌ನಲ್ಲಿ ಒಟ್ಟು 320 ಕಿ.ಮೀ. ವರೆಗೆ ಹೋಗಬಹುದು.

70Kmph ಇದು ಈ ಬೈಕ್ ನ ಟಾಪ್ ಸ್ಪೀಡ್
ಈ ಬೈಕ್ ಕೆಂಪು, ಬಿಳಿ ಮತ್ತು ಕಪ್ಪು ಎಂಬ ಒಟ್ಟು ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಕಪ್ಪು ಬಣ್ಣವನ್ನು ಸ್ಪೆಷಲ್ ಎಡಿಷನ್ ಆಗಿ ಮಾರಾಟ ಮಾಡಲಾಗುವುದು ಮತ್ತು ಅದು ಸೀಮಿತ ಯುನಿಟ್ ಗಳನ್ನು ಮಾತ್ರ ಹೊಂದಿರಲಿದೆ. ಎಲೆಕ್ಟ್ರಿಕ್ ಬೈಕ್‌ಗಾಗಿ ಬುಕಿಂಗ್ ಆರಂಭಗೊಂಡಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.3KW ನ  BLDC ಮೋಟರ್ ನೀಡಲಾಗಿದ್ದು, ಇದು ಗರಿಷ್ಠ 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬೈಕ್‌ನ ಗರಿಷ್ಠ ವೇಗ 70 ಕಿ.ಮೀ. ಗಳಷ್ಟಾಗಿದೆ.

ಇದನ್ನೂ ಓದಿ-Petrol-Diesel ಬೆಲೆ ಚಿಂತೆ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಸಿ, ಎಷ್ಟು ಲಕ್ಷ ಸಬ್ಸಿಡಿ ಸಿಗುತ್ತೆ ಗೊತ್ತಾ?

ಕೇವಲ 90 ನಿಮಿಷಗಳಲ್ಲಿ ಫುಲ್ ಚಾರ್ಜಿಂಗ್
ಈ ಬೈಕ್ ನಲ್ಲಿ ನೀಡಲಾಗಿರುವ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬಳಸಿ ನೀವು ಕೇವಲ 90 ನಿಮಿಷಗಳಲ್ಲಿ ಈ ಬೈಕ್ ನ ಬ್ಯಾಟರಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಅಂದರೆ, ಇದು 1 ಕಿ.ಮೀ/ಮಿನಿಟ್ ಲೆಕ್ಕಾಚಾರದಲ್ಲಿ ಇದು ಚಾರ್ಜ್ ಆಗುತ್ತದೆ. ಸಾಮಾನ್ಯ ಮೋಡ್ ನಲ್ಲಿ ಫುಲ್ ಚಾರ್ಜ್ ಆಗಲು ಈ ಬೈಕ್ 3 ಗಂಟೆಗಳ ಕಾಲಾವಕಾಶ ಬೇಕು. Gravton Quanta ಇ-ಬೈಕ್ ಐದು ವರ್ಷಗಳ ಬ್ಯಾಟರಿ ವಾರಂಟಿ ಹಾಗೂ ಸುಲಭವಾದ ರಿಪ್ಲೇಸ್ಮೆಂಟ್ ಎಷ್ಯೋರನ್ಸ್ ನೊಂದಿಗೆ ಲಭ್ಯವಿರಲಿದೆ.

ಇದನ್ನೂ ಓದಿ-Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಈ ಇ-ಬೈಕ್ (Electric Bike) ನಲ್ಲಿ 17 ಇಂಚಿನ ಗಾಲಿಗಳು, ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಹಾಗೂ ಆಲ್ LED ಲೈಟಿಂಗ್ ನಂತನ ವೈಶಿಷ್ಟ್ಯಗಳನ್ನೂ ನೀಡಲಾಗಿದೆ. ಈ ಬೈಕ್ ಅನ್ನು ನೀವು ಕ್ವಾಂಟಾ ಸ್ಮಾರ್ಟ್ ಆಪ್ (Quanta Smart App) ಮೂಲಕ ಕೂಡ ಕನೆಕ್ಟ್ ಮಾಡಬಹುದು. ಇದರಿಂದ ನಿಮಗೆ ರೋಡ್ ಸೈಡ್ ಅಸಿಸ್ಟೆಂಟ್, ಮ್ಯಾಪಿಂಗ್ ಸರ್ವಿಸ್ ಸ್ಟೇಷನ್, ರಿಮೋಟ್ ಲಾಕ್ / ಅನ್ ಲಾಕ್ ಹಾಗೂ ಲೈಟ್ ಆನ್ / ಆಫ್ ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಆಪ್ ನಲ್ಲಿ ನೀವು ನಿಮ್ಮ ವಾಹನದ ಟ್ರ್ಯಾಕಿಂಗ್ ಕೂಡ ಮಾಡಬಹುದಾಗಿದೆ.

ಇದನ್ನೂ ಓದಿ-ಬ್ಯಾಟರಿಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಬಹುದು ಎಂದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News