ದೆಹಲಿ : ಎಲ್‌ಐಸಿಯ  IPO ಅನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು  ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಎಲ್‌ಐಸಿಯ ಐಪಿಒ ಬರಲು ಇನ್ನೂ ಸಮಯವಿದೆ. ಆದರೆ ಅದಕ್ಕೂ ಮೊದಲು ಶೀಘ್ರದಲ್ಲೇ LIC ದೇಶಾದ್ಯಂತ ಎಲ್ಲಾ ಶಾಖೆಗಳಲ್ಲೂ Claim Settlement ಸೌಲಭ್ಯವನ್ನು ಪ್ರಾರಂಭಿಸಲಿದೆ. ಇದರ ಅತಿ ದೊಡ್ಡ ಪ್ರಯೋಜನೆವೆಂದರೆ ಗ್ರಾಹಕರು Claim Settlement ಗಾಗಿ ಹೋಮ್ ಬ್ರಾಂಚ್‌ಗೆ ಹೋಗಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಯಾವುದೇ ಶಾಖೆಯಲ್ಲಿ ಅರ್ಜಿ ಸಲ್ಲಿಸಬಹುದು:
ದೇಶಾದ್ಯಂತ LICಯ ಎಲ್ಲಾಶಾಖೆಗಳಲ್ಲೂ Claim Settlement  ಸೌಲಭ್ಯವನ್ನು ಪರಿಚಯಿಸುವುದರಿಂದ ಗ್ರಾಹಕರ ದೊಡ್ಡ ಸಮಸ್ಯೆ ಕೊನೆಗೊಳ್ಳಲಿದೆ. ಅಂದರೆ ಇನ್ನು ಗ್ರಾಹಕರು ದೇಶದ ಎಲ್‌ಐಸಿಯ ಯಾವುದೇ ಶಾಖೆಯಲ್ಲಿಯೂ Claim Settlementಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು Home branchಗೆ ತೆರಳಬೇಕಿಲ್ಲ.  ಇದಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ, My LIC APP ಅನ್ನು ಪ್ರಾರಂಭಿದೆ.  ಇದರಲ್ಲಿ ಗ್ರಾಹಕರು ಪಾಲಿಸಿ ಸ್ಟೇಟಸ್, ಲೋನ್ ಫೆಸಿಲಿಟಿ,  ಮತ್ತು Surrender Value ಮೊದಲಾದ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆದುಕೊಳ್ಳಬಹುದು. 


ಇದನ್ನೂ ಓದಿ : LIC Nivesh Plus Plan: ಒಂದೇ ಬಾರಿಯ ಹೂಡಿಕೆಯಲ್ಲಿ ಪಡೆಯಬಹುದು ಉತ್ತಮ ರಿಟರ್ನ್


ಈಗಿರುವ ನಿಯಮ ಏನು ಹೇಳುತ್ತೆ ? :
ಪ್ರಸ್ತುತ, ಎಲ್‌ಐಸಿಯಲ್ಲಿನ ವ್ಯವಸ್ಥೆಯಲ್ಲಿ, ಪಾಲಿಸಿಯನ್ನು ಯಾವ ಶಾಖೆಯಿಂದ ತೆಗೆದುಕೊಳ್ಳಲಾಗಿದೆ, ಅದೇ ಶಾಖೆಯಲ್ಲಿ ಗ್ರಾಹಕರು Claim Settlementಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. online ಮೂಲಕ Claim Settlementಗೆ ಅರ್ಜಿ ಸಲ್ಲಿಸುವ ಸೌಲಭ್ಯ ಕೆಲ ಬ್ರಾಂಚ್ ಗಳಲ್ಲಿ ಮಾತ್ರ ಇದೆ. ದೇಶದ ಎಲ್ಲಾ ಶಾಖೆಗಳಲ್ಲೂ Claim Settlement ಸೌಲಭ್ಯ ಆರಂಭವಾದರೆ ಗ್ರಾಹಕರ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. 


ವಿಮಾ ಉದ್ಯಮದಲ್ಲಿ ಎಲ್ ಐಸಿ ನಂಬರ್ ಒನ್: 
ಇಂದಿನ ಯುಗದಲ್ಲಿ ಎಲ್ಲಾ ವಸ್ತುಗಳಿಗೂ ವಿಮೆ ಮಾಡಲಾಗುತ್ತಿದೆ. ಜೀವವಿಮೆಯಿಂದ (Life insurance) ಹಿಡಿದು  ವಾಹನಗಳು, ಸರಕುಗಳು ಮತ್ತು ಮೊಬೈಲ್‌ಗಳಿಗೂ (Mobile) ವಿಮೆ ಮಾಡಲಾಗುತ್ತದೆ. ಜೀವ ವಿಮಾ ಕ್ಷೇತ್ರದಲ್ಲಿ ಎಲ್ಐಸಿ ಪ್ರಥಮ ಸ್ಥಾನದಲ್ಲಿದೆ. ಮಾಹಿತಿಯ ಪ್ರಕಾರ, ಜೀವ ವಿಮೆ ಪಡೆದಿರುವ ಒಟ್ಟು ಗ್ರಾಹಕರಲ್ಲಿ ಸುಮಾರು 70 ಪ್ರತಿಶತ ಜನರು ಭಾರತೀಯ ಜೀವ ವಿಮಾ ನಿಗಮದಲ್ಲಿದ್ದಾರೆ. 


ಇದನ್ನೂ ಓದಿ : LIC Policy : ಕಡಿಮೆ ಹೂಡಿಕೆ ಅಧಿಕ ಲಾಭ, ಬಂದಿದೆ ಎಲ್ಐ ಸಿಯ ಹೊಸ ಪಾಲಿಸಿ ಬಿಮಾ ಜ್ಯೋತಿ


ಎಲ್‌ಐಸಿಯ ಐಪಿಒ ಕೂಡ ಬರಲಿದೆ : 
ಮುಂದಿನ ಹಣಕಾಸು ವರ್ಷದಲ್ಲಿ ಎಲ್‌ಐಸಿಯ IPO ತರಲಾಗುವುದು ಎಂದು ಬಜೆಟ್ ಭಾಷಣದಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ (Nirmala Seetharaman) ಘೋಷಿಸಿದ್ದಾರೆ. ಇದುವರೆಗಿನ ಮಾಹಿತಿಯ ಪ್ರಕಾರ, ಅಕ್ಟೋಬರ್ ನಂತರ ಅದನ್ನು ಘೋಷಿಸುವ ಸಾಧ್ಯತೆ ಇದೆ. ಎಲ್‌ಐಸಿ ಗ್ರಾಹಕರಿಗೆ ಐಪಿಒನಲ್ಲಿ ಶೇ 10 ರಷ್ಟು ಮೀಸಲಾತಿ ಸಿಗಲಿದೆ ಎಂದು ಹಣಕಾಸು ಸಚಿವ ಅನುರಾಗ್ ಠಾಕೂರ್ ಇತ್ತೀಚೆಗೆ ಸಂಸತ್ತಿಗೆ ತಿಳಿಸಿದ್ದರು. ತಜ್ಞರ ಪ್ರಕಾರ, ಎಲ್‌ಐಸಿ 32 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.