LIC Nivesh Plus Plan: ಒಂದೇ ಬಾರಿಯ ಹೂಡಿಕೆಯಲ್ಲಿ ಪಡೆಯಬಹುದು ಉತ್ತಮ ರಿಟರ್ನ್

ಎಲ್‌ ಐಸಿಯ  ಇನ್ವೆಸ್ಟ್ ಮೆಂಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಪದೇ ಪದೇ ಪ್ರೀಮಿಯಂ ಪಾವತಿಸುವ ರಗಳೆ ಇರುವುದಿಲ್ಲ. ಎಲ್ಐಸಿಯ ಈ ಯೋಜನೆ ಸಾಂಪ್ರದಾಯಿಕವಾಗಿದೆ

Written by - Ranjitha R K | Last Updated : Mar 10, 2021, 11:08 AM IST
  • ಎಲ್‌ ಐಸಿಯ ಇನ್ವೆಸ್ಟ್ ಮೆಂಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಿ
  • ಈ ಯೋಜನೆಯಲ್ಲಿ ಕನಿಷ್ಠ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
  • 90 ದಿನಗಳ ಮಗುವಿನಿಂದ 65 ವರ್ಷದವರೆಗಿನ ವ್ಯಕ್ತಿ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು
LIC Nivesh Plus Plan: ಒಂದೇ ಬಾರಿಯ ಹೂಡಿಕೆಯಲ್ಲಿ ಪಡೆಯಬಹುದು ಉತ್ತಮ ರಿಟರ್ನ್ title=
LIC Nivesh Plus Plan (file photo)

ದೆಹಲಿ : ಎಲ್‌ಐಸಿ (LIC) ದೇಶದ ಅತ್ಯಂತ ಜನಪ್ರಿಯ ವಿಮಾ ಕಂಪನಿಯಾಗಿದೆ. ಎಲ್‌ಐಸಿಯ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರಿಂದ, ಜೀವ ವಿಮೆಯನ್ನು ಮಾತ್ರವಲ್ಲದೆ ಉತ್ತಮ ಆದಾಯವನ್ನೂ ಪಡೆಯಬಹುದು.  ಬೆಲೆ ಏರಿಕೆಯ ನಡುವೆ,  ಎಲ್‌ಐಸಿ ಒಂದು ಯೋಜನೆಯನ್ನು (Scheme) ಹೊರ ತಂದಿದೆ. ಇದರಲ್ಲಿ ಒಂದು ಬಾರಿ ಮಾತ್ರ ಹೂಡಿಕೆ ಮಾಡುವ ಮೂಲಕ ನಿಗದಿತ ಸಮಯದ ನಂತರ ಭಾರಿ ಮೊತ್ತವನ್ನು ಪಡೆಯಬಹುದು.

ಎಲ್ ಐಸಿಯ ಇನ್ವೆಸ್ಟ್ಮೆಂಟ್ ಪ್ಲಸ್ ಯೋಜನೆ :
ಎಲ್‌ ಐಸಿಯ (LIC) ಇನ್ವೆಸ್ಟ್ ಮೆಂಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಪ್ರೀಮಿಯಂ (premium)ಅನ್ನು ಪಾವತಿಸಿದರೆ ಸಾಕು. ಪದೇ ಪದೇ ಪ್ರೀಮಿಯಂ ಪಾವತಿಸುವ ರಗಳೆ ಇರುವುದಿಲ್ಲ. ಎಲ್ಐಸಿಯ ಈ ಯೋಜನೆ ಸಾಂಪ್ರದಾಯಿಕವಾಗಿದೆ. ಯೋಜನೆಯಲ್ಲಿ ಪಾಲಿಸಿದಾರರ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಎಂದು ಎಲ್ಐಸಿ ಹೇಳಿದೆ. 

ಇದನ್ನೂ ಓದಿ:  SBI ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಕಮ್ಮಿ ಇದ್ರು 'ಜಾಸ್ತಿ ಹಣ ತೆಗಿಬಹುದು..!

ಒಂದು ಲಕ್ಷಕ್ಕಿಂತ ಕಡಿಮೆ ಹೂಡಿಕೆ ಮಾಡುವಂತಿಲ್ಲ : 
ಈ ಯೋಜನೆಯಲ್ಲಿ ಕನಿಷ್ಠ 1 ಲಕ್ಷ ರೂಪಾಯಿಗಳನ್ನು ಹೂಡಿಕೆ (Invest) ಮಾಡಬೇಕಾಗುತ್ತದೆ. ಆದರೆ, ಗರಿಷ್ಠ ಹೂಡಿಕೆ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಪಾಲಿಸಿಯನ್ನು 10 ರಿಂದ 25 ವರ್ಷಗಳವರೆಗೆ ತೆಗೆದುಕೊಳ್ಳಬಹುದು. 90 ದಿನಗಳ ಮಗುವಿನಿಂದ 65 ವರ್ಷದವರೆಗಿನ ವ್ಯಕ್ತಿ ಈ ಪಾಲಿಸಿಯಲ್ಲಿ (policy)ಹೂಡಿಕೆ ಮಾಡಬಹುದು.  ಪಾಲಿಸಿಯ ಗರಿಷ್ಠ ಮುಕ್ತಾಯದ ವಯಸ್ಸು 85 ವರ್ಷಗಳಾಗಿರುತ್ತವೆ.  ಪಾಲಿಸಿ ಅವಧಿ ತನಕ ಪಾಲಿಸಿದಾರ ಜೀವಂತವಾಗಿದ್ದರೆ, ಪಾಲಿಸಿದಾರನಿಗೆ Maturity ಲಾಭ ಸಿಗುತ್ತದೆ.

ಉತ್ತಮ ಆದಾಯದ ಪೂರ್ಣ ಭರವಸೆ :
ಈ ಪಾಲಿಸಿಯನ್ನು ಆಫ್‌ಲೈನ್‌ ಮತ್ತು onlineನಲ್ಲಿ ಖರೀದಿಸಬಹುದು. ಪಾಲಿಸಿ ತೆಗೆದುಕೊಳ್ಳುವವರಿಗೆ ಬೆಸಿಕ್ ಸಮ್ ಅಶ್ಯುರೂಡನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ.  ಸಮ್ ಅಶ್ಯುರ್ಡ್ ಸಿಂಗಲ್ ಪ್ರೀಮಿಯಂನ  1.25 ಪಟ್ಟು ಅಥವಾ ಸಿಂಗಲ್ ಪ್ರೀಮಿಯಂನ 10 ಪಟ್ಟು. ಈ ಸ್ಕೀಮ್ ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಗದಿತ ಸಮಯದ ನಂತರ ನಿಮಗೆ 10 ಲಕ್ಷ ರೂಪಾಯಿ ಸಿಗುತ್ತದೆ.  ಈ ಯೋಜನೆಯಲ್ಲಿ (Scheme) 4 ರೀತಿಯ ಫಂಡ್ ಗಳ ಆಯ್ಕೆ ಇದೆ. Bond Fund, Secured fund, balanced fund, ಮತ್ತು growth fund. ಪಾಲಿಸಿಯನ್ನು ತೆಗೆದುಕೊಳ್ಳುವ ವೇಳೆ ಈ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. 

ಇದನ್ನೂ ಓದಿ: SBI SME Gold Loan : ಎಸ್ ಬಿಐ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲಿನ ಸಾಲ..!

ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರ (Policy holder) ಸಾವು ಸಂಭವಿಸಿದರೆ, ನಾಮಿನಿಗೆ death benefit ಸಿಗಲಿದೆ.  ನಾಮಿನಿ unit fund ಮೌಲ್ಯಕ್ಕೆ ಸಮಾನವಾದ ಮೊತ್ತವನ್ನು ಪಡೆಯುತ್ತಾರೆ. ಎಲ್ಐಸಿ ಇನ್ವೆಸ್ಟ್ಮೆಂಟ್ ಪ್ಲಸ್ ಯೋಜನೆಯಲ್ಲಿ, ಪಾಲಿಸಿಯ 6ನೇ ವರ್ಷದ ನಂತರ  ಭಾಗಶಃ ಮೊತ್ತವನ್ನು ಹಿಂಪಡೆಯಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ, ಪಾಲಿಸಿದಾರ ಅಪ್ರಾಪ್ತರಾಗಿದ್ದರೆ 18 ವರ್ಷದ ನಂತರ ಭಾಗಶಃ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News