LIC Dividend: ಎಲ್ಐಸಿ ಷೇರು ಹೊಂದಿರುವವರಿಗೊಂದು ಸಂತಸದ ಸುದ್ದಿ, ಡಿವಿಡೆಂಡ್ ಘೋಷಣೆ
LIC Share Update: ನೀವೂ ಸಹ ಎಲ್ಐಸಿ ಷೇರುಗಳನ್ನು ಖರೀದಿಸಿದ್ದರೆ, ಸಂತಸದ ಸುದ್ದಿ ನಿಮಗಾಗಿ. ಬಿಎಸ್ಸಿಯಲ್ಲಿ ಪಟ್ಟಿಯಾದ ಬಳಿಕ ಇದೆ ಮೊದಲ ಬಾರಿಗೆ LIC ತನ್ನ ಹಣಕಾಸು ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಭಾರೀ ನಷ್ಟದ ಹೊರತಾಗಿಯೂ, ಕಂಪನಿಯ ಆಡಳಿತ ಮಂಡಳಿಯು ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ.1.50 ಲಾಭಾಂಶವನ್ನು ನೀಡಲು ನಿರ್ಧರಿಸಿದೆ.
LIC Share Update: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ LIC ತನ್ನ ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಫಲಿತಾಂಶದ ಪ್ರಕಾರ, ಕಂಪನಿಯ ಲಾಭವು ಪ್ರಸಕ್ತ ಹಣಕಾಸು ವರ್ಷದ 2021-22 ರ ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ ಮಾರ್ಚ್‌ನಲ್ಲಿ ಕಡಿಮೆಯಾಗಿದೆ. ಇದರೊಂದಿಗೆ, ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಬಳಿಕ ಕಂಪನಿಗೆ ಇದು ಮೊದಲ ಫಲಿತಾಂಶವಾಗಿದೆ. ಇದಾದ ನಂತರವೂ ಎಲ್‌ಐಸಿ ತನ್ನ ಷೇರುದಾರರಿಗೆ ಲಾಭಾಂಶ ನೀಡುವುದಾಗಿ ಘೋಷಿಸಿದೆ.
ಎಲ್‌ಐಸಿ ನೀಡಿದ ಮಾಹಿತಿ ಏನು?
LIC ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭವು ಶೇ. 17 ರಷ್ಟು ಕುಸಿದು 2,409 ಕೋಟಿ ರೂ.ಗೆ ತಲುಪಿದೆ, ಆದರೆ 2021 ರಲ್ಲಿ ಕಂಪನಿಯ ಏಕೀಕೃತ ಲಾಭವು 2,917.33 ಕೋಟಿ ರೂ. ಅಂದರೆ, ಎಲ್‌ಐಸಿಯ ನಿವ್ವಳ ಲಾಭದಲ್ಲಿ ಶೇಕಡಾ 18 ರಷ್ಟು ಭಾರಿ ಇಳಿಕೆಯಾಗಿದೆ. ಆದರೆ, ಇದೆ ಅವಧಿಯಲ್ಲಿ ಕಂಪನಿಯ ಪ್ರೀಮಿಯಂ ಆದಾಯದಲ್ಲಿ ಹೆಚ್ಚಳವಾಗಿದೆ.
ಮಾರ್ಚ್ 2022 ರ ತ್ರೈಮಾಸಿಕ ಫಲಿತಾಂಶದಲ್ಲಿ ಇದು ರೂ 2,372 ಕೋಟಿಯಷ್ಟಿದೆ, ಹಿಂದಿನ ವರ್ಷದ ನಿವ್ವಳ ಲಾಭವಾಗಿರುವ ರೂ 2,893 ಕೋಟಿಗೆ ಇದನ್ನು ಹೋಲಿಸಿದರೆ. LIC ಈ ವರ್ಷ ತನ್ನ IPO ಅನ್ನು ಪ್ರಾರಂಭಿಸಿದೆ ಮತ್ತು ಸರ್ಕಾರವು ಅದರಿಂದ ದೊಡ್ಡ ಲಾಭವನ್ನು ಸೇರಿಸಲು ತಯಾರಿ ನಡೆಸುತ್ತಿದೆ.
ನಿಮಗೆ ಎಷ್ಟು ಲಾಭಾಂಶ ಸಿಗುತ್ತದೆ ಗೊತ್ತಾ?
ಇದರಿಂದ ಷೇರುದಾರರಿಗೆ ಸಿಗುವ ಲಾಭಾಂಶದ ಕುರಿತು ಹೇಳುವುದಾದರೆ, ನಷ್ಟದ ಹೊರತಾಗಿಯೂ ಕೂಡ ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ 10 ರೂಪಾಯಿ ಮುಖಬೆಲೆಯಲ್ಲಿ 1.50 ರೂಪಾಯಿ ಡಿವಿಡೆಂಡ್ ನೀಡಲು ಎಲ್ ಐಸಿ ನಿರ್ಧರಿಸಿದೆ. ಈ ಪ್ರಸ್ತಾವನೆಗೆ ಕಂಪನಿಯ ಮಂಡಳಿಯೂ ಅನುಮೋದನೆ ನೀಡಿದೆ. ಈ ನಿರ್ಧಾರಕ್ಕೆ ಇದೀಗ ಷೇರುದಾರರ ಅನುಮೋದನೆ ಮಾತ್ರ ಬಾಕಿ ಉಳಿದಿದೆ. ಇಂದು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಾನವನ್ನು ಗಮನಿಸಿದರೆ, ಸೋಮವಾರ, ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 837.05 ಪರ್ಸೆಂಟ್‌ನಲ್ಲಿ 1.89 ರಷ್ಟು ಏರಿಕೆ ಕಂಡಿವೆ.
ಇದನ್ನೂ ಓದಿ-Post Office ಜಬರ್ದಸ್ತ್ ಯೋಜನೆ, ಒಂದೇ ವರ್ಷದಲ್ಲಿ ಬ್ಯಾಂಕ್ ಗಳಿಗಿಂತ ಹೆಚ್ಚು ಲಾಭ, ಇಲ್ಲಿದೆ ಡೀಟೇಲ್ಸ್
ಎಲ್ಐಸಿ ಷೇರುಗಳು ಐಪಿಓ ಬಿಡುಗಡೆಯ ಬೆಲೆಗೆ ಹೋಲಿಸಿದರೆ ಇದುವರೆಗೆ ಷೇರುಗಳ ಬೆಲೆ ಸುಮಾರು ಶೇ. 15 ರಷ್ಟು ಕುಸಿದಿದೆ. ಆದರೆ ಷೇರುದಾರರು ತಮ್ಮ ಹೂಡಿಕೆಯಿಂದ ಲಾಭಾಂಶವನ್ನು ನಿರೀಕ್ಷಿಸಿದರು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.