Fake Note Alert: ನಿಮ್ಮ ಜೇಬಿನಲ್ಲಿರುವ 500 ರೂ.ಗಳ ನೋಟು ನಕಲಿಯಾಗಿಲ್ಲವಲ್ಲ! ಹೇಗೆ ಗುರುತಿಸಬೇಕು? ಎಂದು ಹೇಳಿದ ಆರ್ಬಿಐ

Fake Note Alert: ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಸಣ್ಣಪುಟ್ಟ ಮುಂಜಾಗ್ರತೆಯನ್ನು ವಹಿಸುವ ಮೂಲಕ ನಕಲಿ ನೋಟುಗಳ ಬಲೆಯಲ್ಲಿ ಸಿಲುಕಿಕೊಳ್ಳುವುದರಿಂದ ಪಾರಾಗಬಹುದು.  

Written by - Nitin Tabib | Last Updated : May 30, 2022, 06:20 PM IST
  • ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-22 ರ ಹಣಕಾಸು ವರ್ಷದ ತನ್ನ ವಾರ್ಷಿಕ ವರದಿಯನ್ನು ಮಂಡಿಸಿದೆ.
  • ಈ ವರದಿಯ ಪ್ರಕಾರ, ದೇಶದಲ್ಲಿ 500 ಮತ್ತು 2000 ರೂಪಾಯಿಗಳ ನಕಲಿ ನೋಟುಗಳ ಸಂಖ್ಯೆಯಲ್ಲಿ ವ್ಯಾಪಕ ಏರಿಕೆ ಕಂಡುಬಂದಿದೆ ಎಂದು ಹೇಳಿದೆ.
  • 500 ರೂಪಾಯಿಗಳ ನಕಲಿ ನೋಟುಗಳ ಸಂಖ್ಯೆಯ ಕುರಿತು ಹೇಳುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಇದು ಶೇ. 102 ರಷ್ಟು ಹೆಚ್ಚಳವನ್ನು ದಾಖಲಿಸಿದೆ.
Fake Note Alert: ನಿಮ್ಮ ಜೇಬಿನಲ್ಲಿರುವ 500 ರೂ.ಗಳ ನೋಟು ನಕಲಿಯಾಗಿಲ್ಲವಲ್ಲ! ಹೇಗೆ ಗುರುತಿಸಬೇಕು? ಎಂದು ಹೇಳಿದ ಆರ್ಬಿಐ title=
Fake Currency Identification

Fake Note Alert: ಭಾರತೀಯ ರಿಸರ್ವ್ ಬ್ಯಾಂಕ್ (RBI) 2021-22 ರ ಹಣಕಾಸು ವರ್ಷದ ತನ್ನ ವಾರ್ಷಿಕ ವರದಿಯನ್ನು ಮಂಡಿಸಿದೆ. ಈ ವರದಿಯ ಪ್ರಕಾರ, ದೇಶದಲ್ಲಿ 500 ಮತ್ತು 2000 ರೂಪಾಯಿಗಳ ನಕಲಿ ನೋಟುಗಳ ಸಂಖ್ಯೆಯಲ್ಲಿ ವ್ಯಾಪಕ ಏರಿಕೆ ಕಂಡುಬಂದಿದೆ ಎಂದು ಹೇಳಿದೆ. 500 ರೂಪಾಯಿಗಳ ನಕಲಿ ನೋಟುಗಳ ಸಂಖ್ಯೆಯ ಕುರಿತು ಹೇಳುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ,  ಇದು ಶೇ. 102 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಆದರೆ, ಸ್ವಲ್ಪ ಎಚ್ಚರಿಕೆ ವಹಿಸಿದರೆ ನೀವೂ ಕೂಡ ನಕಲಿ ನೋಟುಗಳ ಬಲೆಯಿಂದ ಪಾರಾಗಬಹುದು. ನಕಲಿ ನೋಟುಗಳನ್ನು ಗುರುತಿಸಲು ಆರ್‌ಬಿಐ ಒಟ್ಟು 17 ಅಂಶಗಳ ಪಟ್ಟಿಯನ್ನು ಹಂಚಿಕೊಂಡಿದೆ, ಅದರ ಸಹಾಯದಿಂದ ನೀವು ನಕಲಿ ನೋಟುಗಳ ಹಾವಳಿಯನ್ನು ತಪ್ಪಿಸಬಹುದು 

ನಕಲಿ ನೋಟುಗಳು ಚಲನೆ ಎರಡು ಪಟ್ಟು ಹೆಚ್ಚಾಗಿದೆ
ದೇಶದಲ್ಲಿ ಒಟ್ಟು ನಕಲಿ ನೋಟುಗಳ ಸಂಖ್ಯೆಯ ಕುರಿತು ಹೇಳುವುದಾದರೆ, ಆರ್‌ಬಿಐನ ಇತ್ತೀಚಿನ ವರದಿಯಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ 500 ರೂಪಾಯಿಗಳ ನಕಲಿ ನೋಟುಗಳಲ್ಲಿ ಶೇ. 101.9 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ. ಇದೇ ಅವಧಿಯಲ್ಲಿ , 2000 ರೂಪಾಯಿಗಳ ನಕಲಿ ನೋಟುಗಳಲ್ಲಿ ಶೇ. 54.16 ರಷ್ಟು ಹೆಚ್ಚಳವಾಗಿದೆ. ಮಾರ್ಚ್ 2022 ರ ಹೊತ್ತಿಗೆ, ದೇಶದ ಒಟ್ಟು ನಕಲಿ ನೋಟುಗಳಲ್ಲಿ 500 ಮತ್ತು 2000 ರೂ ನೋಟುಗಳ ಪಾಲು ಶೇ. 87.1 ರಷ್ಟಿದೆ. ಕಳೆದ ವರ್ಷ ಇದು ಶೇ 85.7ರಷ್ಟಿತ್ತು.

500 ರೂ.ಗಳ ಅಸಲಿ ಮತ್ತು ನಕಲಿ ನೋಟನ್ನು ಹೇಗೆ ಗುರುತಿಸಬೇಕು? 
ಕೈಗೆ 500 ರೂಪಾಯಿ ನೋಟು ತೆಗೆದುಕೊಳ್ಳುವ ಮುನ್ನ ಅದು ನಕಲಿಯಾಗಿಲ್ಲವಲ್ಲ ಎಂಬುದನ್ನು ಗುರುತಿಸುವುದು ತುಂಬಾ ಮುಖ್ಯ. ನೋಟು ಗುರುತಿಸಲು ಆರ್ ಬಿಐ 17 ಚಿಹ್ನೆಗಳನ್ನು ನೀಡಿದೆ. ಈ ಚಿಹ್ನೆಗಳನ್ನು ಗುರುತಿಸುವ ಮೂಲಕ, ನೀವು 500 ರೂಪಾಯಿ ಅಥವಾ 2000 ರೂಪಾಯಿಗಳ ನಿಜವಾದ ಮತ್ತು ನಕಲಿ ನೋಟುಗಳನ್ನು ಸಹ ಗುರುತಿಸಬಹುದು. ಅವುಗಳ ನಡುವಿನ ವ್ಯತ್ಯಾಸವು ತುಂಬಾ ಚಿಕ್ಕದಾಗಿದೆ, ಆದರೆ ನೀವು ಗಮನ ಹರಿಸಿದರೆ ಅದನ್ನು ಗುರುತಿಸುವುದು ನಿಮಗೆ ತುಂಬಾ ಸುಲಭವಾಗಲಿದೆ.

ಮೂಲ 500 ರೂಪಾಯಿ ನೋಟನ್ನು ಗುರುತಿಸುವುದು ಹೇಗೆ?
1. ನೋಟನ್ನು ದೀಪದ ಬೆಳಕಿಗೆ ಹಿಡಿದರೆ ಮೇಲಿನ ಚಿತ್ರದಲ್ಲಿ 1 ಸೂಚಿಸಲಾಗಿರುವ ಸ್ಥಳದಲ್ಲಿ 500 ಬರೆಯಲಾಗಿದೆ.
2. ನೋಟನ್ನು 45 ಡಿಗ್ರಿ ಕೋನದಿಂದ ಕಣ್ಣಿನ ಮುಂದೆ ಹಿಡಿದಾಗ, 2 ಸೂಚಿಸಲಾಗಿರುವ ಸ್ಥಳದಲ್ಲಿ 500 ಬರೆಯಲಾಗಿದೆ.
3. 3 ಸೂಚಿಸಲಾಗಿರುವ ಸ್ಥಳದಲ್ಲಿ ದೇವನಾಗರಿಯಲ್ಲಿ ಬರೆದ 500 ಕಾಣಿಸುತ್ತದೆ.
4. ಮಹಾತ್ಮ ಗಾಂಧಿಯವರ ಚಿತ್ರವನ್ನು ಬಲಭಾಗದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ-7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಪುನಃ ಸಿಗಲಿದೆ ಹಳೆ ಪೆನ್ಷನ್ ಲಾಭ, ಸರ್ಕಾರದ ಅದ್ಭುತ ಪ್ಲಾನ್ ಇಲ್ಲಿದೆ

5. ಭಾರತ ಮತ್ತು India ಅಕ್ಷರಗಳನ್ನು ನಮೂದಿಸಲಾಗಿದೆ.
6. ನೀವು ನೋಟನ್ನು ಲಘುವಾಗಿ ಬಾಗಿಸಿದರೆ, ಸಿಕ್ಯೋರಿಟಿ ಥ್ರೆಡ್ ಹಸಿರು ಬಣ್ಣದಿಂದ ಇಂಡಿಗೊ ಬಣ್ಣಕ್ಕೆ  ಬದಲಾಗುವುದನ್ನು ನೀವು ಗಮನಿಸಬಹುದು. 
7. ಹಳೆಯ ನೋಟಿಗೆ ಹೋಲಿಸಿದರೆ, ರಾಜ್ಯಪಾಲರ ಸಹಿ, ಗ್ಯಾರಂಟಿ ಷರತ್ತು, ಭರವಸೆ ಷರತ್ತು ಮತ್ತು ಆರ್‌ಬಿಐ ಲೋಗೋ ಬಲಭಾಗಕ್ಕೆ ಬದಲಾಗಿದೆ.
8.  8 ಸೂಚಿಸಿರುವ ಜಾಗದಲ್ಲಿ  ಮಹಾತ್ಮಾ ಗಾಂಧಿಯವರ ಚಿತ್ರವಿದೆ ಮತ್ತು ಎಲೆಕ್ಟ್ರೋಟೈಪ್ ವಾಟರ್‌ಮಾರ್ಕ್ ಸಹ ಗೋಚರಿಸುತ್ತದೆ.
9. ಮೇಲ್ಭಾಗದಲ್ಲಿ ಎಡಭಾಗ ಮತ್ತು ಕೆಳಭಾಗದಲ್ಲಿ ಬಲಭಾಗದ ಸಂಖ್ಯೆಗಳು ಎಡದಿಂದ ಬಲಕ್ಕೆ ದೊಡ್ಡದಾಗುತ್ತವೆ.
10. 10 ಸೂಚಿಸಿರುವ ಜಾಗದಲ್ಲಿ  ಬರೆದಿರುವ 500 ಸಂಖ್ಯೆಯ ಬಣ್ಣ ಬದಲಾಗುತ್ತದೆ. ಇದರ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
11. ಬಲಭಾಗದ ಮೂಲೆಯಲ್ಲಿ ಅಶೋಕ ಸ್ಥಂಭವಿದೆ.

ಇದನ್ನೂ ಓದಿ-Post Office ಜಬರ್ದಸ್ತ್ ಯೋಜನೆ, ಒಂದೇ ವರ್ಷದಲ್ಲಿ ಬ್ಯಾಂಕ್ ಗಳಿಗಿಂತ ಹೆಚ್ಚು ಲಾಭ, ಇಲ್ಲಿದೆ ಡೀಟೇಲ್ಸ್

12. ಬಲಭಾಗದಲ್ಲಿ  ವೃತ್ಬಾತಾಕಾರದ ಬಾಕ್ಸ್ ಮೇಲೆ 500 ಬರೆಯಲಾಗಿದೆ, ಬಲ ಮತ್ತು ಎಡಭಾಗದಲ್ಲಿ 5 ಬ್ಲೀಡ್ ಲೈನ್‌ಗಳು ಮತ್ತು ಅಶೋಕ ಸ್ತಂಭದ ಲಾಂಛನ, ರಫಲ್ ಪ್ರಿಂಟ್‌ನಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿದೆ.
13. ನೋಟು ಮುದ್ರಣದ ವರ್ಷವನ್ನು ಬರೆಯಲಾಗಿದೆ.
14. ಸ್ವಚ್ಛ ಭಾರತದ ಲೋಗೋವನ್ನು ಘೋಷಣೆಯೊಂದಿಗೆ ಮುದ್ರಿಸಲಾಗಿದೆ.
15. ಕೇಂದ್ರ ಭಾಗದಲ್ಲಿ ಭಾಷಾ ಫಲಕವಿದೆ.
16. ಭಾರತೀಯ ಧ್ವಜದೊಂದಿಗೆ ಕೆಂಪು ಕೋಟೆಯ ಚಿತ್ರ ಮುದ್ರಣವಿದೆ.
17. ದೇವನಾಗರಿಯಲ್ಲಿ 500 ಮುದ್ರಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News