LIC HFL: ಗೃಹ ಸಾಲ ಪಡೆದವರಿಗೆ ಭರ್ಜರಿ ಸಿಹಿ ಸುದ್ದಿ: LIC ಹೌಸಿಂಗ್ ಫೈನಾನ್ಸ್ 6 EMI ಮನ್ನಾ!
ವೇತನದಾರ ಸಾಲಗಾರರು, ಡಿಫೈನ್ಡ್ ಬೆನಿಫಿಟ್ ಪೆನ್ಷನ್ ಸ್ಕೀಂ ಪಿಂಚಣಿದಾರರಿಗೆ ಯೋಜನೆ ಅನ್ವಯ
ಬೆಂಗಳೂರು: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ನಲ್ಲಿ ಗೃಹ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ನಲ್ಲಿ ಗೃಹ ವರಿಷ್ಠ ವಿಶೇಷ ಗೃಹ ಸಾಲ ಯೋಜನೆ ಸಾಲ ಪಡೆದುಕೊಂಡವರಿಗೆ 6 ಇಎಂಐ ಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ವೇತನದಾರ ಸಾಲಗಾರರು, ಡಿಫೈನ್ಡ್ ಬೆನಿಫಿಟ್ ಪೆನ್ಷನ್ ಸ್ಕೀಂ(Defined Benefit Pension Scheme) ಪಿಂಚಣಿದಾರರಿಗೆ ಯೋಜನೆ ಅನ್ವಯವಾಗಲಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗೃಹ ವರಿಷ್ಠ ವಿಶೇಷ ಗೃಹಸಾಲ ಯೋಜನೆಯಡಿ ಸಾಲ ಪಡೆದುಕೊಂಡಿದ್ದರೆ 37, 38, 73, 74 ಹಾಗೂ 121 ಮತ್ತು 122 ನೇ ಇಎಂಐ ಮನ್ನಾ ಮಾಡಲಾಗುವುದು.
SBI Alert : ಮೋಸದ ಜಾಲವಿದೆ ಹಣದ ಆಸೆಗೆ ಮರುಳಾಗಬೇಡಿ..!
ಅಡಮಾನ ಸಾಲ ನೀಡುವ ಸಂಸ್ಥೆಯಾದ ಎಲ್‌ಐಸಿ ಹೌಸಿಂಗ್ ಫೈನಾನ್ಸ್(LIC Housing Finance) ಈ ಬಗ್ಗೆ ಮಾಹಿತಿ ನೀಡಿದ್ದು, ಸೇವೆಯಲ್ಲಿರುವ ಅಥವಾ ನಿವೃತ್ತರಾದ ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ, ರಕ್ಷಣೆ, ರೈಲ್ವೆ, ಬ್ಯಾಂಕ್ ಮೊದಲಾದ ವಲಯಗಳಲ್ಲಿ ಇರುವವರು, PSU ಇನ್ಸೂರೆನ್ಸ್ ದಾರರಿಗೆ ಇತರೆ ಯಾರು ಅರ್ಹರೋ ಅವರಿಗೆ ಯೋಜನೆ ಅನ್ವಯವಾಗುತ್ತದೆ.
Tax Saving: 'ತೆರಿಗೆ ಉಳಿಸಲು' ಉದ್ಯೋಗಿಗಳಿಗೆ ತಿಳಿದಿರಲೆಬೇಕು ಈ ಸಂಗತಿಗಳನ್ನ!
ಅರ್ಜಿ ಸಲ್ಲಿಸುವ ಸಮಯದಲ್ಲಿ ವಯಸ್ಸು 65 ವರ್ಷಗಳವರೆಗೆ ಇರಬಹುದು. ಸಾಲದ ಅವಧಿಯು 80 ವರ್ಷ ಅಥವಾ ಗರಿಷ್ಠ 30 ವರ್ಷಗಳವರೆಗೆ, ಯಾವುದು ಮೊದಲಿನದ್ದಾಗಿದೆಯೋ ಅದನ್ನು ಪರಿಗಣಿಸುವುದು. ಸಾಲದ ಉದ್ದೇಶವು ವಸತಿ ಫ್ಲ್ಯಾಟ್‌ಗಳು ಅಥವಾ ಮನೆ(House)ಗಳ ಖರೀದಿ ಅಥವಾ ನಿರ್ಮಾಣಕ್ಕಾಗಿ ಮತ್ತು ಅಸ್ತಿತ್ವದಲ್ಲಿರುವ ಆಸ್ತಿಗಳ ರಿಪೇರಿ ಅಥವಾ ವಿಸ್ತರಣೆಯಾಗಿರಬಹುದಾಗಿದೆ.
ಕಡಿಮೆ ಬಡ್ಡಿ ದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ ಗಳು
ಹೆಚ್ಚಿನ ಸಾಲದ ಅರ್ಹತೆಗಾಗಿ, ಅರ್ಜಿದಾರರು ತಮ್ಮ ಗಳಿಸುವ ಮಕ್ಕಳೊಂದಿಗೆ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಪಿಎಂಎವೈ, ಸಿಎಲ್‌ಎಸ್‌ಎಸ್ ಮಾನದಂಡಗಳನ್ನು ಪೂರೈಸುವ ಸಾಲಗಾರರು 2.67 ಲಕ್ಷ ರೂ.ವರೆಗೆ ಬಡ್ಡಿ(Interest) ಸಹಾಯಧನಕ್ಕೆ ಅರ್ಹರಾಗುತ್ತಾರೆ, ಇದಕ್ಕೆ ಬಡ್ಡಿ ಉಳಿತಾಯದ ರೂಪದಲ್ಲಿ ಪ್ರಯೋಜನ ಪಡೆಯಬಹುದು ಎನ್ನಲಾಗಿದೆ.
LPG Gas Cylinder: 819 ರೂ. ಗ್ಯಾಸ್ ಸಿಲಿಂಡರ್ ಅನ್ನು 119 ರೂ.ಗೆ ಖರೀದಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.