SBI Alert : ಮೋಸದ ಜಾಲವಿದೆ ಹಣದ ಆಸೆಗೆ ಮರುಳಾಗಬೇಡಿ..!

 ಮೋಸದ ಮೂಲಕ ಗ್ರಾಹಕರ ಖಾತೆಯಿಂದ ಹಣವನ್ನು ತೆಗೆದಿರುವ ಬಗ್ಗೆ ಬ್ಯಾಂಕ್ ಗೆ ದೂರು ಬಂದಿರುವ ಬಗ್ಗೆ ಬ್ಯಾಂಕ್ ಹೇಳಿದೆ. . ಈ ಎಲ್ಲ ಪ್ರಕರಣಗಳ ಬಗ್ಗೆ ಎಸ್‌ಬಿಐ ತನಿಖೆ ನಡೆಸುತ್ತಿದೆ. ಆದರೆ ಗ್ರಾಹಕರು ಸಹ  ಜಾಗರೂಕರಾಗಿರಬೇಕು ಎಂದು ಬ್ಯಾಂಕ್ ಹೇಳಿದೆ.  

Written by - Ranjitha R K | Last Updated : Mar 25, 2021, 04:23 PM IST
  • ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI
  • ಮೋಸಗಾರರಿಂದ ಜಾಗೃಕರಾಗಿರುವಂತೆ ಸೂಚನೆ
  • ಎಚ್ಚರ ತಪ್ಪಿದರೆ ಖಾಲಿಯಾಗಲಿದೆ ಖಾತೆ
SBI Alert : ಮೋಸದ ಜಾಲವಿದೆ ಹಣದ ಆಸೆಗೆ ಮರುಳಾಗಬೇಡಿ..!  title=
ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI (file photo)

ದೆಹಲಿ: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ವಂಚಕರು ಎಸ್‌ಬಿಐ ಗ್ರಾಹಕರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‌ಬಿಐ ಹೇಳಿದೆ.  ಅದ್ದರಿಂದ ಬಹಳ ಜಾಗರೂಕರಾಗಿರುವಂತೆ ತನ್ನ ಗ್ರಾಹಕರನ್ನು ಎಚ್ಚರಿಸಿದೆ.  ಎಸ್‌ಬಿಐ ಕಾಲಕಾಲಕ್ಕೆ ಇಂತಹ ಎಚ್ಚರಿಕೆಗಳನ್ನು ನೀಡುತ್ತಲೇ ಇದೆ.  

ಟ್ವಿಟರ್‌ ಮೂಲಕ ಎಸ್‌ಬಿಐ ನೀಡಿದೆ ಎಚ್ಚರಿಕೆ : 
ಎಸ್‌ಬಿಐ (SBI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದೆ. ಮೋಸದ ಮೂಲಕ ಗ್ರಾಹಕರ ಖಾತೆಯಿಂದ ಹಣವನ್ನು ತೆಗೆದಿರುವ ಬಗ್ಗೆ ಬ್ಯಾಂಕ್ ಗೆ (Bank) ದೂರು ಬಂದಿರುವ ಬಗ್ಗೆ ಬ್ಯಾಂಕ್ ಹೇಳಿದೆ. . ಈ ಎಲ್ಲ ಪ್ರಕರಣಗಳ ಬಗ್ಗೆ ಎಸ್‌ಬಿಐ ತನಿಖೆ ನಡೆಸುತ್ತಿದೆ. ಆದರೆ ಗ್ರಾಹಕರು ಸಹ  ಜಾಗರೂಕರಾಗಿರಬೇಕು ಎಂದು ಬ್ಯಾಂಕ್ ಹೇಳಿದೆ.  ಪೂರ್ಣ ಮಾಹಿತಿ ಪಡೆಯದೆ ಯಾವುದೇ ದುರಾಸೆಗೆ ಬಿದ್ದು, ಎಸ್‌ಎಂಎಸ್ (SMS) ಅಥವಾ ಮೊಬೈಲ್ ಲಿಂಕ್ (MObile link) ಅನ್ನು ಕ್ಲಿಕ್ ಮಾಡದಂತೆ ಬ್ಯಾಂಕ್ ಗ್ರಾಹಕರಲ್ಲಿ ಮನವಿ ಮಾಡಿದೆ.  ರಿವಾರ್ಡ್ ಪಾಯಿಂಟ್‌ನ ಹೆಸರಿನಲ್ಲಿ, ಎಸ್‌ಬಿಐ ಗ್ರಾಹಕರಿಗೆ ಫೋನ್ ಮತ್ತು ಎಸ್‌ಎಂಎಸ್ ಗಳನ್ನೂ ಮಾಡುತ್ತಿರುವ ಅಂಶ  ಬೆಳೆಕಿಗೆ ಬಂದಿದೆ ಎಂದು ಬ್ಯಾಂಕ್ ಹೇಳಿದೆ. ಈ ಹಿನ್ನೆಲೆಯಲ್ಲಿ ತಮ್ಮ ಎಟಿಎಂ ಪಿನ್, ಒನ್ OTP ಅಥವಾ CVV ಅನ್ನು ಯಾರೊಂದಿಗೂ ಹಂಚಿಕೊಳ್ಳಅಂತೆ ಬ್ಯಾಂಕ್ ಸೂಚನೆ ನೀಡಿದೆ.   

ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ ಗಳು

ನಕಲಿ ಎಸ್‌ಎಂಎಸ್ ಬಗ್ಗೆ ಎಚ್ಚರ :
ಕೇವಲ ಐದು ನಿಮಿಷಗಳಲ್ಲಿ ಎರಡು ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು ಎನ್ನುವಂಥ ಮೆಸೇಜ್ ಗಳನ್ನೂ (Mesage) ಗ್ರಾಹಕರಿಗೆ ಬರುತ್ತಿದೆ.  ಅಂಥಹ ಯಾವುದೇ ಮೆಸೇಜ್ ಗಳನ್ನೂ ಬ್ಯಾಂಕ್ ಕಳುಹಿಸುತ್ತಿಲ್ಲ. ಹಾಗಾಗಿ ಆ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಅಲ್ಲದೆ, ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ಕಳುಹಿಸುವ  ಇ ಮೇಲ್ ಅಥವಾ ಮೆಸೇಜ್ ಗಳಿಗೂ ಉತ್ತರಿಸದಂತೆ ಬ್ಯಾಂಕ್ ಮನವಿ ಮಾಡಿದೆ. ಬ್ಯಾಂಕ್  ಯಾವುದೇ ಕಾರಣಕ್ಕೂ ಗ್ರಾಹಕರಿಗೆ (customers) ಮೆಸೇಜ್ ಅಥವಾ ಇ ಮೇಲ್ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಎಸ್‌ಬಿಐ ಕಾಲಕಾಲಕ್ಕೆ ಎಚ್ಚರಿಸುತ್ತಲೇ ಇರುತ್ತದೆ :
ಎಸ್‌ಬಿಐ ತನ್ನ ಗ್ರಾಹಕರಿಗೆ ಟ್ವಿಟರ್ (twitter) ಮತ್ತು ಎಸ್‌ಎಂಎಸ್ ಮೂಲಕ ಹಲವು ಬಾರಿ ಎಚ್ಚರಿಕೆ ನೀಡಿದೆ. ಏನೇ ಮಾಹಿತಿ ಬೇಕಾಗಿದ್ದಲ್ಲಿ ಬ್ಯಾಂಕ್ ನ ಅಧಿಕೃತ  ವೆಬ್‌ಸೈಟ್ www.sbi.co.in ನಲ್ಲಿ ಪಡೆದುಕೊಳ್ಳುವಂತೆ ಹೇಳಿದೆ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ  (social media) ಎಸ್‌ಬಿಐನ ಉದ್ಯೋಗ ಜಾಹೀರಾತು  ಇದ್ದರೆ ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಖಚಿತ ಪಡಿಸಿಕೊಳ್ಳುವಂತೆ ಸೂಚಿಸಿದೆ.  

ಇದನ್ನೂ ಓದಿ: ATM ವಹಿವಾಟ ವಿಫಲವಾದ್ರೆ ₹ 25 ದಂಡ: ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಫೈನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News