LIC Pension Scheme: ಒಮ್ಮೆ ಹಣ ಠೇವಣಿ ಮಾಡಿದರೆ ಜೀವನಪೂರ್ತಿ ಸಿಗಲಿದೆ ಪಿಂಚಣಿ
ಇದು ಲಿಂಕ್ ಮಾಡದ ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆಯಡಿ ಪಾಲಿಸಿದಾರರು ಪ್ರೀಮಿಯಂ ಅನ್ನು ಒಮ್ಮೆ ಮಾತ್ರ ಪಾವತಿಸಬೇಕಾಗುತ್ತದೆ.
ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಸರಳ ಪಿಂಚಣಿ ಯೋಜನೆ(LIC New Pension Scheme)ಯನ್ನು ಪ್ರಾರಂಭಿಸಿದೆ. ಇದು ಲಿಂಕ್ ಮಾಡದ ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆಯಡಿ ಪಾಲಿಸಿದಾರರು ಪ್ರೀಮಿಯಂ ಅನ್ನು ಒಮ್ಮೆ ಮಾತ್ರ ಪಾವತಿಸಬೇಕಾಗುತ್ತದೆ. ಇದರ ನಂತರ ಪಾಲಿಸಿದಾರರು ಇಡೀ ಜೀವನಪೂರ್ತಿ ಪಿಂಚಣಿ ಪಡೆಯುತ್ತಾರೆ.
ಇದು ವಿಮಾ ನಿಯಂತ್ರಕ IRDAIನ ಮಾರ್ಗಸೂಚಿಗಳ ಪ್ರಕಾರ ತಕ್ಷಣದ ವರ್ಷಾಶನ ಯೋಜನೆಯಾಗಿದೆ. ಈ ಯೋಜನೆಯು ಎಲ್ಲಾ ಜೀವ ವಿಮಾದಾರರಿಗೆ ಒಂದೇ ರೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿದೆ ಎಂದು LIC ಹೇಳಿದೆ. ಎಲ್ಐಸಿಯ ಈ ಯೋಜನೆ(LIC Pension Scheme)ಯಡಿ ಪಾಲಿಸಿದಾರರು ಲಭ್ಯವಿರುವ 2 ವರ್ಷಾಶನ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ಈ ಯೋಜನೆಯಲ್ಲಿ ಪಾಲಿಸಿಯ ಪ್ರಾರಂಭದ ದಿನಾಂಕದಿಂದ 6 ತಿಂಗಳ ನಂತರವೂ ಸಾಲವನ್ನು ಪಡೆಯಬಹುದು.
ಇದನ್ನೂ ಓದಿ: ಒಂದು Missed Call ನಲ್ಲಿ ಮನೆ ಬಾಗಿಲಿಗೆ ಬರುತ್ತೆ LPG ಸಿಲಿಂಡರ್, ತಕ್ಷಣ ಈ ನಂಬರ್ ಸೇವ್ ಮಾಡಕೊಳ್ಳಿ!
‘ಸರಳ ಪಿಂಚಣಿ ಯೋಜನೆ’ಯ ಮೊದಲ ಆಯ್ಕೆ
‘ಎಲ್ಐಸಿ ಸರಳ ಪಿಂಚಣಿ’ ಯೋಜನೆ(LIC Saral Pension Scheme)ಯನ್ನು ಆಯ್ಕೆ ಮಾಡಲು 2 ಆಯ್ಕೆಗಳಿವೆ. ಮೊದಲನೆಯದಾಗಿ ಖರೀದಿ ಬೆಲೆಯ 100 ರಿಟರ್ನ್‌ನೊಂದಿಗೆ ಲೈಫ್ ಆನ್ಯುಟಿ(Life Annuity With 100 Return). ಈ ಪಿಂಚಣಿ ಏಕ ಜೀವನಕ್ಕಾಗಿ ಅಂದರೆ ಪಿಂಚಣಿಯನ್ನು ಸಂಗಾತಿಗಳಲ್ಲಿ ಒಬ್ಬರಿಗೆ ಲಿಂಕ್ ಮಾಡಲಾಗುತ್ತದೆ. ಪಿಂಚಣಿದಾರರು ಜೀವಂತವಾಗಿರುವವರೆಗೆ ಅವರು ಪಿಂಚಣಿ ಪಡೆಯುತ್ತಾರೆ. ಇವರ ಮರಣದ ನಂತರ ಪಾಲಿಸಿಯನ್ನು ತೆಗೆದುಕೊಳ್ಳಲು ಪಾವತಿಸಿದ ಮೂಲ ಪ್ರೀಮಿಯಂ ಅನ್ನು ಅವರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
‘ಸರಳ ಪಿಂಚಣಿ ಯೋಜನೆ’ಯ ಮತ್ತೊಂದು ಆಯ್ಕೆ
2ನೇ ಆಯ್ಕೆಯನ್ನು ಜಂಟಿ ಜೀವನಕ್ಕಾಗಿ ನೀಡಲಾಗಿದೆ. ಇದರಲ್ಲಿ ಪತಿ-ಪತ್ನಿ ಇಬ್ಬರಿಗೂ ಪಿಂಚಣಿ(Retirement Pension)ಯನ್ನು ನೀಡಲಾಗುತ್ತದೆ. ಇದರಲ್ಲಿ ಸಂಗಾತಿಯು ಕೊನೆಯವರೆಗೂ ಬದುಕಿದವರು ಪಿಂಚಣಿ ಪಡೆಯುವುತ್ತಾರೆ. ಒಬ್ಬ ವ್ಯಕ್ತಿಯು ಬದುಕಿರುವಾಗ ಎಷ್ಟು ಪಿಂಚಣಿ ಪಡೆಯುತ್ತಾರೋ ಅದೇ ಪಿಂಚಣಿ ಮೊತ್ತವು ಅವರಲ್ಲಿ ಒಬ್ಬರ ಮರಣದ ನಂತರ ಜೀವನಪರ್ಯಂತ ಇನ್ನೊಬ್ಬ ಸಂಗಾತಿಯಿಂದ ಪಡೆಯುತ್ತಲೇ ಇರುತ್ತಾರೆ. 2ನೇ ಪಿಂಚಣಿದಾರರು ಸಹ ಮೃತಪಟ್ಟಾಗ ನಾಮಿನಿಗೆ ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಪಾವತಿಸಿದ ಮೂಲ ಬೆಲೆಯನ್ನು ನೀಡಲಾಗುತ್ತದೆ.
ಇದು ತಕ್ಷಣದ ವರ್ಷಾಶನ ಯೋಜನೆಯಾಗಿದೆ
LICಯ ಈ ಯೋಜನೆಯು ತಕ್ಷಣದ ವರ್ಷಾಶನ ಯೋಜನೆಯಾಗಿದೆ. ಅಂದರೆ ಪಾಲಿಸಿ ತೆಗೆದುಕೊಂಡ ತಕ್ಷಣ ಪಿಂಚಣಿ ಆರಂಭವಾಗುತ್ತದೆ. ಪಿಂಚಣಿದಾರರು ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವರ್ಷಕ್ಕೊಮ್ಮೆ ಪಿಂಚಣಿ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಯಾವುದೇ ಆಯ್ಕೆಯನ್ನು ಆರಿಸಿಕೊಂಡರೂ ಪಿಂಚಣಿಯು ಅದೇ ರೀತಿ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: Income Tax Savings: 10 ಲಕ್ಷ ವೇತನ ಇದ್ದರೂ ಕೂಡ 1 ರೂ. ತೆರಿಗೆ ಪಾವತಿಸಬೇಕಿಲ್ಲ, ಇಲ್ಲಿದೆ ಲೆಕ್ಕಾಚಾರ
ಹೇಗೆ ಖರೀದಿಸುವುದು..?
ನೀವು ಈ ಯೋಜನೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. www.licindia.in ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಬಹುದು.
ಯೋಜನೆಯಲ್ಲಿ ಕನಿಷ್ಠ ವರ್ಷಾಶನವು ವಾರ್ಷಿಕ 12,000 ರೂ. ಕನಿಷ್ಠ ಖರೀದಿ ಬೆಲೆಯು ವಾರ್ಷಿಕ ಮೋಡ್, ಆಯ್ಕೆ ಮಾಡಿದ ಆಯ್ಕೆ ಮತ್ತು ಪಾಲಿಸಿ ತೆಗೆದುಕೊಳ್ಳುವವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.
ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಖರೀದಿ ಬೆಲೆಯ ಮಿತಿ ಇಲ್ಲ.
40 ವರ್ಷದಿಂದ 80 ವರ್ಷ ವಯಸ್ಸಿನವರು ಈ ಯೋಜನೆಯನ್ನು ಖರೀದಿಸಬಹುದು.
ನೀವು ಮಾಸಿಕ ಪಿಂಚಣಿಯ ಲಾಭವನ್ನು ಪಡೆಯಲು ಬಯಸಿದರೆ ತಿಂಗಳಿಗೆ ಕನಿಷ್ಠ 1 ಸಾವಿರ ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ಅದೇ ರೀತಿ ತ್ರೈಮಾಸಿಕ ಪಿಂಚಣಿಗೆ ತಿಂಗಳಿಗೆ ಕನಿಷ್ಠ 3 ಸಾವಿರ ರೂ. ಹೂಡಿಕೆ ಮಾಡಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.