LIC Aadhaar Shila scheme: 29 ರೂ ಹೂಡಿಕೆ ಮಾಡಿದರೆ ಸಿಗಲಿದೆ 4 ಲಕ್ಷ ರೂಪಾಯಿ, LIC ತಂದಿದೆ ಹೊಸ ಪ್ಲಾನ್
LIC Aadhaar Shila scheme : ಭಾರತೀಯ ಜೀವ ವಿಮಾ ನಿಗಮ (LIC) ಕಾಲಕಾಲಕ್ಕೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಈಗ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ LIC ವಿಶೇಷ ಯೋಜನೆಯನ್ನು ತಂದಿದೆ.
ನವದೆಹಲಿ : LIC Aadhaar Shila scheme : ಭಾರತೀಯ ಜೀವ ವಿಮಾ ನಿಗಮ (LIC) ಕಾಲಕಾಲಕ್ಕೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಈಗ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ LIC ವಿಶೇಷ ಯೋಜನೆಯನ್ನು ತಂದಿದೆ. ಮಹಿಳೆಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಎಲ್‌ಐಸಿ ಆಧಾರ್ ಶಿಲಾ ಯೋಜನೆ ಎಂದು ಹೆಸರಿಸಲಾಗಿದೆ. ಎಲ್‌ಐಸಿಯ ಈ ಯೋಜನೆಯಡಿ 8 ರಿಂದ 55 ವರ್ಷದ ಮಹಿಳೆಯರು ಹೂಡಿಕೆ ಮಾಡಬಹುದು.
ಈ ಯೋಜನೆಯ ನಿಯಮಗಳು :
ಎಲ್‌ಐಸಿಯ ಆಧಾರ್ ಶಿಲಾ ಯೋಜನೆ (LIC Aadhaar Shila scheme) ತನ್ನ ಗ್ರಾಹಕರಿಗೆ ಭದ್ರತೆ ಮತ್ತು ಉಳಿತಾಯ ಎರಡನ್ನೂ ನೀಡುತ್ತದೆ. ಆದರೆ ಯಾರ ಬಳಿ ಆಧಾರ್ ಕಾರ್ಡ್ (Aadhaar card) ಇದೆಯೋ ಅವರ ಮಾತ್ರ ಈ ಪ್ಲಾನ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಮೆಚ್ಯೂರಿಟಿ ಬಳಿಕ ಪಾಲಿಸಿದಾರ (Policy holder) ಹಣ ಪಡೆಯುವುದು ಸಾಧ್ಯವಾಗುತ್ತದೆ. ಎಲ್‌ಐಸಿಯ ಈ ಯೋಜನೆಯು ಪಾಲಿಸಿದಾರನ ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತದೆ.
ಇದನ್ನೂ ಓದಿ : PM Kisan Tractor Scheme: ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸಿದರೆ ಸಿಗಲಿದೆ 50 ಶೇ ಸಬ್ಸಿಡಿ
ನೀವು ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?
ಎಲ್‌ಐಸಿ ಆಧಾರ್ ಶಿಲಾ ಯೋಜನೆಯಡಿ ಕನಿಷ್ಠ 75,000 ರೂ ಮತ್ತು ಗರಿಷ್ಠ 3 ಲಕ್ಷ ರೂ.ಯನ್ನು ಹೂಡಿಕೆ ಮಾಡಬಹುದು . ಈ ಪಾಲಿಸಿಯ ಮುಕ್ತಾಯ ಅವಧಿ ಕನಿಷ್ಠ 10 ವರ್ಷಗಳು ಮತ್ತು ಗರಿಷ್ಠ 20 ವರ್ಷಗಳಾಗಿರುತ್ತವೆ. 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಎಲ್ಐಸಿಯ (LIC) ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಮಾಡಲಾಗುತ್ತದೆ.
ಈ ಯೋಜನೆಯನ್ನು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಬಹುದು. ನೀವು 30 ವರ್ಷ ವಯಸ್ಸಿನವರಾಗಿದ್ದು, ಪ್ರತಿದಿನ 29 ರೂಗಳನ್ನು 20 ವರ್ಷಗಳವರೆಗೆ ಠೇವಣಿ ಇಟ್ಟರೆ, ಮೊದಲ ವರ್ಷದಲ್ಲಿ 10,959 ರೂ. ಜಮೆಯಾಗುತ್ತದೆ. ಅದರಲ್ಲಿ 4.5 ಶೇಕಡಾ ತೆರಿಗೆಯು (Tax) ಸೇರಿರುತ್ತದೆ. ಮುಂದಿನ ವರ್ಷ 10,723 ರೂ. ಹೂಡಬೇಕಾಗುತ್ತದೆ. ಪ್ರೀಮಿಯಂಗಳನ್ನು ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು. 20 ವರ್ಷಗಳಲ್ಲಿ 2,14,696 ರೂ. ಠೇವಣಿ ಇಟ್ಟರೆ, ಮುಕ್ತಾಯದ ಸಮಯದಲ್ಲಿ 3,97,000 ರೂ. ಸಿಗುತ್ತದೆ.
ಇದನ್ನೂ ಓದಿ : PAN Card Latest News : ಈ ಹೊಸ ವೆಬ್‌ಸೈಟ್‌ನಿಂದ 5 ನಿಮಿಷಗಳಲ್ಲಿ e-Pan ಕಾರ್ಡ್ ಡೌನ್‌ಲೋಡ್ ಮಾಡಿ : ಹೇಗೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ