PM Kisan Tractor Scheme: ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸಿದರೆ ಸಿಗಲಿದೆ 50 ಶೇ ಸಬ್ಸಿಡಿ

PM Kisan Tractor Scheme : ಕಡಿಮೆ ಹಿಡುವಳಿ ಹೊಂದಿರುವ ಕಡಿಮೆ ಆದಾಯದ ರೈತರು ಟ್ರಾಕ್ಟರುಗಳನ್ನು ಖರೀದಿಸುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಅಂತಹ ರೈತರಿಗಾಗಿ ಸರ್ಕಾರ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಟ್ರಾಕ್ಟರ್ ಖರೀದಿಸಲು ರೈತರಿಗೆ ಧನ ಸಹಾಯ ನೀಡಲಾಗುತ್ತದೆ.   

Written by - Ranjitha R K | Last Updated : Jul 14, 2021, 03:43 PM IST
  • ರೈತರಿಗಾಗಿ ಸರ್ಕಾರ ಪ್ರಾರಂಭಿಸಿದೆ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ
  • ಟ್ರ್ಯಾಕ್ಟರ್ ಖರೀದಿಗೆ ರೈತರಿಗೆ ಸಿಗಲಿದೆ ಹಣಕಾಸಿನ ನೆರವು
  • ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ
PM Kisan Tractor Scheme: ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸಿದರೆ ಸಿಗಲಿದೆ 50 ಶೇ  ಸಬ್ಸಿಡಿ  title=
ರೈತರಿಗಾಗಿ ಸರ್ಕಾರ ಪ್ರಾರಂಭಿಸಿದೆ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ (photo india.com)

ನವದೆಹಲಿ :  PM Kisan Tractor Scheme : ಭಾರತವು ಕೃಷಿ ಪ್ರಧಾನ ದೇಶ. ದೇಶದ ಅರ್ಧದಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ.  ರೈತರಿಗೆ ಹೊಲಗಳಲ್ಲಿ ಕೆಲಸ ಮಾಡಲು ಟ್ರಾಕ್ಟರ್ ಗಳು ಬೇಕಾಗುತ್ತವೆ. ಕೃಷಿ ಕೆಲಸಕ್ಕೆ ಇದು ಅತ್ಯಂತ ಮುಖ್ಯವಾಗಿ ಬೇಕಾಗಿರುತ್ತದೆ. ಟ್ರಾಕ್ಟರ್ (Tractor) ಇದ್ದರೆ  ಕೃಷಿ ಕೆಲಸವನ್ನು ಸುಲಭವಾಗಿ ಪೂರೈಸಬಹುದು. ಟ್ರಾಕ್ಟರ್ ಎಲ್ಲಾ ರೈತರ ಅಗತ್ಯವಾಗಿದೆ. ದೊಡ್ಡ ಹಿಡುವಳಿ ಹೊಂದಿರುವ ರೈತರು ಸುಲಭವಾಗಿ ಟ್ರಾಕ್ಟರುಗಳನ್ನು ಖರೀದಿಸಬಹುದು, ಆದರೆ ಕಡಿಮೆ ಹಿಡುವಳಿ ಹೊಂದಿರುವ ಕಡಿಮೆ ಆದಾಯದ ರೈತರು ಟ್ರಾಕ್ಟರುಗಳನ್ನು ಖರೀದಿಸುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಅಂತಹ ರೈತರಿಗಾಗಿ ಸರ್ಕಾರ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು (PM Kisan Tractor Scheme) ಪ್ರಾರಂಭಿಸಿದೆ. ಈ ಯೋಜನೆಯಡಿ, ಟ್ರಾಕ್ಟರ್ ಖರೀದಿಸಲು ರೈತರಿಗೆ ಧನ ಸಹಾಯ ನೀಡಲಾಗುತ್ತದೆ. 

 ಅನೇಕ ರಾಜ್ಯ ಸರ್ಕಾರಗಳು ಟ್ರ್ಯಾಕ್ಟರ್ ಖರೀದಿಸಲು ಈಗಾಗಲೇ ರೈತರಿಗೆ  ಸಹಾಯಧನ ನೀಡುತ್ತಿವೆ. 
ಅರ್ಜಿ ಸಲ್ಲಿಸುವ ಮೊದಲು ಈ ವಿಚಾರಗಳು ಗೊತ್ತಿರಲಿ : 
1. ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಬೇಕಾದರೆ ಇರುವ ಮೊದಲ ಷರತ್ತು ಎಂದರೆ, ರೈತ ಕಳೆದ ಏಳು ವರ್ಷಗಳಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಬಾರದು.
2.  ರೈತನು (Farmers) ತನ್ನ ಹೆಸರಿನಲ್ಲಿ ಭೂಮಿಯನ್ನು ಹೊಂದಿರುವುದು ಅವಶ್ಯಕ.
3.ಒಬ್ಬ ರೈತ ಕೇವಲ ಒಂದು ಟ್ರ್ಯಾಕ್ಟರ್‌ ಖರೀದಿ ಮೇಲೆ ಮಾತ್ರ ಸಬ್ಸಿಡಿ ಪಡೆಯಬಹುದು. 
4. ಈ ಯೋಜನೆಯಡಿ ರೈತ ಖರೀದಿಸುವ ಟ್ರಾಕ್ಟರ್ ಅನ್ನು ಬೇರೆ ಯಾವುದೇ ಸಬ್ಸಿಡಿ (Tractor subsidy) ಯೋಜನೆಯೊಂದಿಗೆ ಸಂಯೋಜಿಸಬಾರದು.
5. ಕುಟುಂಬದಿಂದ ಒಬ್ಬ ವ್ಯಕ್ತಿ ಮಾತ್ರ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : PAN Card Latest News : ಈ ಹೊಸ ವೆಬ್‌ಸೈಟ್‌ನಿಂದ 5 ನಿಮಿಷಗಳಲ್ಲಿ e-Pan ಕಾರ್ಡ್ ಡೌನ್‌ಲೋಡ್ ಮಾಡಿ : ಹೇಗೆ ಇಲ್ಲಿದೆ ನೋಡಿ

6. ಈ ಯೋಜನೆ ಕಡಿಮೆ ಹಿಡುವಳಿ ಹೊಂದಿರುವ ರೈತರಿಗಾಗಿ ಇದೆ 
7. ನೋಂದಣಿಗೆ ಅರ್ಜಿದಾರ ಆಧಾರ್ ಕಾರ್ಡ್ (Aadhaar card) ಹೊಂದಿರಬೇಕು
8. ಜಮೀನಿನ ದಾಖಲೆ ಪತ್ರಗಳಿರಬೇಕು 
9.ಅರ್ಜಿದಾರರ ಗುರುತಿನ ಚೀಟಿ, ಅಂದರೆ ವೋಟರ್ ಐಡಿ, ಪ್ಯಾನ್ ಕಾರ್ಡ್ (PAN card) , ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರಿ ಒಂದನ್ನು ಹೊಂದಿರಬೇಕು. 
10. ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
11. ಅರ್ಜಿದಾರರ ಮೊಬೈಲ್ ಸಂಖ್ಯೆ
೧೨. ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋಗಳಿರಬೇಕು  

ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು?
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ದೇಶಾದ್ಯಂತ ಜಾರಿಯಲ್ಲಿದೆ. ಈ ಯೋಜನೆಯಡಿ ಫಲಾನುಭವಿಯು ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಯೋಜನೆಯಡಿ ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಕಳುಹಿಸಲಾಗುತ್ತದೆ. ಇದಕ್ಕಾಗಿ ಆನ್‌ಲೈನ್ (Online) ಅಥವಾ ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.  ತಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ : Gold-Silver Price : ಮಹಿಳೆಯರೇ ಗಮನಿಸಿ : ಚಿನ್ನದ ಬೆಲೆ 10 ಗ್ರಾಂ 46,890 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News