Jan Dhan Account : ಜನ್ ಧನ್ ಖಾತೆ ಖಾತೆದಾರರೇ ಕೂಡಲೇ ಈ ಕೆಲಸ ಮಾಡಿ : ಇಲ್ಲದಿದ್ದರೆ 1 ಲಕ್ಷ 30 ಸಾವಿರ ರೂ. ಕಳೆದುಕೊಳ್ಳಬೇಕಾಗುತ್ತದೆ!
ಜನ್ ಧನ್ ಖಾತೆದಾರರಿಗೆ ಸರ್ಕಾರ ಆದೇಶ ಹೊರಡಿಸಿದ್ದು, ತಪ್ಪಿದಲ್ಲಿ 1 ಲಕ್ಷ 30 ಸಾವಿರ ರೂ. ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಜನ್ ಧನ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಬೇಕು.
ನವದೆಹಲಿ : ನೀವು ಸಹ ಜನ್ ಧನ್ ಖಾತೆದಾರರಾಗಿದ್ದರೆ, ನಿಮಗೆ ಬಹಳ ಮುಖ್ಯವಾದ ಸುದ್ದಿ ಇದೆ. ಜನ್ ಧನ್ ಖಾತೆದಾರರಿಗೆ ಸರ್ಕಾರ ಆದೇಶ ಹೊರಡಿಸಿದ್ದು, ತಪ್ಪಿದಲ್ಲಿ 1 ಲಕ್ಷ 30 ಸಾವಿರ ರೂ. ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಜನ್ ಧನ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಬೇಕು.
1.30 ಲಕ್ಷ ರೂ. ಯಾವಾಗ ಸಿಗುತ್ತದೆ?
ಸರ್ಕಾರದ ವಿಶೇಷ ಯೋಜನೆಯಾದ ಜನ್ ಧನ್ ಯೋಜನೆ(Jan Dhan Account)ಯ ಖಾತೆದಾರರು ಹಲವು ಸೌಲಭ್ಯಗಳ ಜೊತೆಗೆ 1 ಲಕ್ಷ ರೂ.ಗಳ ಅಪಘಾತ ವಿಮೆಯನ್ನೂ ಪಡೆಯುತ್ತಾರೆ. ಆದರೆ ನೀವು ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಈ ಪ್ರಯೋಜನವನ್ನು ಪಡೆಯುವುದಿಲ್ಲ. ಅಂದರೆ, ಇದರಿಂದ ನಿಮಗೆ ಒಂದು ಲಕ್ಷ ರೂಪಾಯಿ ನಷ್ಟವಾಗುತ್ತದೆ. ಇದಲ್ಲದೆ, ನೀವು ಈ ಖಾತೆಯಲ್ಲಿ 30000 ರೂಪಾಯಿಗಳ ಅಪಘಾತ ಮರಣ ವಿಮೆಯನ್ನು ಸಹ ಪಡೆಯುತ್ತೀರಿ. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿದಾಗ ಮಾತ್ರ ಇದು ಲಭ್ಯವಿರುತ್ತದೆ.
ಇದನ್ನೂ ಓದಿ : ITR ದಾಖಲಿಸುವ ಮೊದಲು AIS ಮೂಲಕ ನಿಮ್ಮ ಎಲ್ಲಾ ಆದಾಯವನ್ನು ಪರಿಸೀಲಿಸಿ, ಇಲ್ಲಿದೆ ವಿಧಾನ
ನಿಮ್ಮ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ:-
1. ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನೀವು ಖಾತೆಯನ್ನು ಆಧಾರ್(Aadhar Card)ನೊಂದಿಗೆ ಲಿಂಕ್ ಮಾಡಬಹುದು.
2. ಇದಕ್ಕಾಗಿ, ನೀವು ಆಧಾರ್ ಕಾರ್ಡ್‌ನ ಫೋಟೋ ಕಾಪಿ, ನಿಮ್ಮ ಪಾಸ್‌ಬುಕ್ ಅನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗುತ್ತೀರಿ.
3. ಹಲವು ಬ್ಯಾಂಕ್‌ಗಳು ಈಗ ಸಂದೇಶದ ಮೂಲಕವೂ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುತ್ತಿವೆ.
4. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶ ಬಾಕ್ಸ್‌ಗೆ ಹೋಗಿ ಮತ್ತು UID<SPACE>ಆಧಾರ್ ಸಂಖ್ಯೆ<SPACE>ಖಾತೆ ಸಂಖ್ಯೆಯನ್ನು 567676 ಗೆ ಕಳುಹಿಸಿ, ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.
5. ನಿಮ್ಮ ಆಧಾರ್ ಮತ್ತು ಬ್ಯಾಂಕ್ ನೀಡಿರುವ ಮೊಬೈಲ್ ಸಂಖ್ಯೆ ಬೇರೆಯಾಗಿದ್ದರೆ ಲಿಂಕ್ ಆಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
6. ಇದರ ಹೊರತಾಗಿ, ನಿಮ್ಮ ಹತ್ತಿರದ ಎಟಿಎಂನಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.
ಈ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ
ಇದಕ್ಕಾಗಿ ನೀವು ಕೆಲವು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್(Passport) ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್, ವೋಟರ್ ಕಾರ್ಡ್, ಎನ್‌ಆರ್‌ಇಜಿಎ ಜಾಬ್ ಕಾರ್ಡ್, ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಯನ್ನು ತೋರಿಸುವ ಪ್ರಾಧಿಕಾರದಿಂದ ನೀಡಿದ ಪತ್ರ, ಖಾತೆ ತೆರೆಯುವ ದೃಢೀಕೃತ ಭಾವಚಿತ್ರದೊಂದಿಗೆ ಗೆಜೆಟೆಡ್ ಅಧಿಕಾರಿ ನೀಡಿದ ಪತ್ರ.
ಇದನ್ನೂ ಓದಿ : Business Idea : ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, 2 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿ, ಮತ್ತೆ 90% ಸಬ್ಸಿಡಿ ಪಡೆಯಿರಿ!
ಜನ್ ಧನ್ ಖಾತೆ ಯೋಜನೆ ಎಂದರೇನು?
ಗ್ರಾಹಕರು ಪ್ರಧಾನ ಮಂತ್ರಿ ಜನ್ ಧನ್ ಖಾತೆ(PMJDY)ಯಲ್ಲಿ ರೂ 5000 ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಓವರ್‌ಡ್ರಾಫ್ಟ್ ಸೌಲಭ್ಯದ ಲಾಭ ಪಡೆಯಲು, ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಅಷ್ಟೇ ಅಲ್ಲ, ಇದಕ್ಕಾಗಿ ಪಿಎಂಜೆಡಿವೈ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಈ ಯೋಜನೆಯಡಿ, ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್ ಖಾತೆ ತೆರೆಯುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿತ್ತು. ಜನ್ ಧನ್ ಯೋಜನೆ ಅಡಿಯಲ್ಲಿ ನೀವು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಖಾತೆಯನ್ನು ಸಹ ತೆರೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ