ITR ದಾಖಲಿಸುವ ಮೊದಲು AIS ಮೂಲಕ ನಿಮ್ಮ ಎಲ್ಲಾ ಆದಾಯವನ್ನು ಪರಿಸೀಲಿಸಿ, ಇಲ್ಲಿದೆ ವಿಧಾನ

ITR Filing-ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ಆದಾಯ ತೆರಿಗೆ ರಿಟರ್ನ್ (ಐಟಿ ರಿಟರ್ನ್ ಫೈಲ್) ಅನ್ನು ದಾಖಲಿಸುತ್ತಿದ್ದರೆ, ನಿಮಗಾಗಿ ಹೊಸ ಸೇವೆಯೊಂದನ್ನು ಆರಂಭಗೊಂಡಿದೆ. ಈಗ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವ ಮೊದಲು ಹೊಸ ಅನುವಲ್ ಇನ್ಫರ್ಮೇಷನ್  ಸ್ಟೇಟ್ಮೆಂಟ್ ನೊಂದಿಗೆ ಅದನ್ನು ನೀವು ಪರಿಶೀಲಿಸಬಹುದು ಮತ್ತು ಭವಿಷ್ಯದಲ್ಲಿ ಆದಾಯ ತೆರಿಗೆ ಇಲಾಖೆಯ ಸೂಚನೆಯನ್ನು ಎದುರಿಸುವುದನ್ನು ತಪ್ಪಿಸಬಹುದು.

Written by - Nitin Tabib | Last Updated : Nov 13, 2021, 02:55 PM IST
  • ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ನೀವೂ ಕೂಡ ಒಂದು ವೇಳೆ ಆದಾಯ ತೆರಿಗೆ ರಿಟರ್ನ್ (ಐಟಿ ರಿಟರ್ನ್ ಫೈಲ್) ಅನ್ನು ದಾಖಲಿಸುತ್ತಿದ್ದರೆ, ನಿಮಗಾಗಿ ಹೊಸ ಸೇವೆಯೊಂದನ್ನು ಆರಂಭಗೊಂಡಿದೆ
  • ಈಗ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವ ಮೊದಲು ಹೊಸ ಅನುವಲ್ ಇನ್ಫರ್ಮೇಷನ್ ಸ್ಟೇಟ್ಮೆಂಟ್ ನೊಂದಿಗೆ ಅದನ್ನು ನೀವು ಪರಿಶೀಲಿಸಬಹುದು
ITR ದಾಖಲಿಸುವ ಮೊದಲು AIS ಮೂಲಕ ನಿಮ್ಮ ಎಲ್ಲಾ ಆದಾಯವನ್ನು ಪರಿಸೀಲಿಸಿ, ಇಲ್ಲಿದೆ ವಿಧಾನ  title=
ITR Filing (File Photo)

ನವದೆಹಲಿ: ITR Filing- ತೆರಿಗೆದಾರರಿಗೆ ಸಂತಸದ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ಆದಾಯ ತೆರಿಗೆ ರಿಟರ್ನ್ (IT Return File) ಅನ್ನು ಸಹ ಸಲ್ಲಿಸುತ್ತಿದ್ದರೆ, ಇದೀಗ ನಿಮಗಾಗಿ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.  ಹೌದು, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು "ವಾರ್ಷಿಕ ಮಾಹಿತಿ ಹೇಳಿಕೆ (AIS)" ಎಂಬ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.

ತೆರಿಗೆದಾರರು AISಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ. ತೆರಿಗೆದಾರರು ಇದೀಗ ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಹೊಸ ವಾರ್ಷಿಕ ಮಾಹಿತಿ ಹೇಳಿಕೆಯೊಂದಿಗೆ ಸಲ್ಲಿಸುವ ಮೊದಲು ಪರಿಶೀಲಿಸಬಹುದು ಮತ್ತು ಭವಿಷ್ಯದಲ್ಲಿ ಆದಾಯ ತೆರಿಗೆ ಇಲಾಖೆಯ ಸೂಚನೆಗಳನ್ನು ಎದುರಿಸುವುದನ್ನು ತಪ್ಪಿಸಬಹುದು ಎನ್ನಲಾಗಿದೆ.

ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2021 ರ ಬಜೆಟ್ ಭಾಷಣದಲ್ಲಿ ಐಟಿಆರ್ ಫೈಲಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು, ಇದೀಗ ಪಟ್ಟಿ ಮಾಡಲಾದ ಷೇರುಗಳಿಂದ ಬಂಡವಾಳ ಲಾಭಗಳು, ಡಿವಿಡೆಂಡ್ ಆದಾಯ ಮತ್ತು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಂದ ಬಡ್ಡಿ ಮುಂತಾದ ಮಾಹಿತಿಯನ್ನು ತೆರಿಗೆ ರಿಟರ್ನ್‌ನಲ್ಲಿ ತುಂಬಲಾಗುವುದು ಎಂದು ಹೇಳಿದ್ದರು. ಸದ್ಯಕ್ಕೆ, ವೇತನ, ತೆರಿಗೆ ಪಾವತಿ ಮತ್ತು ಟಿಡಿಎಸ್ ಇತ್ಯಾದಿಗಳಿಂದ ಬರುವ ಆದಾಯಕ್ಕೆ ಸಂಬಂಧಿಸಿದ ಮಾಹಿತಿಯು ಈಗಾಗಲೇ ಟ್ರೇಸಸ್ ಪೋರ್ಟಲ್‌ನಲ್ಲಿ ಲಭ್ಯವಿರುವ ಫಾರ್ಮ್ 26AS ನಲ್ಲಿ ಲಭ್ಯವಿದೆ.

ಒಂದೇ ಜಾಗದಲ್ಲಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಬಹುದು
ಇದಕ್ಕೂ ಮೊದಲು ತೆರಿಗೆ ಪಾವತಿದಾರರು ಷೇರು/ಮ್ಯೂಚವಲ್ ಫಂಡ್ ಮಾರಾಟದ ಮೇಲಾದ ಕ್ಯಾಪಿಟಲ್ ಗೆನ್, ಡಿವಿಡೆಂಡ್, FD ಹಾಗೂ ಸೇವಿಂಗ್ ಅಕೌಂಟ್ ಮೇಲೆ ಗಳಿಸಿದ ಬಡ್ಡಿಗಳಂತಹ ಮಾಹಿತಿಯನ್ನುITR ದಾಖಲಿಸುವ ವೇಳೆ ಮರೆತು ಹೋಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಹಲವು ತೆರಿಗೆ ಪಾವತಿದಾರರಿಗೆ ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೂಡ ಜಾರಿ ಮಾಡಿದೆ.

ಇದನ್ನೂ ಓದಿ-Business Idea : ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, 2 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿ, ಮತ್ತೆ 90% ಸಬ್ಸಿಡಿ ಪಡೆಯಿರಿ! 

ಆದರೆ ಇದೀಗ ವಾರ್ಷಿಕ ಮಾಹಿತಿ ಹೇಳಿಕೆಯು ಐಟಿಆರ್ ಫೈಲಿಂಗ್ ಉದ್ದೇಶಕ್ಕಾಗಿ ಬಡ್ಡಿ, ಲಾಭಾಂಶ, ಷೇರು ವಹಿವಾಟುಗಳು, ಮ್ಯೂಚುವಲ್ ಫಂಡ್ ವಹಿವಾಟುಗಳು, ವಿದೇಶಿ ರವಾನೆ ಮಾಹಿತಿಯಂತಹ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲಿದೆ. 

ಇದನ್ನೂ ಓದಿ-Banking Rules: ಮೃತ ಸಂಬಂಧಿಕರ ಬ್ಯಾಂಕ್ ಖಾತೆಯಿಂದ ಅಥವಾ ATM ನಿಂದ ಹಣ ಹಿಂಪಡೆದರೆ ಏನಾಗುತ್ತೆ ಗೊತ್ತಾ?

Annual Information Statament ಹೇಗೆ ಡೌನ್ಲೋಡ್ ಮಾಡಬಹುದು?
>> ನಿಮ್ಮ ಪ್ಯಾನ್ ಮತ್ತು ಪಾಸ್‌ವರ್ಡ್ ಸಹಾಯದಿಂದ ಆದಾಯ ತೆರಿಗೆ ಪೋರ್ಟಲ್‌ಗೆ ಲಾಗಿನ್ ಮಾಡಿ.

>> ಮೆನುವಿನಲ್ಲಿ "ಸೇವೆ" ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ನಂತರ ಅದರಲ್ಲಿರುವ ವಾರ್ಷಿಕ ಮಾಹಿತಿ ಹೇಳಿಕೆ (How To Download AIS) ಆಯ್ಕೆಯನ್ನು ಕ್ಲಿಕ್ ಮಾಡಿ.

>> ಇಲ್ಲಿ ನಿಮ್ಮ ಮುಂದೆ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ, ಅದರಲ್ಲಿ ನೀವು ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಬೇಕು.

>> ಈಗ ನಿಮ್ಮ AIS ಮುಖಪುಟ ತೆರೆಯುತ್ತದೆ.

>> AIS ಮುಖಪುಟದಲ್ಲಿ ನೀಡಲಾದ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.

>> ಸೂಚನೆಗಳು ಮತ್ತು ಚಟುವಟಿಕೆ ಇತಿಹಾಸದ ನಡುವೆ ನೀಡಲಾದ AIS ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

>>  ಈಗ ನೀವು ಡೌನ್‌ಲೋಡ್ ಮಾಡಲು ಎರಡು ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲನೆಯದು, ತೆರಿಗೆದಾರರ ಮಾಹಿತಿ ವ್ಯವಸ್ಥೆ (TIS) ಮತ್ತು ಎರಡನೆಯದಾಗಿ, ವಾರ್ಷಿಕ ಮಾಹಿತಿ ಹೇಳಿಕೆ (AIS).

>> AIS ಟ್ಯಾಬ್‌ನಲ್ಲಿ, ಡೌನ್‌ಲೋಡ್ PDF ಅನ್ನು ಕ್ಲಿಕ್ ಮಾಡಿ. PDF ಅನ್ನು ತೆರೆಯುವಾಗ, ನಿಮ್ಮನ್ನು ಪಾಸ್‌ವರ್ಡ್‌ಗಾಗಿ ಕೇಳಲಾಗುತ್ತದೆ. ಈ ಪಾಸ್‌ವರ್ಡ್ ನಿಮ್ಮ PAN ಕಾರ್ಡ್ ಸಂಖ್ಯೆ + ಹುಟ್ಟಿದ ದಿನಾಂಕವಾಗಿರುತ್ತದೆ. ಉದಾಹರಣೆಗೆ, ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ AAAAA1234A ಆಗಿದ್ದರೆ ಮತ್ತು ನಿಮ್ಮ ಜನ್ಮ ದಿನಾಂಕ 21 ಜನವರಿ 1991 ಆಗಿದ್ದರೆ, ನಿಮ್ಮ ಪಾಸ್‌ವರ್ಡ್ AAAAA1234A21011991 ಆಗಿರುತ್ತದೆ.

ಇದನ್ನೂ ಓದಿ-PAN Card : 18 ವರ್ಷಕ್ಕಿಂತ ಮುಂಚೆಯೇ 'ಪ್ಯಾನ್ ಕಾರ್ಡ್' ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News