ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ನಿಷ್ಪ್ರಯೋಜನಕವಾಗುವುದು ಪ್ಯಾನ್ ಕಾರ್ಡ್ !
ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನು ಪಾಲಿಸದೆ ಹೋದಲ್ಲಿ ನಿಮ್ಮ ಕೈಯ್ಯಲ್ಲಿರುವ ಪ್ಯಾನ್ ನಿಷ್ಪ್ರಯೋಜಕವಾಗಲಿದೆ.
ಬೆಂಗಳೂರು : ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಐಟಿ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ, ಪ್ಯಾನ್ ಅಮಾನ್ಯವಾಗುತ್ತದೆ. ಪ್ಯಾನ್ ಕಾರ್ಡ್ ಬಳಕೆಯನ್ನು ನಿಷೇಧಿಸಲಾಗುವುದು. ಆದರೆ, ಈಗಾಗಲೇ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಆದಾಯ ತೆರಿಗೆ ಇಲಾಖೆ ನೀಡಿರುವ ಎಚ್ಚರಿಕೆಯಲ್ಲಿ ಮಾರ್ಚ್ 31 ರೊಳಗೆ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಇಲ್ಲವಾದಲ್ಲಿ ನಿಮ್ಮ ಕೈಯ್ಯಲ್ಲಿರುವ ಪ್ಯಾನ್ ನಿಷ್ಪ್ರಯೋಜಕವಾಗಲಿದೆ.
ಇದನ್ನೂ ಓದಿ : ಈ ಸರ್ಕಾರಿ ಬ್ಯಾಂಕ್‌ನ ಗ್ರಾಹಕರಿಗೆ ಶಾಕ್, 9 ಸೇವೆಗಳ ಶುಲ್ಕದಲ್ಲಿ ಭಾರೀ ಬದಲಾವಣೆ
ಯಾರಿಗೆ ಸಿಗಲಿದೆ ವಿನಾಯಿತಿ :
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಅನಿವಾರ್ಯ. ಆದರೂ ಕೆಲವರಿಗೆ ಈ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ. ಅಸ್ಸಾಂ, ಜಮ್ಮು-ಕಾಶ್ಮೀರ ಮತ್ತು ಮೇಘಾಲಯದಲ್ಲಿ ವಾಸಿಸುವ ಜನರು, 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಭಾರತದ ಪ್ರಜೆಗಳಲ್ಲದವರಿಗೆ ಈ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.
ಪ್ಯಾನ್ ಆಧಾರ್ ಲಿಂಕ್ ಮಾಡಲು ಎಷ್ಟು ವೆಚ್ಚವಾಗುತ್ತದೆ ? :
ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವನ್ನು ಮಾರ್ಚ್ 31
ವರೆಗೆ ವಿಸ್ತರಿಸಲಾಗಿದೆ. ಈ ಪ್ರಕ್ರಿಯೆಗೆ 1000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಐಟಿ ಇಲಾಖೆಯ ಸಲಹೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ವಿಫಲವಾದರೆ, ನಂತರ ಈ ಗಡುವನ್ನು ವಿಸ್ತರಿಸಲಾಗುವುದಿಲ್ಲ. ಇದಾದ ಬಳಿಕ ಪ್ಯಾನ್ ನಿಷ್ಕ್ರಿಯವಾಗಲಿದೆ.
ಇದನ್ನೂ ಓದಿ : ಈ ಮೂರು ಬ್ಯಾಂಕ್ ಗಳಲ್ಲಿ ಮಾತ್ರ ನಿಮ್ಮ ಹಣ ಸುರಕ್ಷಿತ.! ಆರ್ ಬಿಐ ಜಾರಿ ಮಾಡಿದೆ ಲಿಸ್ಟ್
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಪ್ರಾಮುಖ್ಯತೆ ಏನು ? :
ಈ ಲಿಂಕ್ ಪ್ರಕ್ರಿಯೆಯು ಸರ್ಕಾರ ಮತ್ತು ತೆರಿಗೆದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುವ ಜನರನ್ನು ಗುರುತಿಸುವುದು ಸುಲಭವಾಗುತ್ತದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ, ಆದಾಯ ತೆರಿಗೆ ರಿಟರ್ನ್ ಪ್ರಕ್ರಿಯೆ ಮತ್ತು ಪರಿಶೀಲನೆ ಸುಲಭವಾಗುತ್ತದೆ.
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ವಿಧಾನ :
- ಮೊದಲು ಆದಾಯ ತೆರಿಗೆ ಇ-ಪೋರ್ಟಲ್ (incometaxindiaefiling.gov.in) ತೆರೆಯಿರಿ.
- ನಂತರ, ಯೂಸರ್ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕದ ಸಹಾಯದಿಂದ ಲಾಗಿನ್ ಮಾಡಿ.
-ಪ್ರೊಫೈಲ್ ಸೆಟ್ಟಿಂಗ್‌ಗಳ ಮೆನು ಬಾರ್‌ಗೆ ಹೋಗಿ ಮತ್ತು ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ PAN ಪ್ರಕಾರ ನೀಡಲಾದ ಹುಟ್ಟಿದ ದಿನಾಂಕ, ಲಿಂಗದ ಬಗ್ಗೆ ಮಾಹಿತಿ ಕಾಣಿಸುತ್ತದೆ .
- ಸ್ಕ್ರೀನ್ ಮೇಲೆ ಆಧಾರ್ ವಿವರಗಳ ಸಹಾಯದಿಂದ ಪ್ಯಾನ್ ವಿವರಗಳನ್ನು ಪರಿಶೀಲಿಸಿ.
- ವಿವರಗಳನ್ನು ಹೋಲಿಕೆ ಮಾಡಿದ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಇಷ್ಟಾದ ಮೇಲೆ ಪ್ಯಾನ್ ಮತ್ತು ಆಧಾರ್‌ಗೆ ಲಿಂಕ್ ಮಾಡಲಾಗಿದೆ ಎನ್ನುವ ಮೆಸ್ಸೇಜ್ ಬರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.