ಮಾರ್ಚ್ 31ರ ಳಗೆ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಿಸಿಕೊಳ್ಳಿ.. ತಪ್ಪಿದರೆ..!
ನೀವು ಇನ್ನೂ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಮೊದಲು ಆ ಕೆಲಸ ಮಾಡಿ ಮುಗಿಸಿ. ಮಾರ್ಚ್ 31 ರ ಒಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಬಹುದು. ಮತ್ತೆ ಅದನ್ನು ಆಕ್ಟಿವ್ ಮಾಡಬೇಕಾದರೆ ದಂಡ ತೆರಬೇಕಾಗುತ್ತದೆ.
ದೆಹಲಿ: ಆಧಾರ್ ಕಾರ್ಡ್ (Aadhaar) ಅತ್ಯಂತ ಪ್ರಮುಖ ಸರ್ಕಾರಿ ದಾಖಲೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾವುದೇ ಸರ್ಕಾರಿ ಕೆಲಸ ನಡೆಯಬೇಕಾದರೆ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆ ಎಂದೇ ಪರಿಗಣಿಸಲಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವುದು ಎಷ್ಟು ಮುಖ್ಯವೋ ಪ್ಯಾನ್ ಕಾರ್ಡನ್ನು (Pancard) ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕೂಡಾ ಅಷ್ಟೇ ಮುಖ್ಯವಾಗಿದೆ. ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಇನ್ನು ಕೇವಲ ಒಂದೇ ತಿಂಗಳ ಗಡುವು ಇರಲಿದೆ. ಅಂದರೆ ಮಾರ್ಚ್ 31ರ ಳಗೆ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಿಸಿಕೊಳ್ಳಬೇಕು.
ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಬಹಳ ಸುಲಭ :
ಪ್ಯಾನ್ ಕಾರ್ಡನ್ನು (Pancard) ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಸಲು ಇನ್ನು ಒಂದು ತಿಂಗಳ ಸಮಯಾವಕಾಶ ಮಾತ್ರ ಇದೆ . ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ನೀವು ಕುಳಿತ ಜಾಗದಿಂದಲೇ ಕೆಲಸವನ್ನು ಮಾಡಿ ಮುಗಿಸಬಹುದು.
ಇದನ್ನೂ ಓದಿ : ಈ ರೀತಿ ಸಿಲಿಂಡರ್ ಬುಕ್ ಮಾಡಿ, Cashback ಜೊತೆಗೆ ಕೇವಲ 94 ರೂ.ಗೆ ಖರೀದಿಸಿ LPG Cylinder
ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ವಿಧಾನ :
- ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ portalಗೆ ಭೇಟಿ ನೀಡಿ
-ನಿಮ್ಮ ಆಧಾರ್ (Aadhaar) ಮತ್ತು ಪ್ಯಾನ್ ಸಂಖ್ಯೆ, ಹೆಸರು ಮತ್ತು ವಿಳಾಸದ ಸರಿಯಾದ ಮಾಹಿತಿಯನ್ನು ಒದಗಿಸಿ
-ನೀವು ನೀಡಿರುವ ವಿವರಗಳು ಸರಿಯಾಗಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್‌ಗೆ ಲಿಂಕ್ ಮಾಡಲಾಗುತ್ತದೆ
-ಮೆಸೆಜ್ (Message) ಮಾಡುವ ಮೂಲಕವೂ ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡಬಹುದು
- ಕ್ಯಾಪಿಟಲ್ ಲೆಟರ್ ನಲ್ಲಿ UIDAI ಎಂದು ಟೈಪ್ ಮಾಡಿ ನಂತರ ಸ್ಪೇಸ್ ಬಿಟ್ಟು ನಿಮ್ಮ ಆಧಾರ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯನ್ನು ಟೈಪ್ ಮಾಡಿ.
-ಈ SMS ಅನ್ನು 567678 ಅಥವಾ 56161 ಗೆ ಕಳುಹಿಸಿ
- ಸ್ವಲ್ಪ ಸಮಯದ ನಂತರ, ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಮೆಸೇಜ್ ಬರುತ್ತದೆ
31 ಮಾರ್ಚ್ 2021 ರೊಳಗೆ ನಿಮ್ಮ ಆಧಾರ್ ಕಾರ್ಡ್‌ಗೆ ನೀವು ಪ್ಯಾನ್ ಅನ್ನು ಲಿಂಕ್ ಮಾಡದಿದ್ದಲ್ಲಿ, ನಿಮ್ಮ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು. ನಿಷ್ಕ್ರಿಯಗೊಂಡಿರುವ ಆಧಾರ್ ಕಾರ್ಡ್ ಅನ್ನು ಸಕ್ರಿಯಗೊಳಿಸಬೇಕಾದರೆ, ದಂಡ ವಿಧಿಸಲಾಗುತ್ತದೆ. ಹಾಗಾಗಿ ಆಧಾರ್ ಜೊತೆ ಪ್ಯಾನ್ ನಂಬರ್ ಲಿಂಕ್ ಮಾಡುವ ಕಾರ್ಯದಲ್ಲಿ ಅಸಡ್ಡೆ ತೋರುವುದು ಒಳ್ಳೆಯದಲ್ಲ.
ಇದನ್ನೂ ಓದಿ : Gold-Sliver Price: ಆಭರಣ ಪ್ರಿಯರಿಗೊಂದು ಸಿಹಿ ಸುದ್ದಿ: ಭಾರೀ ಇಳಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ!
ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ :
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರ ಜೊತೆಗೆ, ಮೊಬೈಲ್ ಸಂಖ್ಯೆಯನ್ನು (Mobile number) ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ನೀವು 1 ಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆಯನ್ನು ಹೊಂದಿದ್ದು, ಯಾವ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಲಿಂಕ್ ಮಾಡಲಾಗಿದೆ ಎಂಬುದನ್ನು ನೀವು ಮರೆತಿದ್ದರೆ, ಅದನ್ನು ತಿಳಿಯುವ ವಿಧಾನ ತುಂಬಾ ಸುಲಭ.
ಯಾವ ನಂಬರ್ ಲಿಂಕ್ ಆಗಿದ ಎಂದು ತಿಳಿಯುವುದು ಹೇಗೆ ?
- ಮೊದಲಿಗೆ ನೀವು UIDAI ವೆಬ್‌ಸೈಟ್‌ಗೆ ಹೋಗಿ
-ಇದರ ನಂತರ My Aadhar ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-ಇಲ್ಲಿ Aadhar Services ಆಯ್ಕೆ ಇರುತ್ತದೆ
-Aadhar Services ಮೇಲೆ ಕ್ಲಿಕ್ ಮಾಡಿ
-ಮೊದಲ ಆಯ್ಕೆ Verify an Aadhar Number ಇರುತ್ತದೆ
-ಅದರ ಮೇಲೆ ಕ್ಲಿಕ್ ಮಾಡುವುದರಿಂದ ಹೊಸ ವಿಂಡೋ ತೆರೆಯುತ್ತದೆ
-ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದರ ಕೆಳಗೆ ಕ್ಯಾಪ್ಚಾವನ್ನು ಭರ್ತಿ ಮಾಡಿ
-Proceed to Verify ಕ್ಲಿಕ್ ಮಾಡಿ
-ಈಗ ನೀವು ಆಧಾರ್ ಸ್ಟೇಟಸ್ ನೋಡಬಹುದು
-ಅದರಲ್ಲಿ ಆಧಾರ್ ಸಂಖ್ಯೆ, ವಯಸ್ಸು, ರಾಜ್ಯ ಮತ್ತು ಮೊಬೈಲ್ ಸಂಖ್ಯೆಯಂತಹ ಅನೇಕ ವಿವರಗಳನ್ನು ಪರಿಶೀಲಿಸಲಾಗುವುದು
-ನಿಮ್ಮ ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ, ಆ ಸಂಖ್ಯೆಯ ಕೊನೆಯ ಮೂರು ಅಂಕೆಗಳು ಇಲ್ಲಿ ಕಾಣುತ್ತವೆ
ಈ ರೀತಿಯಾಗಿ ನಿಮ್ಮ ಆಧಾರ್‌ನೊಂದಿಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆ ಎಂದು ಕಂಡುಹಿಡಿಯಬಹುದು.
ಇದನ್ನೂ ಓದಿ : Mobile App: ರೈಲ್ವೆ ಪ್ರಯಾಣಿಕರಿಗೆ ಬಿಗ್ ರಿಲೀಫ್, ಈಗ ಮತ್ತೆ ಸಿಗುತ್ತಿದೆ ಈ ಸೌಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.