ನವದೆಹಲಿ : mAadhaar App New Development : ಡಿಜಿಟಲ್ ಇಂಡಿಯಾ (Digital India) ವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ 2017ರಲ್ಲಿ mAadhaar ಅಪ್ಲಿಕೇಶನ್ನ್ನು ಲಾಂಚ್ ಮಾಡಿತು. ಈ ಆ್ಯಪ್ ಡೌನ್ಲೋಡ್ ಮಾಡಿದ ಬಳಿಕ ಬಳಕೆದಾರರಿಗೆ ಎಲ್ಲೆಡೆ ಆಧಾರ್ ಕಾರ್ಡ್ (Aadhaar Card) ಪ್ರತಿಯನ್ನು ಹೊತ್ತೊಯ್ಯುವ ಅನಿವಾರ್ಯತೆ ಎದುರಾಗುವುದಿಲ್ಲ.
ಇದೀಗ ಆಧಾರ್ ಕಾರ್ಡುದಾರಿಗೆ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಒಂದು ಪ್ರಮುಖ ಘೋಷಣೆ ಮಾಡಿದೆ. ಆಧಾರ್ ಕಾರ್ಡ್ಗಳನ್ನು ಹೊಂದಿರುವ ಜನರು ಈಗ mAadhaar ಅಪ್ಲಿಕೇಶನ್ನಲ್ಲಿ ಐದು ಬಳಕೆದಾರರ ಪ್ರೊಫೈಲ್ಗಳನ್ನು ಸೇರಿಸಬಹುದು ಎಂದು ಯುಐಡಿಎಐ (UIDAI) ಹೇಳಿದೆ. ಯುಐಡಿಎಐ (UIDAI) ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
You can add up to 5 Aadhaar profiles in your #mAadhaar app. OTP for authentication is sent to the registered mobile number of the Aadhaar holder. Download and install the #NewmAadhaarApp from: https://t.co/62MEOf8J3P (Android) https://t.co/GkwPFzM9eq (iOS) pic.twitter.com/gapv443q72
— Aadhaar (@UIDAI) February 12, 2021
ಇದನ್ನೂ ಓದಿ - ಈಗ ಚಿಟಿಕೆ ಹೊಡೆಯುವುದರಲ್ಲಿ Aadhaarನಲ್ಲಿ ಬದಲಾವಣೆ ಸಾಧ್ಯ !
ಅಪ್ಲಿಕೇಶನ್ನಲ್ಲಿ ಬಳಕೆದಾರರ ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸದ ಜೊತೆಗೆ ಫೋಟೋಗ್ರಾಫ್ ಮತ್ತು ಆಧಾರ್ ನಂಬರ್ ಲಿಂಕ್ ಆಗಿರಲಿದೆ. ಈ ಪ್ರೊಫೈಲ್ಗಳನ್ನು ಸೇರಿಸಲು ಬಯಸುವ ಬಳಕೆದಾರರಿಗಾಗಿ, ಈ ಪ್ರೊಫೈಲ್ಗಳನ್ನು ಹೊಂದಿಸಲು ಅವರು ಮೊದಲು ತಮ್ಮ ಫೋನ್ಗಳಲ್ಲಿ mAadhaar ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗುತ್ತದೆ.
ಈ ಮೊದಲು mAadhaar ಅಪ್ಲಿಕೇಶನ್ನಲ್ಲಿ 3 ಜನರ ಆಧಾರ್ ಕಾರ್ಡ್ (Aadhaar Card) ಪ್ರೊಫೈಲ್ಗಳನ್ನು ಸೇರಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಈಗ ಆಧಾರ್ ಕಾರ್ಡ್ಗಳನ್ನು ಹೊಂದಿರುವ ಜನರು ಈಗ mAadhaar ಅಪ್ಲಿಕೇಶನ್ನಲ್ಲಿ ಐದು ಬಳಕೆದಾರರ ಪ್ರೊಫೈಲ್ಗಳನ್ನು ಸೇರಿಸಬಹುದಾಗಿದೆ.
ಇದನ್ನೂ ಓದಿ - Aadhaar card ಇಲ್ಲದೆ ಸಿಗಲ್ಲ Ration-Pension! ಇಲ್ಲಿದೆ ಸತ್ಯಾಸತ್ಯತೆ
ಆದರೆ ನೆನಪಿಡಿ ಆಧಾರ್ ಕಾರ್ಡ್ಗೆ (Aadhaar Card) 5 ಪ್ರೊಫೈಲ್ಗಳನ್ನು ಸೇರಿಸಲು (mAadhaar ಅಪ್ಲಿಕೇಶನ್ನಲ್ಲಿ), ಆ್ಯಪ್ನಲ್ಲಿ ಸ್ಥಾಪಿಸಲಾದ ಐದು ಆಧಾರ್ ಕಾರ್ಡ್ಗಳಲ್ಲಿ ಅದೇ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವುದು ಅವಶ್ಯಕ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.