ಬ್ಯಾಂಕ್ ಸಾಲ ಸುಸ್ತಿದಾರನ ಬಳಿಯೂ ಇರುತ್ತದೆ ಈ 4 ಹಕ್ಕುಗಳು! ಆರ್‌ಬಿಐ ಗವರ್ನರ್ ನೀಡಿರುವ ಮಾಹಿತಿ ಇದು !
ಸಾಲ ಪಡೆದ ನಂತರ ಅದನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುವುದು ಕೂಡಾ ಬಹಳ ಮುಖ್ಯ. ಸುಸ್ತಿದಾರರು ಅಂದರೆ ಸಾಲ ಬಾಕಿ ಉಳಿಸಿಕೊಂಡವರಿಗೂ ಆರ್‌ಬಿಐ ನಾಲ್ಕು ಹಕ್ಕುಗಳನ್ನು ನೀಡಿದೆ.
ನವದೆಹಲಿ : ಹೆಚ್ಚಿನವರು ತಮಗೆ ಹಣದ ಅಗತ್ಯ ಬಿದ್ದಾಗ ಬ್ಯಾಂಕ್‌ನಿಂದ ಸಾಲ ಪಡೆಯುತ್ತಾರೆ. ಆದರೆ ಸಾಲ ಪಡೆದ ನಂತರ ಅದನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುವುದು ಕೂಡಾ ಬಹಳ ಮುಖ್ಯ. ಕೆಲವೊಮ್ಮೆ ಯಾವುದೋ ಕಾರಣದಿಂದ ಹಣ ಪಾವತಿಯಾಗದ ಕಾರಣ ಬ್ಯಾಂಕ್ ನವರು, ಸಾಲದ ಬದಲಿಗೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆದರೆ ಸುಸ್ತಿದಾರರು ಅಂದರೆ ಸಾಲ ಬಾಕಿ ಉಳಿಸಿಕೊಂಡವರಿಗೂ ಆರ್‌ಬಿಐ ನಾಲ್ಕು ಹಕ್ಕುಗಳನ್ನು ನೀಡಿದೆ.
ಮನೆ, ಭೂಮಿ, ಕಾರು ಮುಂತಾದ ಎಲ್ಲಾ ಅಗತ್ಯಗಳನ್ನು ಪೂರೈಸಲು ಬ್ಯಾಂಕ್‌ನಿಂದ ಹಲವು ರೀತಿಯ ಸಾಲಗಳನ್ನು ನೀಡಲಾಗುತ್ತದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಸಾಲದಿಂದ ಸಾಕಷ್ಟು ಪರಿಹಾರ ಸಿಗುತ್ತದೆ.ಅದರಲ್ಲೂ ಮನೆ ಅಥವಾ ಫ್ಲಾಟ್ ಖರೀದಿಸಲು ಬಯಸಿದರೆ ಗೃಹ ಸಾಲ ನೆರವಾಗುತ್ತದೆ.
ಇದನ್ನೂ ಓದಿ : Annual Expenditure: ಭಾರತೀಯರ ವಾರ್ಷಿಕ ಸರಾಸರಿ ವೆಚ್ಚ ಎಷ್ಟು ಗೊತ್ತಾ..?
ಮನೆ ಕಟ್ಟಬೇಕು ಅಥವಾ ಖರೀದಿ ಮಾಡಬೇಕು ಎಂದರೆ ಅದಕ್ಕಾಗಿ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕೂಡಿಡುವುದು ಸಾಧ್ಯವಾಗುವುದಿಲ್ಲ. ಅಂಥಹ ಪರಿಸ್ಥಿತಿಯಲ್ಲಿ, ಗೃಹ ಸಾಲವೇ ನೆರವಿಗೆ ಬರುವುದು. ಬ್ಯಾಂಕ್ ನಿಂದ ಗೃಹ ಸಾಲ ಪಡೆದರೆ ನಂತರ ಅವರು ಅದರ ಕಂತುಗಳನ್ನು ಬಡ್ಡಿಯೊಂದಿಗೆ ಪಾವತಿಸುತ್ತಾ ಹೋಗಬೇಕಾಗುತ್ತದೆ.
ಗೃಹ ಸಾಲ ಎಂದರೆ ಅದು ದೀರ್ಘ ಕಾಲದ ಸಾಲ. ಆದ್ದರಿಂದ ಸಾಲವನ್ನು ನೀಡುವಾಗ ಬ್ಯಾಂಕ್ ಗ್ರಾಹಕರ ಆಸ್ತಿ ದಾಖಲೆಗಳನ್ನು ತನ್ನೊಂದಿಗೆ ಇರಿಸಿಕೊಳ್ಳುತ್ತದೆ. ಸಾಲ ಪಡೆಯುವವರು ಸಾಲದ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಸಾಲವನ್ನು ತೆಗೆದುಕೊಳ್ಳುವ ವ್ಯಕ್ತಿಯನ್ನು ಡಿಫಾಲ್ಟರ್ ಎಂದು ಘೋಷಿಸಿ, ಅಡಮಾನ ಇಟ್ಟಿರುವ ಆಸ್ತಿಯನ್ನು ಕಾನೂನುಬದ್ಧವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಬ್ಯಾಂಕ್ ಗೆ ಇರುತ್ತದೆ.
ಇದನ್ನೂ ಓದಿ : Gold And Silver rate: ವಾರದ ಮೊದಲ ದಿನದಂದು ಚಿನ್ನದ ದರ ಉಸಿತ: ಬೆಳ್ಳಿ ಬೆಲೆ ಹೆಚ್ಚಳ!
ಖಾಸಗಿ ಉದ್ಯೋಗಗಳನ್ನು ಅವಲಂಬಿಸಿರುವ ಜನರಿಗೆ ತಮ್ಮ ನೌಕರಿ ಶಾಶ್ವತವೇ ಎನ್ನುವ ಭರವಸೆ ಇರುವುದಿಲ್ಲ. ಆಗ ಬ್ಯಾಂಕ್ ನಿಮ್ಮನ್ನು ಲೋನ್ ಡೀಫಾಲ್ಟರ್ ಎಂದು ಘೋಷಿಸುವ ಕಾರಣದಿಂದಾಗಿ ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದರೆ ಬ್ಯಾಂಕ್ ಸಾಲ ಪಡೆದಿದ್ದು, ಅದನು ಸರಿಯಾಗಿ ಪಾವತಿಸಲು ಸಾಧ್ಯವಾಗದೆ ಇದ್ದರೂ ಆರ್ ಬಿಐ ನಿಮಗೆ ಕೆಲವು ಹಕ್ಕುಗಳನ್ನು ನೀಡುತ್ತದೆ. ಇದರ ಬಗ್ಗೆ ಪ್ರತಿ ಸಾಲಗಾರನಿಗೂ ತಿಳಿದಿರಬೇಕು.
ಸಾಲದ ಎರಡು EMI ಗಳನ್ನು ಪಾವತಿಸದಿದ್ದರೆ, ಬ್ಯಾಂಕ್ ಮೊದಲು ನಿಮಗೆ ಜ್ಞಾಪನೆಯನ್ನು ಕಳುಹಿಸುತ್ತದೆ. ನಿಮ್ಮ ಹೋಮ್ ಲೋನ್‌ನ ಸತತ ಮೂರು ಕಂತುಗಳನ್ನು ಪಾವತಿಸದೇ ಹೋದರೆ ಬ್ಯಾಂಕ್ ನಿಮಗೆ ಕಾನೂನು ನೋಟಿಸ್ ಕಳುಹಿಸುತ್ತದೆ. ಈ ಎಚ್ಚರಿಕೆಯ ನಂತರವೂ ನೀವು EMI ಅನ್ನು ಪೂರ್ಣಗೊಳಿಸದಿದ್ದರೆ, ನಂತರ ಬ್ಯಾಂಕ್ ನಿಮ್ಮನ್ನು ಡೀಫಾಲ್ಟರ್ ಎಂದು ಘೋಷಿಸುತ್ತದೆ.
ಇದನ್ನೂ ಓದಿ : Goat Bank : ಏನಿದು ಪ್ರಧಾನಿ ಮೋದಿ ಪ್ರಸ್ತಾಪಿಸಿದ ಗೋಟ್ ಬ್ಯಾಂಕ್ ಯೋಜನೆ? ಹೇಗೆ ಕಾರ್ಯ ನಿರ್ವಹಿಸುತ್ತದೆ ?
ಸಾಲ ಡೀಫಾಲ್ಟರ್ ಹಕ್ಕುಗಳು :
1- ಸಾಲವನ್ನು ಪಾವತಿಸದಿದ್ದಲ್ಲಿ, ಸಾಲದಾತರು ತಮ್ಮ ಸಾಲವನ್ನು ಮರುಪಡೆಯಲು ವಸೂಲಾತಿ ಏಜೆಂಟ್‌ಗಳ ಸೇವೆಗಳನ್ನು ತೆಗೆದುಕೊಳ್ಳಬಹುದು. ಆದರೆ, ಈ ರಿಕವರಿ ಏಜೆಂಟ್‌ಗಳು ಗ್ರಾಹಕರೊಂದಿಗೆ ಬೆದರಿಕೆ ಹಾಕುವ ಅಥವಾ ಅನುಚಿತವಾಗಿ ವರ್ತಿಸುವ ಹಕ್ಕನ್ನು ಹೊಂದಿಲ್ಲ. ರಿಕವರಿ ಏಜೆಂಟ್‌ಗಳು ಗ್ರಾಹಕರೊಂದಿಗೆ ಯಾವುದೇ ರೀತಿಯಲ್ಲಿ ಅನುಚಿತವಾಗಿ ವರ್ತಿಸಿದರೆ, ಗ್ರಾಹಕರು ಅದರ ಬಗ್ಗೆ ಬ್ಯಾಂಕ್‌ಗೆ ದೂರು ನೀಡಬಹುದು. ಬ್ಯಾಂಕ್‌ನಿಂದ ಯಾವುದೇ ವಿಚಾರಣೆ ನಡೆಸದಿದ್ದರೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ನ ಮೊರೆ ಹೋಗಬಹುದು.
2- ಬ್ಯಾಂಕ್ ನಿಮ್ಮ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದು ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ಹೊಂದಿದೆ.ಸಾಲಗಾರನು 90 ದಿನಗಳವರೆಗೆ ಸಾಲದ ಕಂತನ್ನು ಮರುಪಾವತಿ ಮಾಡದಿದ್ದರೆ, ಖಾತೆಯನ್ನು ಅನುತ್ಪಾದಕ ಆಸ್ತಿ (NPA) ಎಂದು ವರ್ಗೀಕರಿಸಲಾಗುತ್ತದೆ.
ಇದನ್ನೂ ಓದಿ : Bank Holidays in March : ಮಾರ್ಚ್ ನಲ್ಲಿ 14 ದಿನ ಬ್ಯಾಂಕ್ ಬಂದ್ ! ಇಲ್ಲಿದೆ RBI ಬಿಡುಗಡೆ ಮಾಡಿದ Holiday List
ಆದರೆ, ಅಂತಹ ಸಂದರ್ಭದಲ್ಲಿ, ಸಾಲದಾತನು ಸುಸ್ತಿದಾರನಿಗೆ 60 ದಿನಗಳ ನೋಟಿಸ್ ನೀಡಬೇಕಾಗುತ್ತದೆ. ನೋಟಿಸ್ ಅವಧಿಯೊಳಗೆ ಅವನು ಸಾಲವನ್ನು ಠೇವಣಿ ಮಾಡದಿದ್ದರೆ, ಬ್ಯಾಂಕ್ ಆಸ್ತಿಯ ಮಾರಾಟವನ್ನು ಮುಂದುವರಿಸಬಹುದು. ಆದರೆ ಮಾರಾಟದ ಸಂದರ್ಭದಲ್ಲಿ, ಬ್ಯಾಂಕ್ ಇನ್ನೂ 30 ದಿನಗಳ ಸಾರ್ವಜನಿಕ ಸೂಚನೆಯನ್ನು ನೀಡಬೇಕಾಗುತ್ತದೆ.
3- ನೀವು ಸಾಲವನ್ನು ತೆಗೆದುಕೊಂಡಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಆಸ್ತಿಯನ್ನು ಮಾರಾಟ ಮಾಡುವ ಮೊದಲು ಅದರ ನ್ಯಾಯಯುತ ಮೌಲ್ಯವನ್ನು ನಮೂದಿಸುವ ಸೂಚನೆಯನ್ನು ನೀಡಬೇಕು. ಇದು ಮೀಸಲು ಬೆಲೆಯನ್ನು ಒಳಗೊಂಡಿರುತ್ತದೆ. ಹರಾಜಿನ ದಿನಾಂಕ ಮತ್ತು ಸಮಯವನ್ನು ನಮೂದಿಸುವುದು ಮುಖ್ಯವಾಗಿದೆ. ಎರವಲುಗಾರನು ಸ್ವತ್ತು ಕಡಿಮೆ ಬೆಲೆಯಲ್ಲಿದೆ ಎಂದು ಭಾವಿಸಿದರೆ, ಅವನು ಹರಾಜನ್ನು ಸವಾಲು ಮಾಡಬಹುದು.
4- ಹರಾಜು ಮಾಡುವ ವೇಳೆ ಸಾಲದ ಮರುಪಾವತಿಯ ನಂತರ ಉಳಿದಿರುವ ಹೆಚ್ಚುವರಿ ಮೊತ್ತವನ್ನು ಪಡೆಯುವ ಹಕ್ಕನ್ನು ನೀವು ಹೊಂದಿರುತ್ತೀರಿ. ಬ್ಯಾಂಕ್ ಉಳಿದ ಮೊತ್ತವನ್ನು ಸಾಲಗಾರನಿಗೆ ಹಿಂತಿರುಗಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ