Goutam Adani Education: ಹಿರಿಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅಪಾರ ಸಂಪತ್ತಿನ ಒಡೆಯ.ಮುಖೇಶ್ ಅಂಬಾನಿ ನಂತರ ದೇಶದ ಎರಡನೇ ಶ್ರೀಮಂತ ವ್ಯಕ್ತಿ ಇವರು. ಇತ್ತೀಚೆಗೆ,ಗೌತಮ್ ಅದಾನಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲ ವಿಚರಾಗಳನ್ನು ಬಹಿರಂಗಪಡಿಸಿದ್ದಾರೆ. ಗೌತಮ್ ಅದಾನಿ ಯಾವಾಗಲೂ ತನ್ನ ಯಶಸ್ಸಿಗೆ ತನ್ನ ಹೆಂಡತಿಯೇ ಕಾರಣ ಎನ್ನುತ್ತಾರೆ. 


COMMERCIAL BREAK
SCROLL TO CONTINUE READING

ಗೌತಮ್ ಅದಾನಿ ಪತ್ನಿ ಪ್ರೀತಿ :
ಗೌತಮ್ ಅದಾನಿ ಪತ್ನಿ ಪ್ರೀತಿ ವೈದ್ಯೆ. ಗೌತಮ್ ಅದಾನಿ ಏಳು ಬೀಳಿನಲ್ಲಿ ಪತ್ನಿ ಪ್ರೀತಿ ಸದಾ ಜೊತೆಯಾಗಿ ನಿಲ್ಲುತ್ತಾರೆ ಎನ್ನುವುದನ್ನು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಅದಾನಿ. ಗೌತಮ್ ಅದಾನಿ ಜೊತೆಗಿನ ಪ್ರೀತಿ ಅದಾನಿ ವಿವಾಹದ ಕತೆ ಬಹಳ ಆಸಕ್ತಿದಾಯಕವಾಗಿದೆ. 


ಇದನ್ನೂ ಓದಿ : Gold And Silver Price: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ಚಿನ್ನ ಹಾಗೂ ಬೆಳ್ಳಿಯ ದರ: ಇಂದಿನ ಬೆಲೆಯನ್ನು ಪರಿಶೀಲಿಸಿ!


ಪ್ರೀತಿ ದಂತ ವೈದ್ಯೆ :
ಮೊದಲೇ ಹೇಳಿದಂತೆ ಪ್ರೀತಿ ದಂತ ವೈದ್ಯೆ. ಇವರಿಬ್ಬರ ವಿದ್ಯಾರ್ಹತೆ ಮಧ್ಯೆ ಅಜಗಜ ದಷ್ಟು ವ್ಯತ್ಯಾಸ. ಯಾಕೆಂದರೆ ಗೌತಮ್ ಅದಾನಿ ಹೈಸ್ಕೂಲ್ ಪಾಸ್ ಕಾಲೇಜ್ ಡ್ರಾಪ್ ಔಟ್.ವಿದ್ಯಾರ್ಹತೆಯಲ್ಲಿ ಇಷ್ಟೊಂದು ಅಂತರವಿದ್ದರೂ ಇವರ ಮದುವೆಗೆ ಇದು ತೊಡಕಾಗಲಿಲ್ಲ. ಹಾಗಂತ ಮೊದಲ ನೋಟದಲ್ಲೇ ಗೌತಮ್ ಅದಾನಿಯನ್ನು ಪ್ರೀತಿ ಮೆಚ್ಚಿಕೊಂಡಿದ್ದೂ ಇಲ್ಲ ಒಪ್ಪಿಕೊಂಡಿದ್ದೂ ಇಲ್ಲ. 


1986 ರಲ್ಲಿ  ಗೌತಮ್- ಪ್ರೀತಿ ವಿವಾಹ : 
ಗೌತಮ್ ಅದಾನಿಯನ್ನು ಪ್ರೀತಿಯ ತಂದೆ ಸೆವೆಂಟಿಲಾಲ್ ತಮ್ಮ ಮಗಳಿಗಾಗಿ ಆಯ್ಕೆ ಮಾಡಿದ್ದರಂತೆ.ಪ್ರೀತಿ ದಂತವೈದ್ಯೆ ಓದುತ್ತಿದ್ದ ಕಾಲವದು. ಆದರೆ, ವಿದ್ಯೆಯಲ್ಲಿ ಅಷ್ಟೊಂದ್ ಮುಂದೆ ಇರದಿದ್ದರೂ ಗೌತಮ್ ಸಾಮರ್ಥ್ಯದ ಬಗ್ಗೆ ಪ್ರೀತಿ ತಂದೆಗೆ ಅಪಾರ ನಂಬಿಕೆ ಇತ್ತಂತೆ.  ಈ ಬಗ್ಗೆ ಮಗಳು ಪ್ರೀತಿಗೂ ಅವರ ತಂದೆ ಮನದಟ್ಟು ಮಾಡಿಸಿದ್ದರಂತೆ. ನಂತರ ಮದುವೆ ನಿಶ್ಚಯಕ್ಕೂ ಮುನ್ನ ಗೌತಮ್ ಮತ್ತು ಪ್ರೀತಿ ನಡುವೆ ಒಂದು ಮೀಟಿಂಗ್ ಏರ್ಪಡಿಸಿದ್ದರಂತೆ. ಈ ಮೀಟಿಂಗ್ ನಲ್ಲಿಯೇ ಗೌತಮ್ ಅದಾನಿ ಬಗ್ಗೆ ಪ್ರೀತಿ ಅಭಿಪ್ರಾಯ ಬದಲಾಗಿದ್ದು. ಅವರು ಮದುವೆಗೆ ಒಪ್ಪಿಗೆ ಸೂಚಿಸಿದ್ದು. ನಂತರ 1986 ರಲ್ಲಿ ಇಬ್ಬರೂ ವಿವಾಹವಾದರು. 


ಇದನ್ನೂ ಓದಿ :ಬ್ಯಾಂಕ್ ಎಟಿಎಂ ಗೆ ಹೋಗುವ ಅಗತ್ಯವೇ ಇಲ್ಲ ! ಮನೆ ಬಾಗಿಲಿಗೆ ಬರುತ್ತದೆ ಕ್ಯಾಶ್! ಶುರುವಾಗಿದೆ Aadhaar ATM


ಪತಿಯ ಬಗ್ಗೆ ಪ್ರೀತಿ ಮಾತು : 
ಗೌತಮ್ ಅದಾನಿಯನ್ನು ಮದುವೆಯಾದ ನಂತರ ಪ್ರೀತಿ ತಮ್ಮ ವೃತ್ತಿಜೀವನವನ್ನು ತೊರೆದಿದ್ದಾರೆ.ಗೌತಮ್ ಅದಾನಿಯೊಂದಿಗೆ ಜೀವನ ಪಯಣದ ಬಗ್ಗೆ ಪ್ರೀತಿಗೆ ಕೂಡಾ  ಅಪಾರ ಗೌರವ,ಹೆಮ್ಮೆ. ಅದಾನಿ ಅವರ 60ನೇ ಹುಟ್ಟುಹಬ್ಬದಂದು ಪ್ರೀತಿ ಈ ಎಲ್ಲಾ ವಿಚಾರಗಳನ್ನು ಮನ ಬಿಚ್ಚಿ ಹೇಳಿದ್ದಾರೆ.  


ಗೌತಮ್ ಅದಾನಿ ಇತರ ಕೈಗಾರಿಕೋದ್ಯಮಿಗಳಿಗಿಂತ ಹೇಗೆ ಭಿನ್ನ ಎನ್ನುವುದನ್ನು ವಿವರಿಸಿದ್ದಾರೆ. ಯಾಕೆಂದರೆ ಅದಾನಿಗೆ ಸಂಪತ್ತು ಅನುವಂಶಿಕವಾಗಿ ಬಂದಿಲ್ಲ. ತಮ್ಮ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದಲೇ ಇಂದು ಗೌತಮ್ ಅದಾನಿ ಬಹುಕೋಟಿ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.