Railways Super Plan: ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ್ಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ರೈಲ್ವೆ 100 ದಿನಗಳ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ರೈಲ್ವೇಯ ಈ ಯೋಜನೆಯಲ್ಲಿ, ಟಿಕೆಟ್ ರದ್ದುಗೊಳಿಸಿದ 24 ಗಂಟೆಗಳೊಳಗೆ ಹಣವನ್ನು ಮರುಪಾವತಿ ಮಾಡುವ ಗುರಿಯನ್ನು ಹೊಂದಿದೆ.
ವಾಸ್ತವವಾಗಿ, ಭಾರತೀಯ ರೈಲ್ವೆ (Indian Railways) ಪ್ರಯಾಣಿಕರಿಗೆ ಹೊಸ 'ಸೂಪರ್ ಆಪ್' ಅನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದ್ದು, ಇದು ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತಿ ಕೆಲಸವನ್ನೂ ಸುಲಭಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿರುವ ರೈಲ್ವೆ:
ಭಾರತೀಯ ರೈಲ್ವೆಯ ಯೋಜನೆಯ (Indian Railways Plan) ಪ್ರಕಾರ, ಮುಂಬರುವ ದಿನಗಳಲ್ಲಿ ವಂದೇ ಭಾರತ್ನಂತಹ ವೇಗದ ರೈಲುಗಳಲ್ಲಿಯೂ ಸ್ಲೀಪರ್ ಸೀಟ್ಗಳು ಲಭ್ಯವಾಗಲಿವೆ. ಇಡೀ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ರೈಲ್ವೇ ಮೇಲ್ಸೇತುವೆ ಜೊತೆ ಜೊತೆಗೆ ರೈಲ್ವೆ ಕೆಳಸೇತುವೆಯನ್ನೂ ಕೂಡ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಲ್ಲದೆ, ಅಹಮದಾಬಾದ್ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ಬುಲೆಟ್ ಟ್ರೈನ್ (ಅಹಮದಾಬಾದ್-ಮುಂಬೈ ಬುಲೆಟ್ ಟ್ರೈನ್ ಪ್ರಾಜೆಕ್ಟ್) ನಲ್ಲಿಯೂ ಸಹ ವೇಗವಾಗಿ ಕೆಲಸ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ- ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಹೀಗೆ ಮಾಡಿ !ಹೊಸ ಆಧಾರ್ ನಿಮ್ಮ ಕೈ ಸೇರುವುದು !
ಮಾಧ್ಯಮ ವರದಿಗಳ ಪ್ರಕಾರ, ಹೊಸ ಸರ್ಕಾರಕ್ಕಾಗಿ 100 ದಿನಗಳ ಕ್ರಿಯಾ ಯೋಜನೆಯನ್ನು ಸಿಡ್ಡಪಡಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದು, ಈ ಯೋಜನೆಯಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಂಬಂಧಿತ ಸಚಿವಾಲಗಳು ಸಿದ್ದತೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
24ಗಂಟೆಯೊಳಗೆ ಲಭ್ಯವಾಗಲಿದೆ ರೀಫಂಡ್:
ಪ್ರಸ್ತುತ, ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸಿದರೆ ಮರುಪಾವತಿಗಾಗಿ ಮೂರು ದಿನಗಳ ಸಮಯ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ, ಈ ತೊಂದರೆ ಕೊನೆಗೊಳ್ಳಲಿದ್ದು. 24 ಗಂಟೆಯೊಳಗೆ ಹಣ ಮರುಪಾವತಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕೆಲಸ ಮಾಡುತ್ತಿದೆ. ಇದಕ್ಕಾಗಿ, ರೈಲ್ವೇ ಹೊಸ ಸೂಪರ್ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲಿದ್ದು, ಇದರ ಮೂಲಕ ನೀವು ಟಿಕೆಟ್ ಬುಕಿಂಗ್ನಿಂದ ರೈಲು ಟ್ರ್ಯಾಕಿಂಗ್ನವರೆಗೆ ಹಲವು ಕೆಲಸಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- ಫ್ಯಾಕ್ಟರಿಗಾಗಿ 25 ಎಕರೆ ಜಮೀನು ಕೇಳಿದ ಲೆನ್ಸ್ಕಾರ್ಟ್ ಮಾಲೀಕ ಪಿಯೂಷ್ ಬನ್ಸಾಲ್; ತಕ್ಷಣ ಸ್ಪಂಧಿಸಿದ ಸಚಿವ ಎಂ.ಬಿ.ಪಾಟೀಲ್...!
ಪಿಎಂ ರೈಲ್ ಯಾತ್ರಿ ವಿಮಾ ಯೋಜನೆ:
ಲಭ್ಯವಿರುವ ಮಾಹಿತಿಯ ಪ್ರಕಾರ, ರೈಲ್ವೆಯ ಮೊದಲ 100 ದಿನಗಳ ಯೋಜನೆಯಡಿಯಲ್ಲಿ ಪಿಎಂ ರೈಲ್ ಯಾತ್ರಿ ವಿಮಾ ಯೋಜನೇಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಇದಲ್ಲದೇ 40,900 ಕಿ.ಮೀ ಉದ್ದದ ಮೂರು ಆರ್ಥಿಕ ಕಾರಿಡಾರ್ಗಳಿಗೆ ಸರ್ಕಾರ ಕ್ಯಾಬಿನೆಟ್ ಅನುಮೋದನೆಯನ್ನು ಕೋರುತ್ತಿದ್ದು, ಇದಕ್ಕಾಗಿ 11 ಲಕ್ಷ ಕೋಟಿ ರೂಪಾಯಿ ಹೂಡಿಕೆ ಅಗತ್ಯವಿದೆ ಎಂದು ತಿಳಿದುಬಂದಿದೆ.
ಗಮನಾರ್ಹವಾಗಿ, ಈ ಯೋಜನೆಯು ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ ಪೂರ್ಣಗೊಂಡ ನಂತರ ಜಮ್ಮುವಿನಿಂದ ಕಾಶ್ಮೀರಕ್ಕೆ ರೈಲುಗಳ ಕಾರ್ಯಾಚರಣೆಯನ್ನು ಈ ಯೋಜನೆಗಳು ಒಳಗೊಂಡಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.