ನವದೆಹಲಿ : ಕಿಯಾ ಮೋಟಾರ್ ಇಂಡಿಯಾ  (Kia Motor India) ತನ್ನ ಎಲ್ಲಾ ಹೊಸ 6 ಮತ್ತು 7 ಆಸನಗಳ ಕ್ಯಾರೆನ್ಸ್ MPV ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 8.99 ಲಕ್ಷ ರೂ. ಆಗಿದೆ. ಕಂಪನಿಯು ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸೂರಿ,  ಮತ್ತು ಲಕ್ಸೂರಿ ಪ್ಲಸ್ ಎಂಬ 5 ರೂಪಾಂತರಗಳಲ್ಲಿ ಕ್ಯಾರೆನ್ಸ್ ಅನ್ನು  ಬಿಡುಗಡೆ ಮಾಡಿದೆ. MPV ಯ  ಟಾಪ್ ಮಾಡೆಲ್ ನ ಬೆಲೆ 16.99 ಲಕ್ಷ ರೂ. ಆಗಿದೆ. ಕಂಪನಿಯು ಕಾರಿಗೆ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಿದೆ ಮತ್ತು ಅದರ ಕ್ಯಾಬಿನ್ ಸಹ ತುಂಬಾ ಆರಾಮದಾಯಕವಾಗಿದೆ. 6-ಆಸನಗಳ ರೂಪಾಂತರದಲ್ಲಿ,  ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಇರಲಿದೆ. ಆದರೆ ಬೆಂಚ್ ಸೀಟ್ ಅನ್ನು 7-ಆಸನಗಳ ಮಾದರಿಯೊಂದಿಗೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

6 ಏರ್‌ಬ್ಯಾಗ್‌ಗಳೊಂದಿಗೆ MPV :
ಇದು ಸಂಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳು, ಕಿಯಾ ಕನೆಕ್ಟ್ (Kia Connect) ಎಂಬ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್, ಬೋಸ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಸೀಟ್‌ಗಳು, ಏರ್ ಪ್ಯೂರಿಫೈಯರ್ ನೊಂದಿಗೆ ವೈರಸ್ ಮತ್ತು ಬ್ಯಾಕ್ಟೀರಿಯಾ ಪ್ರೊಟೆಕ್ಷನ್ ಜಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.  ಸೇಫ್ಟಿ ವಿಚಾರದಲ್ಲೂ ಈ ಕಾರು ಅತ್ಯುನ್ನತ ಮಾದರಿಯದ್ದಾಗಿದೆ. 6 ಏರ್‌ಬ್ಯಾಗ್‌ಗಳು (Air bag) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು  ನೀಡಲಾಗಿದೆ (New Kia Carens). 


ಇದನ್ನೂ ಓದಿ:  ಮೊಬೈಲ್ ನಂಬರ್ ನೊಂದಣಿಯಾಗದಿದ್ದರೂ ಡೌನ್‌ಲೋಡ್ ಮಾಡಬಹುದು ಆಧಾರ್ ಕಾರ್ಡ್..!


ಎರ್ಟಿಗಾ ಮತ್ತು ಇನ್ನೋವಾ ಕ್ರಿಸ್ಟಾಗೆ ಪೈಪೋಟಿ:
ಸ್ಮಾರ್ಟ್‌ಸ್ಟ್ರೀಮ್ 1.5-ಲೀಟರ್ ಪೆಟ್ರೋಲ್, ಸ್ಮಾರ್ಟ್‌ಸ್ಟ್ರೀಮ್ 1.4-ಲೀಟರ್ T-GDI ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ CRDi VGT ಡೀಸೆಲ್ ಎಂಜಿನ್ ಆಯ್ಕೆಗಳು ಕಿಯಾ ಕ್ಯಾರೆನ್ಸ್‌ನೊಂದಿಗೆ ಲಭ್ಯವಿದೆ. ಕಂಪನಿಯು ಈ ಮೂರು ಎಂಜಿನ್‌ಗಳೊಂದಿಗೆ ಸಾಮಾನ್ಯ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡಿದೆ.  ಆದರೆ ಟರ್ಬೊ-ಪೆಟ್ರೋಲ್ ಮತ್ತು ಆಯಿಲ್ ಬರ್ನರ್ ಎಂಜಿನ್‌ಗಳ ಆಯ್ಕೆಗೆ ಕ್ರಮವಾಗಿ 7-ಸ್ಪೀಡ್ ಡಿಸಿಟಿ ಮತ್ತು 6-ಸ್ಪೀಡ್ ಟಾರ್ಕ್ ಕನೆಕ್ಟರ್ ಗೇರ್‌ಬಾಕ್ಸ್ ನೀಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ, ಕರೆನ್ಸ್ ಗ್ರಾಹಕರ ನೆಚ್ಚಿನ ಮಾರುತಿ ಸುಜುಕಿ ಎರ್ಟಿಗಾ (Maruti Suzuki Eritiga) ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾದೊಂದಿಗೆ (Innova) ಸ್ಪರ್ಧಿಸಲಿದೆ.


ಇದನ್ನೂ ಓದಿ:  ಹಿರಿಯ ನಾಗರಿಕರಿಗೆ ಸೂಪರ್‌ಹಿಟ್ ಪಿಂಚಣಿ ಯೋಜನೆ ಆರಂಭ, ಕೈ ಸೇರಲಿದೆ 1.1 ಲಕ್ಷ ರೂಪಾಯಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.