ನಿಮ್ಮ ಕಾರಿನಲ್ಲಿ ಎಷ್ಟು ಏರ್ ಬ್ಯಾಗ್ ಗಳಿರಬೇಕು? ನಿತಿನ್ ಗಡ್ಕರಿ ಹೇಳಿದ್ದೇನು ?

ನಿತಿನ್ ಗಡ್ಕರಿ  ಇಂದು ನವದೆಹಲಿಯಲ್ಲಿ SIAM ನಿಯೋಗವನ್ನು ಭೇಟಿ ಮಾಡಿದರು. ಈ ಸಮಯದಲ್ಲಿ, ರಸ್ತೆ ಅಪಘಾತಗಳ ವೇಳೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಕರಿಗೆ ಗಡ್ಕರಿ ಈ ಸಲಹೆಯನ್ನು ನೀಡಿದ್ದಾರೆ.

Written by - Ranjitha R K | Last Updated : Aug 3, 2021, 05:40 PM IST
  • ಸಿಯಾಮ್ ನಿಯೋಗವನ್ನು ಭೇಟಿ ಮಾಡಿದ ನಿತಿನ್ ಗಡ್ಕರಿ
  • ನಿಮ್ಮ ಕಾರಿನಲ್ಲಿ ಎಷ್ಟು ಏರ್ ಬ್ಯಾಗ್ ಗಳಿರಬೇಕು ?
  • ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರುವ ಸೂಚನೆ ಏನು ?
ನಿಮ್ಮ ಕಾರಿನಲ್ಲಿ ಎಷ್ಟು ಏರ್ ಬ್ಯಾಗ್ ಗಳಿರಬೇಕು? ನಿತಿನ್  ಗಡ್ಕರಿ ಹೇಳಿದ್ದೇನು ?  title=
ನಿಮ್ಮ ಕಾರಿನಲ್ಲಿ ಎಷ್ಟು 6 ಏರ್ ಬ್ಯಾಗ್ ಗಳಿರಬೇಕು ? (file photo)

ನವದೆಹಲಿ : ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ,  ಎಲ್ಲಾ ವಾಹನ ತಯಾರಕರಲ್ಲಿ  ನಿತಿನ್ ಗಡ್ಕರಿ ಮನವಿ ಮಾಡಿದ್ದಾರೆ. ತಮ್ಮ ವಾಹನಗಳ ಎಲ್ಲಾ ವೆರಿಯೇಂಟ್ ಮತ್ತು ಸೆಗ್ಮೆಂಟ್ ಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು (Air Bag) ಅಳವಡಿಸುವಂತೆ ಗಡ್ಕರಿ ಮನವಿ ಮಾಡಿದ್ದಾರೆ.

ನಿತಿನ್ ಗಡ್ಕರಿ ಟ್ವೀಟ್ :
ನಿತಿನ್ ಗಡ್ಕರಿ (Nitin Gadkari) ಇಂದು ನವದೆಹಲಿಯಲ್ಲಿ SIAM (ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮನಿಫ್ಯಾಕ್ಚರೆರ್) ನಿಯೋಗವನ್ನು ಭೇಟಿ ಮಾಡಿದರು. ಈ ಸಮಯದಲ್ಲಿ, ರಸ್ತೆ ಅಪಘಾತಗಳ ವೇಳೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಕರಿಗೆ ಗಡ್ಕರಿ ಈ ಸಲಹೆಯನ್ನು ನೀಡಿದ್ದಾರೆ.

 

ಇದನ್ನೂ ಓದಿ : ವಿದ್ಯಾರ್ಥಿಗಳಿಗೊಂದು Good News , ಸ್ಟೂಡೆಂಟ್ಸ್ ಗಾಗಿ ಹೊಸ feature ಪರಿಚಯಿಸಿದ Jio

ನಿತಿನ್ ಗಡ್ಕರಿ ಅವರು, ಆಟೋ ಉದ್ಯಮದ ಮಾರಾಟ ಮತ್ತು ಕಾರ್ಯಕ್ಷಮತೆಯ ಬಗ್ಗೆ ಅವಲೋಕನ ನಡೆಸಿದ್ದಾರೆ. ಇದರೊಂದಿಗೆ ಒಂದು ವರ್ಷದೊಳಗೆ ಭಾರತೀಯ ಮಾರುಕಟ್ಟೆಯಲ್ಲಿ (Indian Market) 100% ಎಥೆನಾಲ್ ಮತ್ತು ಗ್ಯಾಸೋಲಿನ್ ನಿಂದ ಚಲಿಸುವ ಸಾಮರ್ಥ್ಯವಿರುವ ಫ್ಲೆಕ್ಸ್-ಇಂಧನ (Flex fuel)  ವಾಹನಗಳನ್ನು (FFVs) ತರುವಂತೆ ಕೂಡ ಸಲಹೆ ನೀಡಿದ್ದಾರೆ. 

ಸಭೆಯಲ್ಲಿ ಏನಾಯಿತು?
ಆದಾಗ್ಯೂ, CAFE 2 ನಿಯಮ ಮತ್ತು BS VIಯ ಫೇಸ್ 2 ಅನ್ನು  ಮುಂದೂಡುವ ಕುರಿತು ಈ ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಆಟೋ ಉದ್ಯಮವು CAFE 2 norms ಅನ್ನು 2023 ರವರೆಗೆ ಮತ್ತು BS VIಫೇಸ್ 2 ಅನ್ನು 2024 ರವರೆಗೆ ಮುಂದೂಡಲು ಒತ್ತಾಯಿಸಲಾಯಿತು. 

ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಸಿಗಲಿದೆ ಈ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News