ಎಲ್‌ಪಿಜಿ ಸಿಲಿಂಡರ್‌ನ ಹೊಸ ದರ:  ಹಣದುಬ್ಬರದಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡಲು ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾದ ಬಳಿಕ ಇದೀಗ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ. ಜೂನ್ 1 ರಂದು ಕಂಪನಿಗಳು ಬಿಡುಗಡೆ ಮಾಡಿದ ಬೆಲೆ ಪ್ರಕಾರ, 19 ಕೆಜಿ ವಾಣಿಜ್ಯ ಸಿಲಿಂಡರ್ 135 ರೂ.ಗಳಷ್ಟು ಅಗ್ಗವಾಗಿದೆ.


COMMERCIAL BREAK
SCROLL TO CONTINUE READING

ಹೌದು, ಪೆಟ್ರೋಲಿಯಂ ಕಂಪನಿಗಳು ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಇಂದು ಇಂಡೇನ್ ಸಿಲಿಂಡರ್ 135 ರೂಪಾಯಿಗಳಷ್ಟು ಅಗ್ಗವಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರ್‌ಗಳ ದರದಲ್ಲಿ ಈ ಕಡಿತ ಮಾಡಿದ್ದು,  ಗೃಹಬಳಕೆ ಅಡುಗೆ ಅನಿಲ ದರದಲ್ಲಿ ಗ್ರಾಹಕರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. 14.2 ಕೆಜಿಯ ಗೃಹಬಳಕೆ ಅಡುಗೆ ಅನಿಲ ದರ ಅಗ್ಗವಾಗಲೀ ಅಥವಾ ದುಬಾರಿಯಾಗಲೀ ಆಗಿಲ್ಲ. ದೇಶೀಯ ಸಿಲಿಂಡರ್ ಮೇ 19ರ ದರದಲ್ಲೇ ಈಗಲೂ ಲಭ್ಯವಿದೆ.


ಇದನ್ನೂ ಓದಿ- SBI Alert: ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದರೆ ವಂಚನೆ ತಪ್ಪಿಸಲು ಈ ಸಂಖ್ಯೆಯನ್ನು ಗಮನಿಸಿ


ಮೇ ತಿಂಗಳಲ್ಲಿ, ಗೃಹಬಳಕೆ ಅಡುಗೆ ಅನಿಲ ಗ್ರಾಹಕರಿಗೆ ಎರಡು ಬಾರಿ ಬೆಲೆ ಏರಿಕೆ ಶಾಕ್ ನೀಡಲಾಗಿತ್ತು. ಗೃಹಬಳಕೆಯ ಸಿಲಿಂಡರ್ ದರ ಮೊದಲ ಬಾರಿಗೆ ಮೇ 7 ರಂದು 50 ರೂ.ಗಳಷ್ಟು ಹೆಚ್ಚಿಸಲಾಯಿತು ಮತ್ತು ಮೇ 19 ರಂದು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಮತ್ತೆ ಹೆಚ್ಚಿಸಲಾಯಿತು.


ಮೇ 7 ರಂದು, ಎಲ್‌ಪಿಜಿ ದರದಲ್ಲಿ ಬದಲಾವಣೆಯಿಂದಾಗಿ, ಗೃಹಬಳಕೆಯ ಸಿಲಿಂಡರ್‌ನ ಬೆಲೆ 50 ರೂ.ಗೆ ಏರಿತು, 19 ಕೆಜಿ ವಾಣಿಜ್ಯ ಸಿಲಿಂಡರ್ ಸುಮಾರು 10 ರೂ. ಮೇ 19 ರಂದು ಇದರ ದರವನ್ನು ರೂ.8 ಹೆಚ್ಚಿಸಲಾಗಿತ್ತು.


ಇದನ್ನೂ ಓದಿ- Banking: ಜೂನ್ ತಿಂಗಳಿನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ


ಜೂನ್ 1ರಿಂದ ಈ ದರದಲ್ಲಿ ಸಿಲಿಂಡರ್ ಲಭ್ಯವಾಗಲಿದೆ:
ಇಂದು ಅಂದರೆ ಜೂನ್ 1 ರಂದು 19 ಕೆಜಿಯ ಸಿಲಿಂಡರ್ ಮೇಲೆ ನೇರವಾಗಿ 135 ರೂ.ವರೆಗೆ ಪರಿಹಾರವಿದೆ. ಈಗ 19 ಕೆಜಿಯ ಸಿಲಿಂಡರ್ ದೆಹಲಿಯಲ್ಲಿ 2354 ಬದಲಿಗೆ 2219 ರೂ., ಕೋಲ್ಕತ್ತಾದಲ್ಲಿ 2454 ಬದಲಿಗೆ 2322, ಮುಂಬೈನಲ್ಲಿ 2306 ರ ಬದಲಿಗೆ 2171.50 ಮತ್ತು ಚೆನ್ನೈನಲ್ಲಿ 2507 ರ ಬದಲಿಗೆ 2373 ರೂ. ಲಭ್ಯವಾಗಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.