Banking: ಜೂನ್ ತಿಂಗಳಿನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ

Bank Holidays in June 2022: ಒಂದು ವೇಳೆ ಜೂನ್ ತಿಂಗಳಿನಲ್ಲಿ ನೀವೂ ಕೂಡ ಯಾವುದಾದರೊಂದು ಬ್ಯಾಂಕ್ ಸಂಬಂಧಿತ ಕೆಲಸ ಇಟ್ಟುಕೊಂಡಿದ್ದರೆ, ಅದನ್ನು ಶೀಘ್ರದಲ್ಲಿಯೇ ಇತ್ಯರ್ಥಗೊಳಿಸಿ, ಏಕೆಂದರೆ ಜೂನ್ ತಿಂಗಳಿನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬ್ಯಾಂಕುಗಳಿಗೆ ರಜೆ ಇರಲಿದೆ. ಇದಕ್ಕಾಗಿ ನೀವು ಆರ್‌ಬಿಐ ನೀಡಿರುವ ಈ ರಜಾ ಪತ್ತಿಯನ್ನೊಮ್ಮೆ ಪರಿಶೀಲಿಸಿ.   

Written by - Nitin Tabib | Last Updated : May 31, 2022, 12:29 PM IST
  • ಜೂನ್ ತಿಂಗಳಿನಲ್ಲಿ ಒಂದು ವಾರಕ್ಕೂ ಹೆಚ್ಚು ದಿನ ಬ್ಯಾಂಕ್ ಗಳು ಬಂದ್ ಇರಲಿವೆ
  • ಆರ್ಬಿಐ ಬಿಡುಗಡೆಗೊಳಿಸಿರುವ ಈ ರಜಾ ಪತ್ತಿಯನ್ನೊಮ್ಮೆ ಪರಿಶೀಲಿಸಿ
  • ಬ್ಯಾಂಕುಗಳಿಗೆ ಸಂಬಂಧಿಸಿದ ನಿಮ್ಮ ಕೆಲಸವನ್ನು ಸಮಯ ಇರುವಾಗಲೇ ಇತ್ಯರ್ಥಪಡಿಸಿಕೊಳ್ಳಿ
Banking: ಜೂನ್ ತಿಂಗಳಿನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ title=
Bank Holidays List In June 2022

Bank Holidays in June 2022: ನಾಳೆಯಿಂದ ಜೂನ್ ತಿಂಗಳು ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಯೋಜಿಸಿರುವ ಗ್ರಾಹಕರು, ಜೂನ್ ತಿಂಗಳಲ್ಲಿ ಬರುವ ರಜೆಗಳ ಪಟ್ಟಿಯನ್ನು ಪರಿಶೀಲಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ತಿಂಗಳು ಭಾರತೀಯ ಬ್ಯಾಂಕ್‌ಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ, ಗ್ರಾಹಕರಿಗೆ ಯಾವ ದಿನಗಳಲ್ಲಿ ಬ್ಯಾಂಕ್ ಗಳು ತೆರೆದಿರುತ್ತವೆ ಮತ್ತು ಯಾವ ದಿನಗಳಲ್ಲಿ ಬಂದ್ ಇರುತ್ತವೆ ಎಂಬುದರ ಮಾಹಿತಿ ಮುಂಚಿತವಾಗಿ ಗೊತ್ತಾಗುತ್ತದೆ. ಪಟ್ಟಿಯನ್ನು ಪರಿಶೀಲಿಸೋಣ ಬನ್ನಿ.

ಜೂನ್ ತಿಂಗಳಲ್ಲಿ ಯಾವುದೇ ದೊಡ್ಡ ಹಬ್ಬ ಬೀಳುವುದಿಲ್ಲ. ಇದರಿಂದಾಗಿ ಈ ತಿಂಗಳು ಬ್ಯಾಂಕ್ ಉದ್ಯೋಗಿಗಳಿಗೆ ದೀರ್ಘ ರಜೆ ಇರುವುದಿಲ್ಲ. ತಿಂಗಳ ಮೊದಲ ರಜಾದಿನವು ಜೂನ್ 2 ರಂದು ಇರಲಿದೆ. ಶಿಮ್ಲಾದಲ್ಲಿ ಮಹಾರಾಣಾ ಪ್ರತಾಪ್ ಜಯಂತಿಯ ಕಾರಣ ಈ ದಿನ ಬ್ಯಾಂಕ್‌ಗಳು ತೆರೆಯುವುದಿಲ್ಲ. ಇದೇ ವೇಳೆ, ಜೂನ್ 5ರ ಭಾನುವಾರದಂದು ಮೊದಲ ವಾರದ ರಜೆ ಇರುತ್ತದೆ. ಜೂನ್ ತಿಂಗಳಿನಲ್ಲಿ ಯಾವ ಯಾವ ದಿನ ಬ್ಯಾಂಕುಗಳಿಗೆ ರಜೆ ಇರಲಿದೆ ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-PM Kisan: ಇಂದಿನಿಂದ ರೈತರ ಖಾತೆ ಸೇರಲಿದೆ 2000 ರೂ.

ಜೂನ್ 2022 ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಂತಿದೆ 
>> ಜೂನ್ 2 - ಮಹಾರಾಣಾ ಪ್ರತಾಪ್ ಜಯಂತಿ
>> ಜೂನ್ 5 - ಭಾನುವಾರ (ವಾರದ ಸಾಪ್ತಾಹಿಕ ರಜೆ)
>> ಜೂನ್ 11 - ತಿಂಗಳ ಎರಡನೇ ಶನಿವಾರ - ರಜೆ
>> 12 ಜೂನ್ - ಭಾನುವಾರ ಸಾಪ್ತಾಹಿಕ ರಜೆ
>> ಜೂನ್ 15 - YMA ದಿನ/ ಗುರು ಹರ ಗೋವಿಂದ್ ಜಯಂತಿ/ ರಾಜ ಸಂಕ್ರಾಂತಿಯಂದು (ಭುವನೇಶ್ವರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್ ಇರಲಿವೆ)
>> ಜೂನ್ 19 - ಭಾನುವಾರ ಸಾಪ್ತಾಹಿಕ ರಜೆ
>> ಜೂನ್ 25 - ತಿಂಗಳ ನಾಲ್ಕನೇ ಶನಿವಾರ
>> 26 ಜೂನ್ - ಭಾನುವಾರ ಸಾಪ್ತಾಹಿಕ ರಜೆ

ಇದನ್ನೂ ಓದಿ-Gold Purchase And Selling New Rule: ಚಿನ್ನ ಖರೀದಿ ಮತ್ತು ಮಾರಾಟ ಮಾಡುವವರಿಗೊಂದು ಮಹತ್ವದ ಮಾಹಿತಿ! ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ರಜೆ ಪಟ್ಟಿಯನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ. ಇವುಗಳಲ್ಲಿ ನೆಗೋಶಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಅಕೌಂಟ್ ಕ್ಲೋಸರ್ ಶಾಮೀಲಾಗಿವೆ. 

ಇದ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News