ನವದೆಹಲಿ: ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. 15 ದಿನಗಳಲ್ಲಿ, ಸಬ್ಸಿಡಿ ರಹಿತ LPG ಸಿಲಿಂಡರ್ 50 ರೂಪಾಯಿಗಳಷ್ಟು ದುಬಾರಿಯಾಗಿದೆ. ಇಂದು ಅಂದರೆ ಸೆಪ್ಟೆಂಬರ್ 1 ರಂದು ಸಿಲಿಂಡರ್ ದರವನ್ನು ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ, ಆಗಸ್ಟ್ 18 ರಂದು ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು (Gas Cylinder Price) 25 ರೂ. ಏರಿಕೆ ಮಾಡಿದ್ದವು. ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಹೆಚ್ಚಳದ ನಂತರ, ಈಗ ದೆಹಲಿಯಲ್ಲಿ 4.2 ಕೆಜಿ ಸಬ್ಸಿಡಿ ರಹಿತ  14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ.ಗೆ ತಲುಪಿದೆ.


ಇದನ್ನೂ ಓದಿ- LPG Price: ಅಕ್ಟೋಬರ್ 1 ರಿಂದ ಎಲ್‌ಪಿಜಿ ಬೆಲೆಯಲ್ಲಿ ಭಾರಿ ಏರಿಕೆ ಸಾಧ್ಯತೆ


15 ದಿನಗಳಲ್ಲಿ 50 ರೂ. ಹೆಚ್ಚಳ ಕಂಡ ಅಡುಗೆ ಅನಿಲ ದರ:
ತಿಂಗಳು ಸೆಪ್ಟೆಂಬರ್ 1, 2021 ಆಗಸ್ಟ್, 18, 2021 ಆಗಸ್ಟ್ 1, 2021
ದೆಹಲಿ 884.5  859.5 834.5
ಕೊಲ್ಕತ್ತಾ 911 886 861
ಮುಂಬೈ 884.5 859.5 834.5
ಚೆನ್ನೈ 834.5 875 850

ಮೂಲ: ಐಒಸಿ


ಈ ಮೊದಲು ಜುಲೈ ಮತ್ತು ಆಗಸ್ಟ್‌ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಮೇ ಮತ್ತು ಜೂನ್‌ನಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ (Cylinder Price) ಯಾವುದೇ ಬದಲಾವಣೆಯಾಗಿಲ್ಲ. ಏಪ್ರಿಲ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 10 ರೂಪಾಯಿ ಕಡಿತಗೊಳಿಸಲಾಗಿತ್ತು. 


ಇದನ್ನೂ ಓದಿ- LPG Subsidy Updates: ಗ್ಯಾಸ್ ಮೇಲಿನ ಸಬ್ಸಿಡಿ ನಿಂತು ಹೋಗಿರುವುದಕ್ಕೆ ಇದೂ ಕಾರಣವಾಗಿರಬಹುದು, ಪರಿಶೀಲಿಸಿಕೊಳ್ಳಿ


ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ (LPG Cylinder Price) ಈ ವರ್ಷ ಜನವರಿಯಲ್ಲಿ  694 ರೂ. ಇತ್ತು, ಇದನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್‌ಗೆ 719 ರೂ.ಗೆ ಹೆಚ್ಚಿಸಲಾಯಿತು. ಫೆಬ್ರವರಿ 15 ರಂದು ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು. ಇದರ ನಂತರ, ಫೆಬ್ರವರಿ 25 ರಂದು, ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 794 ರೂ. ತಲುಪಿತು. ಮಾರ್ಚ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 819 ರೂ.ಗೆ ಏರಿಸಲಾಯಿತು. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ