LPG Cylinder Price Hike: ಪೆಟ್ರೋಲ್-ಡೀಸೆಲ್ ನಂತರ ಎಲ್‌ಪಿಜಿ ಬೆಲೆಯಲ್ಲಿ ಭಾರೀ ಏರಿಕೆ, ಹೊಸ ಬೆಲೆ ಇಂದಿನಿಂದ ಅನ್ವಯ!
LPG Cylinder Price Hike: ಗೃಹಬಳಕೆಯ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ದೇಶೀಯ LPG ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
LPG Cylinder Price Hike: ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್! ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದ್ದು, ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ಎಲ್‌ಪಿಜಿ ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ದೇಶೀಯ ಅಡುಗೆ ಅನಿಲ (Domestic LPG cylinder) ಖರೀದಿಗಾಗಿ 949.50 ರೂ. ಪಾವತಿಸಬೇಕಾಗುತ್ತದೆ ಮತ್ತು ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಖರೀದಿಸಲು 976 ರೂ. ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 926 ರೂ. ಆಗಿತ್ತು. ಇದಲ್ಲದೇ ಚೆನ್ನೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 915.50 ರೂ.ನಿಂದ 965.50 ರೂ.ಗೆ ಹೆಚ್ಚಳವಾಗಿದೆ.
ಇದನ್ನೂ ಓದಿ- ನಿಮ್ಮ ಖಾತೆಗೂ LPG ಸಬ್ಸಿಡಿ ಬರುತ್ತಿಲ್ಲವೇ? ಇಂದೇ ಈ ಕೆಲಸ ಮಾಡಿ, ತಕ್ಷಣ ಹಣ ಬರುತ್ತದೆ
ಇದಲ್ಲದೇ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ (Domestic LPG cylinder Price) 938 ರಿಂದ 987.5 ರೂ.ಗೆ ಏರಿಕೆಯಾಗಿದೆ. ಆದರೆ ಬಿಹಾರದ ಪಾಟ್ನಾದಲ್ಲಿ, ಗ್ರಾಹಕರು ಈಗ ರೂ. 1039.5 ಕ್ಕೆ ದೇಶೀಯ ಎಲ್‌ಪಿಜಿ ಸಿಲಿಂಡರ್ ಅನ್ನು ಖರೀದಿಸಬಹುದು. ಮೊದಲು ಪಾಟ್ನಾದಲ್ಲಿ ಸಿಲಿಂಡರ್ ದರ 998 ರೂ. ಆಗಿತ್ತು.
ಪೆಟ್ರೋಲ್ ಬೆಲೆ (Petrol Price) ಕೂಡ ಬಹಳ ಸಮಯದ ನಂತರ ಮತ್ತೊಮ್ಮೆ ಏರಿಕೆಯಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ. ಏರಿಕೆಯಾದ ಬೆಲೆಗಳು ಇಂದಿನಿಂದ (ಮಂಗಳವಾರ) ಜಾರಿಗೆ ಬಂದಿವೆ.
ಇದನ್ನೂ ಓದಿ- LPG Subsidy ಬಗ್ಗೆ ಸರ್ಕಾರದ ಹೊಸ ಯೋಜನೆ! ಈಗ ಯಾರ ಖಾತೆಗೆ ಬರುತ್ತೆ ಹಣ!
ಇದಲ್ಲದೆ, ಡೀಸೆಲ್ ಬೆಲೆ (Diesel Price) ಕೂಡ ತುಂಬಾ ಹೆಚ್ಚಾಗಿದೆ. ಡೀಸೆಲ್ ಬೆಲೆಯಲ್ಲಿ ದಿಢೀರ್ ಭಾರಿ ಏರಿಕೆಯಾಗಿದ್ದು, ನೇರವಾಗಿ 25 ರೂ. ಏರಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಸಗಟು ಗ್ರಾಹಕರಿಗೆ ಪ್ರತಿ ಲೀಟರ್ ಡೀಸೆಲ್ ಅನ್ನು 115 ರೂ.ಗೆ ಮಾರಾಟ ಮಾಡಲಾಗುತ್ತಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.