ನವದೆಹಲಿ : ಬೆಲೆ ಏರಿಕೆಯ ನಡುವೆಯೇ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಹೊರೆ ಬೀಳಲಿದೆ. ಪೆಟ್ರೋಲ್, ಡೀಸೆಲ್ ನಂತರ ಈಗ ಎಲ್ಪಿಜಿ ( LPG Price Hike) ಕೂಡ ಗ್ರಾಹಕರ ಜೇಬು ಸುಡಲಿದೆ. ಏಪ್ರಿಲ್ನಿಂದ ಅಡುಗೆ ಅನಿಲ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಪ್ರಪಂಚದಾದ್ಯಂತ ಗ್ಯಾಸ್ ನಲ್ಲಿ ದೊಡ್ಡ ಕೊರತೆ ಕಂಡುಬಂದಿದೆ (Global Gas Crunch). ಏಪ್ರಿಲ್ನಿಂದ ಅದರ ಪರಿಣಾಮ ಭಾರತದ ಮೇಲೂ ಬೀಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಇಲ್ಲಿಯೂ ಗ್ಯಾಸ್ ಬೆಲೆಗಳು ದ್ವಿಗುಣಗೊಳ್ಳಬಹುದು (Domestic Gas Prices) .
ಜಾಗತಿಕ ಅನಿಲ ಕೊರತೆ :
ಜಾಗತಿಕ ಮಟ್ಟದಲ್ಲಿಯೇ ಅನಿಲದ ಕೊರತೆಯಿಂದಾಗಿ ಸಿಎನ್ಜಿ (CNG), ಪಿಎನ್ಜಿ ಮತ್ತು ವಿದ್ಯುತ್ ಬೆಲೆಗಳು (electricity bill) ಹೆಚ್ಚಾಗುತ್ತವೆ. ಇದರ ಜೊತೆಗೆ ಕಾರ್ಖಾನೆಗಳಲ್ಲಿ ಯಂತ್ರಗಳನ್ನು ನಡೆಸುವುದು ದುಬಾರಿಯಾಗಬಹುದು. ಅಲ್ಲದೆ, ಉತ್ಪಾದನಾ ವೆಚ್ಚವೂ ಹೆಚ್ಚಾಗಬಹುದು. ಸರ್ಕಾರದ ರಸಗೊಬ್ಬರ ಸಬ್ಸಿಡಿ ಮಸೂದೆಯಲ್ಲೂ ಹೆಚ್ಚಳ ಕಂಡು ಬರಬಹುದು (Fertilizer Subsidy Bill). ಒಟ್ಟಿನಲ್ಲಿ ಇವೆಲ್ಲದರ ಪರಿಣಾಮ ಸಾಮಾನ್ಯ ಗ್ರಾಹಕರ ಮೇಲೆ ಮಾತ್ರ ಆಗಲಿದೆ.
ಇದನ್ನೂ ಓದಿ : 22-02-2022 Today Gold Price:ಆಭರಣ ಪ್ರಿಯರಿಗೆ ಶಾಕ್.. ಚಿನ್ನದ ಬೆಲೆಯಲ್ಲಿ ಏರಿಕೆ
ಬೇಡಿಕೆಯಂತೆ ಪೂರೈಕೆ ಇಲ್ಲ :
ರಷ್ಯಾ ಯುರೋಪ್ ಗೆ ಅನಿಲ ಪೂರೈಸುವ ಪ್ರಮುಖ ಮೂಲವಾಗಿದೆ. ಉಕ್ರೇನ್ ಬಿಕ್ಕಟ್ಟಿನ ಕಾರಣದಿಂದಾಗಿ ಇದು ಪರಿಣಾಮ ಬೀರಬಹುದು (Ukraine crisis ). ಕರೋನಾ ಸಾಂಕ್ರಾಮಿದ (Coronavirus) ನಂತರ ಇದೀಗ ಜಾಗತಿಕ ಆರ್ಥಿಕತೆಯು ಹಳಿಗೆ ಮರಳಲು ಪ್ರಯತ್ನಿಸುತ್ತಿದೆ. ಆದರೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಪವರ್ ಬೇಡಿಕೆಯಿಂದಾಗಿ, ಅದರ ಪೂರೈಕೆಯು ಕಡಿಮೆಯಾಗಬಹುದು. ಇದೇ ಕಾರಣಕ್ಕೆ ಗ್ಯಾಸ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ (LPG Price).
ಅಡುಗೆ ಅನಿಲ ಸಿಲಿಂಡರ್ ಬೆಲೆಗಳಲ್ಲಿನ ಬದಲಾವಣೆಯ ನಂತರ ಗೋಚರಿಸಲಿದೆ ಪರಿಣಾಮ :
ಉಕ್ರೇನ್ ಬಿಕ್ಕಟ್ಟಿನಿಂದಾಗಿ, ಯುದ್ಧದ ಪರಿಸ್ಥಿತಿ ಕಂಡುಬರುತ್ತಿದೆ. ಅದರ ಪರಿಣಾಮವು ಎಲ್ಲೆಡೆ ಗೋಚರಿಸುತ್ತದೆ. ಈಗ ಇದು ಅನಿಲ ಬೆಲೆಯ ಮೇಲೆ ಕೂಡಾ ಪರಿಣಾಮ ಬೀರಬಹುದು. ಜಾಗತಿಕ ಅನಿಲ ಕೊರತೆಯ ಪರಿಣಾಮವು ಏಪ್ರಿಲ್ನಿಂದ ಕಂಡು ಬರಲಿದೆ. ಆಗ ಸರ್ಕಾರವು ಅಡುಗೆ ಅನಿಲದ ಬೆಲೆಗಳನ್ನು ಬದಲಾಯಿಸುತ್ತದೆ. ತಜ್ಞರ ಪ್ರಕಾರ, ಇದನ್ನು ಪ್ರತಿ mmBtu ಗೆ $ 2.9 ರಿಂದ $ 6 ರಿಂದ 7 ಕ್ಕೆ ಹೆಚ್ಚಿಸಬಹುದು. ರಿಲಯನ್ಸ್ ಇಂಡಸ್ಟ್ರೀಸ್ ಪ್ರಕಾರ, ಆಳ ಸಮುದ್ರದಿಂದ ಹೊರತೆಗೆಯುವ ಅನಿಲದ ಬೆಲೆ $ 6.13 ರಿಂದ ಸುಮಾರು $ 10 ಕ್ಕೆ ಹೆಚ್ಚಾಗುತ್ತದೆ. ಕಂಪನಿಯು ಮುಂದಿನ ತಿಂಗಳು ಸ್ವಲ್ಪ ಗ್ಯಾಸ್ ಅನ್ನು ಹರಾಜು ಮಾಡಲಿದೆ. ಇದಕ್ಕಾಗಿ, ಇದು ಫ್ಲೋರ್ ಪ್ರೈಸ್ ಅನ್ನು ಕಚ್ಚಾ ತೈಲಕ್ಕೆ ಲಿಂಕ್ ಮಾಡಿದೆ. ಪ್ರಸ್ತುತ ಇದು ಪ್ರತಿ mmBtu ಗೆ $ 14 ಆಗಿದೆ.
ಇದನ್ನೂ ಓದಿ : IRCTC Credit Card: ರೈಲ್ವೆ ಹೊರ ತಂದಿದೆ ಕ್ರೆಡಿಟ್ ಕಾರ್ಡ್, ಟಿಕೆಟ್ ಬುಕಿಂಗ್ ಮೇಲೆ ಸಿಗಲಿದೆ ಭಾರೀ ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.