Budget 2023 : ಬಜೆಟ್ ಗೂ ಮುನ್ನ ಗ್ಯಾಸ್ ಸಿಲಿಂಡರ್  ಬೆಲೆಗಳ ಬಗ್ಗೆ ಹೊಸ ಅಪ್ಡೇಟ್ ಹೊರ ಬಿದ್ಡಿದೆ. ಗ್ಯಾಸ್ ಸಿಲಿಂಡರ್ ಬೆಲೆ 1000 ರೂಪಾಯಿ ಗಡಿ  ದಾಟಿದೆ.  ಬಜೆಟ್‌ಗೂ ಮುನ್ನ ಸರ್ಕಾರ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಬಹುದು ಎನ್ನುವ ನೀರೀಕ್ಷೆ ಜನ ಸಾಮಾನ್ಯರದ್ದಾಗಿತ್ತು. ಇಂದು ತಿಂಗಳ ಮೊದಲ ದಿನವಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಬಿಡುಗಡೆಯಾಗಿದೆ.  ಆದರೆ ಜನ ಸಾಮಾನ್ಯರ ನಿರೀಕ್ಷೆಯಂತೆ ಏನೂ ನಡೆದಿಲ್ಲ.  ಫೆಬ್ರವರಿ ತಿಂಗಳ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡುಬಂದಿಲ್ಲ. 


COMMERCIAL BREAK
SCROLL TO CONTINUE READING

ಸರ್ಕಾರಿ ತೈಲ ಕಂಪನಿಗಳು ಬಿಡುಗಡೆಗೊಳಿಸಿದೆ ದರ : 
ಈ ತಿಂಗಳು ಸರ್ಕಾರಿ ತೈಲ ಕಂಪನಿಗಳು, ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯಲ್ಲಿ ಬೆಲೆ ಕಡಿತಗೊಳಿಸಿಲ್ಲ. ಗ್ಯಾಸ್ ಸಿಲಿಂಡರ್‌ಗಳ ದರಗಳನ್ನು IOCL ಪ್ರತಿ ತಿಂಗಳ ಮೊದಲ ದಿನಾಂಕದಂದು ಪರಿಶೀಲಿಸುತ್ತದೆ. ಯಾವ ನಗರದಲ್ಲಿ ಸಿಲಿಂಡರ್ ದರ ಎಷ್ಟಿದೆ ನೋಡೋಣ ..


ಇದನ್ನೂ ಓದಿ : Budget 2023: ಬಜೆಟ್ ಗೂ ಮುನ್ನ ವಾಹನ ಸವಾರರಿಗೆ ಒಂದು ಭಾರಿ ಸಂತಸದ ಸುದ್ದಿ, CNG ಬೆಲೆ ಇಳಿಕೆ


ಅಡುಗೆ ಅನಿಲ ಸಿಲಿಂಡರ್ ದರಗಳು :
ದೆಹಲಿ -1053 . ರೂ 
ಮುಂಬೈ - 1052.5 ರೂ 
ಬೆಂಗಳೂರು - 1055 ರೂ 
ಕೋಲ್ಕತ್ತಾ -  1079 ರೂ
ಚೆನ್ನೈ -  1068.5 ರೂ


ವಾಣಿಜ್ಯ ಸಿಲಿಂಡರ್ ದರಗಳು-
ದೆಹಲಿ - 1769 ರೂ 
ಮುಂಬೈ -  1721 ರೂ 
ಬೆಂಗಳೂರು - 2100   ರೂ 
ಕೋಲ್ಕತ್ತಾ -  1870 ರೂ
ಚೆನ್ನೈ -  1917 ರೂ


ಇದನ್ನೂ ಓದಿ : ನಿಮಗಿದು ಗೊತ್ತಾ? ಈ ಐದು ಪ್ರದೇಶಗಳ ಜನರ ಮೇಲೆ ಸರ್ಕಾರ ವಿಧಿಸುವುದಿಲ್ಲ ತೆರಿಗೆ


ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ಬೆಲೆ 153.5 ರೂ.ಗಳಷ್ಟು ಹೆಚ್ಚಾಗಿದೆ. 14.2 ಕೆಜಿ ಸಿಲಿಂಡರ್ ಬೆಲೆಯನ್ನು ಜುಲೈ 6, 2022 ರಂದು ಕೊನೆಯದಾಗಿ ಬದಲಾಯಿಸಲಾಗಿತ್ತು. ಳೆದ ಒಂದು ವರ್ಷದಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 153.5 ರೂ. ಹೆಚ್ಚಳವಾಗಿದೆ.  


ಸಿಲಿಂಡರ್ ಬೆಲೆ ಯಾವಾಗ ಮತ್ತು ಎಷ್ಟು ರೂಪಾಯಿ ದುಬಾರಿ :
2022 ರಲ್ಲಿ, ಮಾರ್ಚ್ ತಿಂಗಳಲ್ಲಿ, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು 50 ರೂಏರಿಸಲಾಗಿತ್ತು. . ನಂತರ ಮೇ ತಿಂಗಳಲ್ಲಿ ಮತ್ತೆ 50 ರೂ. ಹೆಚ್ಚಿಸಲಾಗಿತ್ತು. ಇದೇ ವೇಳೆ ಮೇ ತಿಂಗಳಲ್ಲಿ ಎರಡನೇ ಬಾರಿಗೆ 3.50 ರೂ. ಏರಿಸಲಾಗಿತ್ತು. ನಂತರ ಜುಲೈನಲ್ಲಿ ಕೊನೆಯ ಬಾರಿಗೆ 50 ರೂ. ಏರಿಕೆ ಕಂಡಿತ್ತು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.