KSEAB Karnataka SSLC Results 2024 Live Updates: SSLC ಫಲಿತಾಂಶ ಪ್ರಕಟ : ನಿಮ್ಮ ಅಂಕ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ

Karnataka SSLC Result 2024 Live: SSLC ಫಲಿತಾಂಶ ಇಂದು ಹೊರಬಿದ್ದಿದೆ. ನಿಮ್ಮ ಫಲಿತಾಂಶ SSLC ಬೋರ್ಡ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. kseeb.kar.nic.in ಮತ್ತು karresults.nic.in  ಅನ್ನು ಲಾಗಿ ಇನ್ ಆಗುವ ಮೂಲಕ ರಿಸಲ್ಟ್ ತಿಳಿದುಕೊಳ್ಳಬಹುದು.

Written by - Ranjitha R K | Last Updated : May 9, 2024, 11:35 AM IST
  • ಇಂದು SSLC ಫಲಿತಾಂಶ ಪ್ರಕಟ
  •  ರಾಜ್ಯದ ಸುಮಾರು 8.69 ಲಕ್ಷ ವಿದ್ಯಾರ್ಥಿಗಳ  ಭವಿಷ್ಯ ಇಂದು ನಿರ್ಧಾರ
  •  10:30ಕ್ಕೆ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟ
KSEAB Karnataka SSLC Results 2024 Live Updates: SSLC ಫಲಿತಾಂಶ ಪ್ರಕಟ  : ನಿಮ್ಮ ಅಂಕ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ
Live Blog

ಬೆಂಗಳೂರು : Karnataka SSLC Result 2024 Live: SSLC ಫಲಿತಾಂಶ ಇಂದು ಹೊರಬಿದ್ದಿದೆ.  SSLC ಬೋರ್ಡ್ ನಿರ್ದೇಶಕರು ಸೇರಿ ಇನ್ನಿತರ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದ್ದಾರೆ. ಈ ಮೂಲಕ  ರಾಜ್ಯದ ಸುಮಾರು 8.69 ಲಕ್ಷ ವಿದ್ಯಾರ್ಥಿಗಳ  ನಿರೀಕ್ಷೆಗೆ ತೆರೆ ಬಿದ್ದಿದೆ. ನಿಮ್ಮ ಫಲಿತಾಂಶ SSLC ಬೋರ್ಡ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. kseeb.kar.nic.in ಮತ್ತು karresults.nic.in  ಅನ್ನು ಲಾಗಿ ಇನ್ ಆಗುವ ಮೂಲಕ ರಿಸಲ್ಟ್ ತಿಳಿದುಕೊಳ್ಳಬಹುದು. ಈ ಬಾರಿ  4,41,910 ವಿದ್ಯಾರ್ಥಿ ಮತ್ತು 4,28,058 ವಿದ್ಯಾರ್ಥಿನಿಯರು ಈ ಬಾರಿ ಪರೀಕ್ಷೆ ಬರೆದಿದ್ದರು.

9 May, 2024

  • 11:35 AM

    Karnataka SSLC Results 2024 Live :ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ ಕೊಟ್ಟ ಇಲಾಖೆ :
    ಈ ಬಾರಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಭಾರೀ ಸರ್ಕಸ್ ಮಾಡಿದೆ. 20 ಪರ್ಸೆಂಟ್ ಗ್ರೇಸ್ ಮಾರ್ಕ್ ಕೊಟ್ಟಿದೆ. 20 ಪರ್ಸೆಂಟ್ ಗ್ರೇಸ್ ಮಾರ್ಕ್ ಕೊಟ್ಟರೂ  ಕಡಿಮೆ ಫಲಿತಾಂಶ ದಾಖಲಾಗಿದೆ. 1ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ. 
     

  • 11:17 AM

    Karnataka SSLC Results 2024 Live : ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ 3.59 ಲಕ್ಷ ಮಂದಿ ಅಂದರೆ 72.83% ಫಲಿತಾಂಶ ಬಂದಿದೆ. ಗ್ರಾಮೀಣ 2.71 ಲಕ್ಷ ಮಂದಿ, 74.17% ದಾಖಲಾಗಿದೆ. 
     

  • 11:12 AM

    Karnataka SSLC Results 2024 Live : ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ :
    1)ಅಂಕಿತಾ ಬಸಪ್ಪ ಕೊನ್ನೂರು  ( ಬಾಗಲಕೋಟೆ) 625/625 (ರಾಜ್ಯಕ್ಕೆ ಫ್ರಥಮ)
    624/625  ಅಂಕಗಳೊಂದಿಗೆ ಕೊಂದಿಗೆ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳು :
    ಮೇದಾ ಪಿ ಶೆಟ್ಟಿ ( ಬೆಂಗಳೂರು)
     ಹರ್ಷಿತಾ ಡಿಎಂ (ಮಧುಗಿರಿ)
    ಚಿನ್ಮಯ್ (ದಕ್ಷಿಣ ಕನ್ನಡ)
    ಸಿದ್ದಾಂತ್ (ಚಿಕ್ಕೊಡಿ )
    ದರ್ಶನ್ (ಶಿರಸಿ)
     ಚಿನ್ಮಯ್ (ಶಿರಸಿ)
    ಶ್ರೀರಾಮ್ (ಶಿರಸಿ)
    ಒಟ್ಟು 7 ಜನರಿಗೆ ದ್ವೀತಿಯ ಸ್ಥಾನ

  • 11:11 AM

    Karnataka SSLC Results 2024 Live : ಬಾಗಲಕೋಟೆ ಜಿಲ್ಲೆಗೆ ಮೊದಲ ರಾಂಕ್ :
    ಬಾಗಲಕೋಟೆ ಜಿಲ್ಲೆಯ ಮುದೋಳ ಮೇಲಿಗೇರಿಯಲ್ಲಿ ಇರುವ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಬಸಪ್ಪ ಕೊನ್ನೂರು
    ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. 

     

  • 11:07 AM

    Karnataka SSLC Results 2024 Live : ಏಳು ವಿದ್ಯಾರ್ಥಿಗಳಿಗೆ ಎರಡನೇ ರಾಂಕ್ :

    625ರಲ್ಮೇಲಿ 624 ಅಂಕ ಪಡೆಯುವ ಮೂಲಕ ಏಳು ಮಂದಿ ಎರಡನೇ ರಾಂಕ್ದಾ ಪಡೆದಿದ್ದಾರೆ. 

    ಮೇದಾ ಪಿ ಶೆಟ್ಟಿ ( ಬೆಂಗಳೂರು)
    ಹರ್ಷಿತಾ ಡಿಎಂ (ಮಧುಗಿರಿ)
    ಚಿನ್ಮಯ್ (ದಕ್ಷಿಣ ಕನ್ನಡ)
    ಸಿದ್ದಾಂತ್ (ಚಿಕ್ಕೊಡಿ )
    ದರ್ಶನ್ (ಶಿರಸಿ)
     ಚಿನ್ಮಯ್ (ಶಿರಸಿ)
    ಶ್ರೀರಾಮ್ (ಶಿರಸಿ)
    ಹೀಗೆ 7 ಜನರಿಗೆ ದ್ವೀತಿಯ ಸ್ಥಾನ

     

  • 11:00 AM

    Karnataka SSLC Results 2024 Live : ಉತ್ತರ ಪತ್ರಿಕೆ ಪಡೆಯಲು ಮೇ ೧೪ ರವರೆಗೆ ಅವಕಾಶವಿದೆ. ೧೩ನೇ ತಾರೀಕಿನಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

  • 10:57 AM

    Karnataka SSLC Results 2024 Live : ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ 

    ಉಡುಪಿ ಪ್ರಥಮ ಸ್ಥಾನ - 94%
    ದಕ್ಷಿಣ ಕನ್ನಡ ,ದ್ವೀತಿಯ ಸ್ಥಾನ- 92.12%
    ಶಿವಮೊಗ್ಗ ತೃತೀಯ ಸ್ಥಾನ - 88.67%
     50.59% ಫಲಿತಾಂಶದೊಂದಿಗೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. 
     

  • 10:56 AM

    Karnataka SSLC Results 2024 Live : SSLC ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ :
    ಒಟ್ಟು ಪರೀಕ್ಷೆ ಬರೆದ ವಿಧ್ಯಾರ್ಥಿಗಳು -8.59,967 ಲಕ್ಷ ವಿಧ್ಯಾರ್ಥಿಗಳು. ಈ ಪೈಕಿ 6,31,204 ತೇರ್ಗಡೆಯಾಗಿದ್ದಾರೆ. ಲಿಂಗವಾರು ಒಟ್ಟಾರೆ ಫಲಿತಾಂಶ ನೋಡುವುದಾದರೆ 
    ಬಾಲಕರು:2,87,416 (65.90%)
    ಬಾಲಕಿಯರು :3,43,788 (81.11%)

  • 10:54 AM

    Karnataka SSLC Results 2024 Live : ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಈ ಬಾರಿ ಒಟ್ಟು 63,12,04 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 
    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಶೇಕಡ 10% ಕುಸಿತ ದಾಖಲಾಗಿದೆ. 

  • 10:50 AM

    Karnataka SSLC Results 2024 Live : ರಾಜ್ಯದಲ್ಲಿ ಒಟ್ಟು ವಿದ್ಯಾರ್ಥಿಗಳು 28,74,16 ಉತ್ತೀರ್ಣರಾಗಿದ್ದಾರೆ. ಈ ಮೂಲಕ ಒಟ್ಟು  65.90 ಶೇಕಡವಾರು ಫಲಿತಾಂಶ ದಾಖಲಾಗಿದೆ. 

  • 10:49 AM

    Karnataka SSLC Results 2024 Live :ಮುಧೋಳ್ ದ ಸರ್ಕಾರಿ ಶಾಲೆ ಯ ಅಂಕಿತಾ ಬಸಪ್ಪ ಕೊನ್ನೂರ್ ರಾಜ್ಯಕ್ಕೆ ಫರ್ಸ್ಟ್. 625ಕ್ಕೆ 625 ಅಂಕ ಪಡೆದ ಅಂಕಿತ.

  • 10:48 AM

    Karnataka SSLC Results 2024 Live :ಯಾವ ಜಿಲ್ಲೆ ಫಸ್ಟ್ :
    ಈ ಬಾರಿಯ ಫಲಿತಾಂಶದಲ್ಲಿ ಉಡುಪಿ  ಜಿಲ್ಲೆ ಮೊದಲ ಸ್ಥಾನದಲ್ಲಿದೆ. 

  • 10:45 AM

    Karnataka SSLC Results 2024  : ಎಸ್ಎಸ್ ಎಲ್ ಸಿ - ಫಲಿತಾಂಶ  ಪತ್ರಿಕಾ ಗೋಷ್ಠಿ ಆರಂಭವಾಗಿದೆ.  kseeb.kar.nic.in ಮತ್ತು karresults.nic.inನಲ್ಲಿ ಫಲಿತಾಂಶ ಲಭ್ಯ. ಮಧ್ಯಾಹ್ನ ಒಂದು ಗಂಟೆಯ ನಂತರ ಶಾಲೆಗಳಲ್ಲಿ ಫಲಿತಾಂಶ ಪ್ರಕಟ. 

  • 09:38 AM

    Karnataka SSLC Result 2024 Live:  ಎಸ್ಎಸ್ಎಲ್ಸಿ ಫಲಿತಾಂಶ ನೋಡುವುದು ಹೇಗೆ? :
    ೧.ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ
    ೨.ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
    ೩.ಹೊಸ ಲಾಗಿನ್ ಪುಟವು ತೆರೆಯುತ್ತದೆ
    ೪.ನಿಮ್ಮನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
    ೫.ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ
    ೬.ಫಲಿತಾಂಶ ಡೌನ್ಲೋಡ್ ಮಾಡುವ ಅವಕಾಶವೂ ಇದೆ.

  • 09:05 AM

    Karnataka SSLC Result 2024 Live:  ಪಾಸಾದರೂ ಫೈಲ್ ಆದರೂ ಮತ್ತೆ ಪರೀಕ್ಷೆ ಬರೆಯಬಹುದು :  

    ಪಾಸ್ ಅಥವಾ ಫೈಲಾದರೂ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇರಲಿದೆ. ಹೀಗಾಗಿ ಫೈಲಾಗುವ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವ ಅವಶ್ಯಕತೆ ಇಲ್ಲ ಎಂದು  ಪರೀಕ್ಷಾ ಮಂಡಲಿ ಹೇಳಿದೆ. ವಿದ್ಯಾರ್ಥಿಗಳು ಪಾಸಾಗಲಿ, ಫೈಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗುವುದು. ಪಾಸಾಗಿದ್ದರೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರೆ ಅಂಕ ಹೆಚ್ಚಿಸಿಕೊಳ್ಳಲು ಅವಕಾಶ ನೀಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ-2, ಪರೀಕ್ಷೆ-3 ನಡೆಸಲಾಗುವುದು. 

  • 08:38 AM

    Karnataka SSLC Result 2024 Live: ಫಲಿತಾಂಶದ ನಿರೀಕ್ಷೆಯಲ್ಲಿ 8.69 ಲಕ್ಷ ವಿದ್ಯಾರ್ಥಿಗಳು : 
    ಮಾರ್ಚ್ 25 ರಿಂದ ಆರಂಭವಾಗಿದ್ದ ಈ ಬಾರಿಯ ಪರೀಕ್ಷೆ ಆಗಸ್ಟ್ 6 ರವರೆಗೆ ನಡೆದಿತ್ತು. ಬಳಿಕ ಏಪ್ರಿಲ್ 15 ರಂದು SSLC ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿತ್ತು. ಇಂದು 10.30 ಕ್ಕೆ ರಾಜ್ಯದ 8.69 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಗೊತ್ತಾಗಲಿದೆ.   

  • 08:33 AM

    Karnataka SSLC Result 2024 Live:  ಈ ಲಿಂಕ್ ಮೂಲಕ ಫಲಿತಾಂಶ ತಿಳಿದುಕೊಳ್ಳಬಹುದು :
     SSLC ಬೋರ್ಡ್ ನ ಅಧಿಕೃತ ವೆಬ್‌ಸೈಟ್‌ನಲ್ಲೂ ಫಲಿತಾಂಶ ಲಭ್ಯವಾಗಲಿದೆ. ಇದಕ್ಕಾಗಿ kseeb.kar.nic.in ಮತ್ತು karresults.nic.in  ಅನ್ನು ಲಾಗಿ ಇನ್ ಆಗುವ ಮೂಲಕ ರಿಸಲ್ಟ್ ತಿಳಿದುಕೊಳ್ಳಬಹುದು. 

  • 08:29 AM

    ಈ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ :
    ಸುದ್ದಿ ಗೋಷ್ಠಿ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದಾಗಿದೆ. 

Trending News