LPG Gas Cylinder: ಒಂದೆಡೆ ಹೆಚ್ಚಾಗುತ್ತಿರುವ ಹಣದುಬ್ಬರದಿಂದ ಸಾಮಾನ್ಯ ಜನರು ತತ್ತರಿಸಿಹೋಗಿದ್ದರೆ, ಇನ್ನೊಂದೆಡೆ ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್-ಡಿಸೇಲ್ ಬೆಲೆಯನ್ನು ಕೂಡ ಗಣನೀಯವಾಗಿ ಹೆಚ್ಸಿಸಲಾಗುತ್ತಿದೆ. ಇದಲ್ಲದೆ ಕೊರೊನಾ ವೈರಸ್ ಹೊಡೆತ ಮತ್ತೊಂದೆಡೆ. ಹೀಗಿರುವಾಗ ಜನಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ ಪ್ರಕಟವಾಗಿದೆ. ಪ್ರಸ್ತುತ LPG ಸಿಲಿಂಡರ್ ಬೆಲೆ ರೂ.809 ಪ್ರತಿ ಸಿಲಿಂಡರ್ ತಲುಪಿದೆ. ಸರ್ಕಾರಿ ತೈಲ ಕಂಪನಿಗಳಿಂದ ನಿರ್ಧರಿಸಲಾಗಿರುವ ದರದ ಮೇಲೆ ನಿಮಗೆ ಡಿಸ್ಕೌಂಟ್ ಕೂಡ ಸಿಗುವುದಿಲ್ಲ. ಆದರೆ, ಇಲ್ಲಿ ನಾವು ನಿಮಗೆ ನೀಡುತ್ತಿರುವ ಮಾಹಿತಿಯಿಂದ ನೀವು ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ರೂ.800 ಕ್ಯಾಶ್ ಬ್ಯಾಕ್ (Cash Back Offer) ಪಡೆಯಬಹುದು. ಆದರೆ, ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಇರುವ ಕಾರಣ ನೀವು ಕೂಡ ತಕ್ಷಣ ಈ ಕೊಡುಗೆಯ ಲಾಭ ಪಡೆಯಿರಿ.


COMMERCIAL BREAK
SCROLL TO CONTINUE READING

ದೇಶದ ಖ್ಯಾತ ಹಣ ಪಾವತಿ ಆಪ್ PAYTM ನಿಮಗೆ ಈ ಕೊಡುಗೆ ನೀಡುತ್ತಿದೆ. ಸಾಮಾನ್ಯವಾಗಿ ಆನ್ಲೈನ್ ಹಣವರ್ಗಾವಣೆಗೆ Paytm ಬಳಸಲಾಗುತದೆ. ಇದರ ಮೂಲಕ ನೀವು ಮೊಬೈಲ್, ಡಿಟಿಹೆಚ್ ರಿಚಾರ್ಜ್ ಕೂಡ ಮಾಡಬಹುದು ಮತ್ತು ಜೊತೆಗೆ ಕರೆಂಟ್ ಬಿಲ್ ಕೂಡ ಪಾವತಿಸಬಹುದು. ಹೀಗಿರುವಾಗ ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಗೆ ಹಣವನ್ನು ಪಾವತಿಸಿ ಹೇಗೆ ಈ ಕೊಡುಗೆಯ ಲಾಭವನ್ನು ಪಡೆಯಬೇಕು ಎಂಬುದನ್ನು ನಾನು ಇಲ್ಲಿ ತಿಳಿಸಲಿದ್ದೇವೆ. ಮೊದಲ ಬಾರಿಗೆ ಪೇಟಿಎಂ ಮೂಲಕ ಗ್ಯಾಸ್ (Gas Booking Offer) ಸಿಲಿಂಡರ್ ಬುಕ್ ಮಾಡುವ ಗ್ರಾಹಕರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದಾಗಿದೆ. ಪೇಟಿಎಂ ಮೂಲಕ ಒಂದು ವೇಳೆ ನೀವು ಗ್ಯಾಸ್ ಸಿಲಿಂಡರ್ (Gas Cylinder) ಬುಕ್ ಮಾಡಿದರೆ ನಿಮಗೆ ರೂ.800 ವರೆಗೆ ಒಂದು ಸ್ಕ್ರ್ಯಾಚ್ ಕಾರ್ಡ್ ಸಿಗಲಿದೆ. ಇದರಲ್ಲಿ ನಿಮಗೆ 10 ರೂ.ಗಳಿಂದ 800 ರೂ.ಗಳ ಲಾಭ ಸಿಗಲಿದೆ.


ಇದನ್ನೂ ಓದಿ- Corona ವಿರುದ್ಧದ ಹೋರಾಟದಲ್ಲಿ ರೋಗಿಗಳಿಗೆ ಸಿಕ್ತು ಮತ್ತೊಂದು ಅಸ್ತ್ರ DRDO ಔಷಧಿ 2DG ಲಾಂಚ್


Paytm ಮೂಲಕ ಯಾವ ರೀತಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು? (Instant Gas Cylinder Booking)


1. ಒಂದು ವೇಳೆ ನಿಮ್ಮ ಫೋನ್ ನಲ್ಲಿ Paytm ಆಪ್ ಇಲ್ಲ ಎಂದಾದಲ್ಲಿ ಮೊದಲು ಅದನ್ನು ಡೌನ್ಲೋಡ್ ಮಾಡಿ.


2. ಬಳಿಕ Paytm ಆಪ್ ಓಪನ್ ಮಾಡಿ, ಷೋ ಮೊರ್ ಮೇಲೆ ಕ್ಲಿಕ್ಕಿಸಬೇಕು. 


3. ಬಳಿಕ ರಿಚಾರ್ಜ್ ಹಾಗೂ ಪೇ ಬಿಲ್ ಮೇಲೆ ಕ್ಲಿಕ್ಕಿಸಿ.


4. ಈಗ 'ಬುಕ್ ಎ ಸಿಲಿಂಡರ್' ಆಯ್ಕೆಯ ಮೇಲೆ ಕ್ಲಿಕ್ಕಿಸಿ.


ಇದನ್ನೂ ಓದಿ- NSC ಮೂಲಕ ಎಷ್ಟು ತೆರಿಗೆ ಉಳಿತಾಯ ಮಾಡಬಹುದು? ಉತ್ತಮ ಆದಾಯದ ಜೊತೆಗೆ ಹೂಡಿಕೆಯೂ ಸುರಕ್ಷಿತ


5. ಈಗ ನೀವು ನಿಮ್ಮ ಗ್ಯಾಸ್ ಪೂರೈಕೆದಾರ ಕಂಪನಿಯನ್ನು ಆಯ್ಕೆ ಮಾಡಿ.


6. ಇದಾದ ಬಳಿಕ ನೀವು ನಿಮ್ಮ LPG Id ಅಥವಾ ನಿಮ್ಮ ಅಧಿಕೃತ ಮೊಬೈಲ್ ನಂಬರ್ ನಮೂದಿಸಬೇಕು.


7. ಇದಾದ ಬಳಿಕ ನಿಮಗೆ ಪೇಮೆಂಟ್ ಆಯ್ಕೆ ಸಿಗಲಿದೆ. 


8. ಹಣವನ್ನು ಪಾವತಿಸಿದ ಬಳಿಕ ನಿಮ್ಮ ಸಿಲಿಂಡರ್ ಬುಕ್ ಆಗಲಿದೆ.


ಕ್ಯಾಶ್ ಬ್ಯಾಕ್ ಗೆ ಇರುವ ಷರತ್ತುಗಳು ಯಾವುವು?
ಎಲ್ಲಕ್ಕಿಂತ ಮೊದಲು paytm ಮೂಲಕ ಮೊದಲ ಸಿಲಿಂಡರ್ ಬುಕ್ ನಿಮ್ಮದಾಗಿರಬೇಕು. ಈ ಕೊಡುಗೆ ಮೇ 31ರವರೆಗೆ ಮಾತ್ರ ಇರಲಿದೆ. ಗ್ಯಾಸ್ ಬುಕಿಂಗ್ (Gas Cylinder Booking) ಮಾಡಿದ 24 ಗಂಟೆಯ ಒಳಗೆ ನಿಮಗೆ ಸ್ಕ್ರ್ಯಾಚ್ ಕಾರ್ಡ್ ಸಿಗಲಿದೆ. ಇದನ್ನು ನೀವು 7 ದಿನಗಳ ಒಳಗೆ ಬಳಸಬೇಕು. ಈ ರೀತಿಯ ಕೊಡುಗೆ paytm ತನ್ನ ಗ್ರಾಹಕರಿಗೆ ನೀಡುತ್ತಿರುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು ಕೂಡ paytm ಈ ರೀತಿಯ ಕೊಡುಗೆಯನ್ನು ತನ್ನ ಗ್ರಾಹಕರಿಗೆ ಹೊತ್ತುತಂದಿತ್ತು ಎಂಬುದು ಇಲ್ಲಿ ಗಮನಾರ್ಹ. ಇದಕ್ಕೂ ಮೊದಲು ಕೂಡ ಕಂಪನಿ ತನ್ನ ಗ್ರಾಹಕರಿಗೆ ರೂ.800ರವರೆಗೆ ಕ್ಯಾಶ್ ಬ್ಯಾಕ್ ಕೊದುಗೆಯನ್ನು ಜಾರಿಗೆ ತಂದಿತ್ತು. ಆದರೆ ಈ ಬಾರಿ 809 ರೂ. ಸಿಲಿಂಡರ್ ಮೇಲೆ ಕಂಪನಿ ರೂ.800 ವರೆಗೆ ಕ್ಯಾಶ್ ಬ್ಯಾಕ್ ನೀಡುತ್ತಿದೆ.


ಇದನ್ನೂ ಓದಿ- Health Insurance: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳಿಗೆ IRDAI ಈ ಆದೇಶ ನಿಮಗೂ ಗೊತ್ತಿರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.