Anti Covid-19 Drug 2DG Launched: Corona ವಿರುದ್ಧದ ಹೋರಾಟದಲ್ಲಿ ರೋಗಿಗಳಿಗೆ ಸಿಕ್ತು ಮತ್ತೊಂದು ಅಸ್ತ್ರ DRDO ಔಷಧಿ 2DG ಲಾಂಚ್

Anti Covid-19 Drug 2DG Launched: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಕೊವಿಡ್ -19 ಔಷಧಿ 2DG ಮೊದಲ ಬ್ಯಾಚ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಇಂದು ಬಿಡುಗಡೆಗೊಳಿಸಿದ್ದಾರೆ. 

Written by - Nitin Tabib | Last Updated : May 17, 2021, 12:00 PM IST
  • ಕೊವಿಡ್-19 ವಿರುದ್ಧದ ನಿರ್ಣಾಯಕ ಹೋರಾಟಕ್ಕಿಳಿದ DRDO.
  • '2-ಡಿಆಕ್ಸಿ-ಡಿ-ಗ್ಲುಕೋಸ್' ಔಷಧಿಯನ್ನು ಬಿಡುಗಡೆಗೊಳಿಸಿದ DRDO.
  • ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಂದ ಕೊವಿಡ್ -19 ವಿರೋಧಿ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ.
Anti Covid-19 Drug 2DG Launched: Corona ವಿರುದ್ಧದ ಹೋರಾಟದಲ್ಲಿ ರೋಗಿಗಳಿಗೆ ಸಿಕ್ತು ಮತ್ತೊಂದು ಅಸ್ತ್ರ DRDO ಔಷಧಿ 2DG ಲಾಂಚ್

ನವದೆಹಲಿ: Anti Covid-19 Drug 2DG Launched - ಕೊರೊನಾವೈರಸ್ (Coronavirus) ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ 2DG ಹೆಸರಿನ ಕೊವಿಡ್-19 (Coronavirus Medicine) ವಿರೋಧಿ ಔಷಧಿಯನ್ನು ಬಿಡುಗಡೆಗೊಳಿಸಿದೆ. ಈ ಔಷಧಿಯ ಮೊದಲ ಬ್ಯಾಚ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮತ್ತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ (Dr. Harsh Vardhan) ಇಂದು ಬಿಡುಗಡೆಗೊಳಿಸಿದ್ದಾರೆ.

ಪೌಡರ್ ರೂಪದಲ್ಲಿ ಲಭ್ಯವಿದೆ ಈ ಔಷಧಿ 
DRDO ಹೇಳಿಕೆ ಪ್ರಕಾರ '2-ಡಿಆಕ್ಸಿ-ಡಿ-ಗ್ಲುಕೋಸ್' ಔಷಧಿಯನ್ನು ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್ (INMAS), ಹೈದ್ರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬ್ ಜೊತೆಗೆ ಸೇರಿ ಅಭಿವೃದ್ಧಿಗೊಳಿಸಿದೆ. ಇತ್ತೀಚೆಗಷ್ಟೇ ಈ ಔಷಧಿ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದ ಹಿನ್ನೆಲೆ ಡ್ರಗ್ಸ್ ಕಾಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈ ಔಷಧಿಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಔಷಧಿ ಸ್ಯಾಚೆಟ್ ಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಅಂದರೆ ಇದನ್ನು ನೀರಿನಲ್ಲಿ ಬೆರೆಸಿ ರೋಗಿಗಳಿಗೆ ನೀಡಲಾಗುವುದು ಎನ್ನಲಾಗುತ್ತಿದೆ.

ಇದನ್ನೂ ಓದಿ-Corona Vaccine: ಮಕ್ಕಳಿಗೆ ಈಗಲೇ ಕರೋನಾ ಲಸಿಕೆ ಹಾಕಬೇಡಿ ಎಂದು WHO ಮನವಿ ಮಾಡಿದ್ದೇಕೆ?

ಈ ಔಷಧಿಯಿಂದ ಆಕ್ಸಿಜನ್ ಲೆವಲ್ ಸುಧಾರಿಸಲಿದೆ 
ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು ಗ್ಲುಕೋಸ್ ಆಧಾರಿತ ಈ ಔಷಧಿಯ ಸೇವನೆಯಿಂದ ಕೊರೊನಾ ರೋಗಿಗಳು ಆಕ್ಸಿಜನ್ ಮೇಲೆ  ಹೆಚ್ಚು ಅವಲಂಭಿಸಬೇಕಾಗುವುದಿಲ್ಲ ಎಂದಿದ್ದಾರೆ. ಜೊತೆಗೆ ಅವರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ. ಕ್ಲಿನಿಕಲ್ ಟ್ರಯಲ್ ಅವಧಿಯಲ್ಲಿಯೂ ಕೂಡ ಯಾವ ರೋಗಿಗಳಿಗೆ ಈ ಔಷಧಿಯನ್ನು ನೀಡಲಾಗಿದೆಯೋ, ಅವರ RT-PCR ಟೆಸ್ಟ್ ವರದಿ ತುಂಬಾ ಬೇಗನೆ ಋಣಾತ್ಮಕ ಹೊರಬಂದಿದೆ. ಈ ಔಷಧಿ ನೇರವಾಗಿ ವೈರಸ್ ಪ್ರಭಾವಕ್ಕೆ ಒಳಗಾದ ಕೋಶಗಳಲ್ಲಿ ಜಮಾವಣೆಗೊಳ್ಳುತ್ತದೆ ಹಾಗೂ ವೈರಸ್ ನ ಸಿಂಥೆಸಿಸಿ ಹಾಗೂ ಎನರ್ಜಿ ಪ್ರೊಡಕ್ಷನ್ ಅನ್ನು ತಡೆದು ವೈರಸ್ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಈ ಔಷಧಿಯನ್ನು ಸುಲಭವಾಗಿ ಉತ್ಪಾದಿಸಬಹುದಾಗಿದೆ. ಅಂದರೆ ಶೀಘ್ರದಲ್ಲಿ ಈ ಔಷಧಿಯನ್ನು ಇಡೀ ದೇಶಕ್ಕೆ ಪೂರೈಸಬಹುದು.

ಇದನ್ನೂ ಓದಿ- ಇನ್ಮುಂದೆ 84 ದಿನಗಳ ಬಳಿಕೆ Covishield ವ್ಯಾಕ್ಸಿನ್ ನ ಎರಡನೇ ಡೋಸ್ Appointment ಸಿಗಲಿದೆ

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕೊರೊನಾ ವೈರಸ್ ನ 281386 ಹೊಸ ಪ್ರಕರಣಗಳು ಪತ್ತೆ
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2 ಲಕ್ಷ 81 ಸಾವಿರ 286 ಜನರು ಕೊರೊನಾ ವೈರಸ್ ನ ಸೋಂಕಿಗೆ ಗುರಿಯಾಗಿದ್ದಾರೆ. ಈ ಅವಧಿಯಲ್ಲಿ 4106 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 2 ಕೋಟಿ 49 ಲಕ್ಷ 65 ಸಾವಿರದ 463ಕ್ಕೆ ತಲುಪಿದ್ದು 2 ಲಕ್ಷ 74 ಸಾವಿರದ 390 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 3 ಲಕ್ಷ 78 ಸಾವಿರದ 741 ಜನರು ಚೇತರಿಸಿಕೊಂಡಿದ್ದು, ಕೊವಿಡ್-19 (Covid-19) ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2 ಕೋಟಿ 11 ಲಕ್ಷ 74 ಸಾವಿರದ 76 ಕ್ಕೆ ತಲುಪಿದೆ. ಇದರೊಂದಿಗೆ ದೇಶದಲ್ಲಿರುವ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿಯೂ (Coronavirus Active Cases in India) ಕೂಡ ಇಳಿಕೆಯಾಗಿದ್ದು, ದೇಶಾದ್ಯಂತ 35 ಲಕ್ಷ 16 ಸಾವಿರದ 997 ಜನರ ಮೇಲೆ ಚಿಕಿತ್ಸೆ ನಡೆಯುತ್ತಿದೆ.

ಇದನ್ನೂ ಓದಿ-ಸರ್ಕಾರವನ್ನು ಟೀಕಿಸಿದ ಬಳಿಕ ಕೊರೊನಾ ಸಮಿತಿಗೆ ರಾಜೀನಾಮೆ ನೀಡಿದ ಡಾ.ಶಾಹಿದ್ ಜಮೀಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News