ನವದೆಹಲಿ: ಇಂದು ತಿಂಗಳ ಮೊದಲ ದಿನ. ಜೊತೆಗೆ ಕಾರ್ಮಿಕರ ದಿನಾಚರಣೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಘಾತವನ್ನು ಸರ್ಕಾರಿ ತೈಲ ಕಂಪನಿಗಳು ನೀಡಿದ್ದು, ಕಮರ್ಶಿಯಲ್‌ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆಯನ್ನು ಹೆಚ್ಚಳ ಮಾಡಿದೆ. ಪ್ರತೀ ಸಿಲಿಂಡರ್‌ಗೆ 104 ರೂ. ಹೆಚ್ಚಳ ಮಾಡಿ ಪ್ರಕಟಣೆ ಬಿಡುಗಡೆಗೊಳಿಸಿದೆ. 


COMMERCIAL BREAK
SCROLL TO CONTINUE READING

ಬೆಲೆ ಹೆಚ್ಚಳವು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಗೆ ಅನ್ವಯಿಸದಿದ್ದರೂ ಸಹ, ವಾಣಿಜ್ಯ ಅನಿಲ ಸಿಲಿಂಡರ್‌ಗಳಿಗೆ ಅನ್ವಯಿಸುತ್ತದೆ. ಇದೀಗ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಕಮರ್ಶಿಯಲ್‌ ಗ್ಯಾಸ್ ಸಿಲಿಂಡರ್ ಬೆಲೆ 2,355 ರೂ. ಆಗಿದೆ. ಕಳೆದ ತಿಂಗಳು ಏಪ್ರಿಲ್ 1 ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 268.50 ರೂ.ಗಳಷ್ಟು ಹೆಚ್ಚಿಸಲಾಗಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.


ಇದನ್ನು ಓದಿ: Gold-Silver Price: ಕಾರ್ಮಿಕರ ದಿನದ ಬಂಪರ್‌ ಆಫರ್‌: ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?


ದೇಶೀಯ (ಡೊಮೆಸ್ಟಿಕ್‌) ಗ್ಯಾಸ್ ಸಿಲಿಂಡರ್ ಬೆಲೆ: 
ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 949.5 ರೂ. ಇದೆ. ಇನ್ನು ಕೋಲ್ಕತ್ತಾದಲ್ಲಿ ದೇಶೀಯ ಸಿಲಿಂಡರ್ ರಹಿತ ಸಿಲಿಂಡರ್ ಬೆಲೆ 976 ರೂ., ಮುಂಬೈನಲ್ಲಿ 949.50 ರೂ. ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 965.50 ರೂ. ಲಕ್ನೋದಲ್ಲಿ 987.50 ರೂ ಮತ್ತು ಪಾಟ್ನಾದಲ್ಲಿ 1039.5 ರೂ. ಇದೆ. 


ವಾಣಿಜ್ಯ (ಕಮರ್ಶಿಯಲ್‌) ಸಿಲಿಂಡರ್‌ನ ಹೊಸ ಬೆಲೆ:
ಮೇ 1ರಂದು ಜಾರಿಯಾದ ಹೊಸ ದರಗಳ ಪ್ರಕಾರ, 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ 2,355 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 104 ರೂ. ಏರಿಕೆಯಾಗಿದೆ. ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 102 ರೂ. ಹೆಚ್ಚಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,455 ರೂ.ಗೆ ತಲುಪಿದ್ದು, ಈ ಮೊದಲು ಇದರ ಬೆಲೆ 2351.5 ರೂ. ಆಗಿತ್ತು. ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 102 ರೂಪಾಯಿ ಏರಿಕೆಯಾಗಿದ್ದು, ಹೊಸ ಬೆಲೆ 2307 ರೂಪಾಯಿಗೆ ತಲುಪಿದೆ. ಈ ಹಿಂದೆ ಇದರ ಬೆಲೆ 2205 ರೂ. ಇತ್ತು. 


ಇದನ್ನು ಓದಿ: ಗ್ರಾಹಕರೇ ಗಮನಿಸಿ: ಇಲ್ಲಿದೆ ಇಂದಿನ ಇಂಧನ ಬೆಲೆ


ಪ್ರತೀ ಬಾರಿಯೂ ಸಿಲಿಂಡರ್‌ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ಕೊರೊನಾ ಹೊಡೆದ ಒಂದು ಕಡೆಯಾದರೆ ಇನ್ನೊಂದೆಡೆ ಬೆಲೆ ಏರಿಕೆಯೂ ಜನರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.