ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರದಿಂದ ಕೆಳಗಿಳಿದಿರುವುದನ್ನು ಒಪ್ಪಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದಲ್ಲಿ ಅವರು ಈಗ ಏನು ಮಾಡುತ್ತಿದ್ದಾರೆ..? ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಅವರು ಇದೀಗ ನೂತನ ಪ್ರಧಾನಿ ಶಹಬಾಜ್ ಷರೀಫ್ ವಿರುದ್ಧ ದೊಡ್ಡ ಚಳವಳಿಯನ್ನೇ ನಡೆಸುವುದಾಗಿ ಘೋಷಿಸಿದ್ದಾರೆ.
ಮೇ ಅಂತ್ಯದಲ್ಲಿ ಇಸ್ಲಾಮಾಬಾದ್ ಪ್ರವಾಸ
ಮೇ ತಿಂಗಳ ಕೊನೆಯ ವಾರದಲ್ಲಿ ಲಕ್ಷಗಟ್ಟಲೆ ಬೆಂಬಲಿಗರೊಂದಿಗೆ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಮೆರವಣಿಗೆ ನಡೆಸುವುದಾಗಿ ಇಮ್ರಾನ್ ಖಾನ್ ಶನಿವಾರ ಘೋಷಿಸಿದ್ದಾರೆ. ಇಮ್ರಾನ್ ಖಾನ್ ತಮ್ಮ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಕೋರ್ ಕಮಿಟಿಯೊಂದಿಗೆ ಶನಿವಾರ ಸಭೆ ನಡೆಸಿದರು. ಇದರ ನಂತರ ವಿಡಿಯೋ ಸಂದೇಶ ನೀಡುವ ಮೂಲಕ ತಮ್ಮ ಮುಂದಿನ ನಡೆ ಬಗ್ಗೆ ಘೋಷಿಸಿದರು.
ಇದನ್ನೂ ಓದಿ: Food Crisis: ಮುಂದಿನ 27 ವರ್ಷಗಳಲ್ಲಿ ಇಡೀ ವಿಶ್ವದಲ್ಲಿನ ಆಹಾರವೇ ಮುಗಿದು ಹೋಗಲಿದೆಯಂತೆ!
ಭ್ರಷ್ಟರನ್ನು ಅಧಿಕಾರಕ್ಕೆ ತರಲಾಗಿದೆ
ತಮ್ಮ ವಿಡಿಯೋ ಸಂದೇಶದಲ್ಲಿ ಇಮ್ರಾನ್ ಖಾನ್, ‘ಈ ಮನವಿಯು ಇಡೀ ಪಾಕಿಸ್ತಾನಕ್ಕೆ, ಕೇವಲ ಅವರ ಪಕ್ಷಕ್ಕೆ ಅಲ್ಲ’ ಎಂದು ಹೇಳಿದ್ದಾರೆ. ವಿದೇಶಿ ಷಡ್ಯಂತ್ರದ ಮೂಲಕ ದೇಶವನ್ನು ಹಾಳು ಮಾಡಿದ ಮತ್ತು ಅತ್ಯಂತ ಭ್ರಷ್ಟರನ್ನು ಅಧಿಕಾರದ ಮೇಲ್ಭಾಗದಲ್ಲಿ ಇರಿಸಲಾಗಿದೆ ಎಂಬ ಕಾರಣಕ್ಕಾಗಿ ಈ ಮನವಿಯನ್ನು ಮಾಡಿದ್ದೇನೆ’ ಎಂದು ಹೇಳಿದ್ದಾರೆ.
ಈ ಸರ್ಕಾರ ಪಾಕಿಸ್ತಾನಕ್ಕೆ ಒಳ್ಳೆಯದಲ್ಲ
60ರಷ್ಟು ಸಂಪುಟ ಸದಸ್ಯರು ಜಾಮೀನಿನ ಮೇಲೆ ಹೊರಗಿರುವುದರಿಂದ ಶೆಹಬಾಜ್ ಷರೀಫ್ ಅವರನ್ನು ‘ಅಪರಾಧ ಮಂತ್ರಿ’ ಎಂದು ಇಮ್ರಾನ್ ಖಾನ್ ಟೀಕಿಸಿದ್ದಾರೆ. ವಂಚನೆ, ವಿದೇಶಿ ಷಡ್ಯಂತ್ರದ ನೆರವಿನಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅವರಿಗೆ ಅಧಿಕಾರದಲ್ಲಿರುವ ಹಕ್ಕಿಲ್ಲ. ಅವರು ಎಷ್ಟು ಬೇಗ ಅಧಿಕಾರ ಬಿಡುತ್ತಾರೋ ಪಾಕಿಸ್ತಾನಕ್ಕೆ ಅಷ್ಟು ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Good News: ಭಾರತೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಭಾರತದ ಮುಂದೆ ತನ್ನೀ ಇಚ್ಛೆಯನ್ನು ವ್ಯಕ್ತಪಡಿಸಿದ ಚೀನಾ
ಇಮ್ರಾನ್ ಸರ್ಕಾರ ಪತನವಾಗಿದ್ದೇಕೆ..?
ಮಿತ್ರಪಕ್ಷಗಳಿಂದ ಬೆಂಬಲ ಹಿಂತೆಗೆದುಕೊಂಡ ನಂತರ ಇಮ್ರಾನ್ ಖಾನ್ ಅವರ ಸರ್ಕಾರವು ಬಹುಮತ ಕಳೆದುಕೊಂಡು ಪತನವಾಯಿತು. ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸುವುದನ್ನು ತಪ್ಪಿಸಲು ಇಮ್ರಾನ್ ಭಾರೀ ಸರ್ಕಾರ್ ಮಾಡಿದರೂ ಪ್ರಯೋಜನವಾಗಲಿಲ್ಲ. ಆದರೆ, ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಇದರಲ್ಲಿ ಯಶಸ್ಸು ಕಾಣದೆ ಮತದಾನದಲ್ಲಿ ಪಾಲ್ಗೊಳ್ಳದೆ ಕುರ್ಚಿಯಿಂದ ಇಳಿಯಬೇಕಾಯಿತು. ನಂತರ ವಿರೋಧ ಪಕ್ಷಗಳ ಬೇಡಿಕೆಯ ಮೇರೆಗೆ ಹೊಸ ಸ್ಪೀಕರ್ ಅವಿಶ್ವಾಸ ನಿರ್ಣಯದ ಮೇಲೆ ಮತ ಪಡೆದರು. ಇದರಲ್ಲಿ ಇಮ್ರಾನ್ ಖಾನ್ ಅವರಿಗೆ ವಿದಾಯ ಹೇಳುವ ಮೂಲಕ ಶಹಬಾಜ್ ಷರೀಫ್ ಅವರನ್ನು ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.