ಬೆಂಗಳೂರು : ನೀವು ಗ್ಯಾಸ್ ಸಬ್ಸಿಡಿಯನ್ನು ಪಡೆಯುತ್ತಿದ್ದು, ಭವಿಷ್ಯದಲ್ಲಿಯೂ ಅದನ್ನು ಮುಂದುವರೆಸಬೇಕಾದರೆ ನೀವು ತಕ್ಷಣ ಮಾಡಬೇಕಾದ ಕೆಲಸವೊಂದಿದೆ. ಇದನ್ನು ನೀವು ಮಾಡದೇ ಹೋದಲ್ಲಿ ಗ್ಯಾಸ್ ದರದ ಮೇಲಿನ ಸಬ್ಸಿಡಿ ಸಿಗುವುದಿಲ್ಲ. ಹೌದು, ನಾವಿಲ್ಲಿ eKYC ಬಗ್ಗೆ ಮಾತನಾಡುತ್ತಿದ್ದೇವೆ. ಇದನ್ನು ಮಾಡಿಸಬೇಕಾದರೆ ನೀವು ಗ್ಯಾಸ್ ಏಜೆನ್ಸಿಗೆ ಹೋಗಬೇಕು.ಅಲ್ಲಿ,ಇ-ಕೆವೈಸಿಯನ್ನು ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಯಂತ್ರದ ಮೂಲಕ ಮಾಡಲಾಗುತ್ತದೆ. ಮೊದಲ ಹಂತದಲ್ಲಿ,ಉಜ್ವಲ ಯೋಜನೆ ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.ಈಗ ಸಾಮಾನ್ಯ ಗ್ರಾಹಕರಿಗೆ ಇ-ಕೆವೈಸಿ ಮಾಡಲಾಗುತ್ತಿದೆ. ಇ-ಕೆವೈಸಿಯನ್ನು ಅನುಸರಿಸದಿದ್ದಲ್ಲಿ, ಸಬ್ಸಿಡಿಯನ್ನು ಕೊನೆಗೊಳಿಸುವುದಲ್ಲದೆ  ಹೆಚ್ಚುವರಿ ಸಂಪರ್ಕಗಳನ್ನು ನಿರ್ಬಂಧಿಸುವ ಸಾಧ್ಯತೆಯೂ ಇದೆ. 


COMMERCIAL BREAK
SCROLL TO CONTINUE READING

ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಕಡ್ಡಾಯ : 
ಪಿಎಂ ಉಜ್ವಲ ಯೋಜನೆ ಮತ್ತು ಸಾಮಾನ್ಯ ಗ್ರಾಹಕರಿಗೆ ಬಯೋಮೆಟ್ರಿಕ್ ನೋಂದಣಿಗೆ ನಿರ್ದೇಶನಗಳನ್ನು ನೀಡಿದೆ.ಇದರ ಅನುಸಾರ ಗ್ಯಾಸ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ LPG ಗ್ಯಾಸ್‌ನ KYC ಮಾಡಿಸಬೇಕಾಗುತ್ತದೆ. ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಆದೇಶವನ್ನು ಹೊರಡಿಸಿದೆ.


ಇದನ್ನೂ ಓದಿ : Pink Tax: ಏನಿದು ಪಿಂಕ್ ಟಾಕ್ಸ್? ಯುವತಿಯರಿಂದ ಗುಟ್ಟಾಗಿ ವಸೂಲಿ ಮಾಡಲಾಗುತ್ತಿದೆ ಈ ತೆರಿಗೆ!


LPG ಗ್ಯಾಸ್ e-KYC ಗಾಗಿ ಅಗತ್ಯವಿರುವ ದಾಖಲೆಗಳು :
- ಆಧಾರ್ ಕಾರ್ಡ್
- ಗ್ಯಾಸ್ ಸಂಪರ್ಕ ಸಂಖ್ಯೆ
- ಆಧಾರ್‌ ಜೊತೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ 


ಆಫ್‌ಲೈನ್ LPG ಗ್ಯಾಸ್ e-KYC ಗಾಗಿ :
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಆಫ್‌ಲೈನ್ e-KYC ಗಾಗಿ ನಿಮ್ಮ ಹತ್ತಿರದ ಕೇಂದ್ರವನ್ನು ಭೇಟಿ ಮಾಡಬಹುದು.  1. ಮೊದಲನೆಯದಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಏಜೆನ್ಸಿಗೆ ಹೋಗಬೇಕು.
2. ಈಗ ನೀವು ಅಲ್ಲಿ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು.
3. ಇಲ್ಲಿ ನಿಮ್ಮ ಕಣ್ಣುಗಳು ಅಥವಾ ಬೆರಳುಗಳನ್ನು ಸ್ಕ್ಯಾನ್ ಮಾಡುವ ಉಲ್ಕ ಬಯೋ ಮೆಟ್ರಿಕ್ ತೆಗೆದುಕೊಳ್ಳಲಾಗುತ್ತದೆ.
4. ನಂತರ ನಿಮ್ಮ KYC ಅನ್ನು ಗ್ಯಾಸ್ ಏಜೆನ್ಸಿ ನಿರ್ವಾಹಕರು ಮಾಡುತ್ತಾರೆ.
5. ಈ ರೀತಿಯಲ್ಲಿ ನೀವು ಆಫ್‌ಲೈನ್ ವಿಧಾನಗಳ ಮೂಲಕ LPG ಗ್ಯಾಸ್‌ನ KYC ಪಡೆಯಬಹುದು.


ಇದನ್ನೂ ಓದಿ : ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ : ತರಕಾರಿ ಬೆಲೆ ಕೇಳಿ ಬೆಸ್ತು ಬೀಳುವ ಸ್ಥಿತಿ


ಆನ್‌ಲೈನ್ ಮೋಡ್ ಮೂಲಕ e-KYC ಗಾಗಿ
1. ಮೊದಲು ಅಧಿಕೃತ ವೆಬ್‌ಸೈಟ್ ಗೆ ಹೋಗಿ. 
2. ಮುಖಪುಟದಲ್ಲಿ Check if you need KYC ಮೇಲೆ ಕ್ಲಿಕ್ ಮಾಡಿ .
3. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ.
4. ಈ ಪುಟದಲ್ಲಿ Click Here To Download KYC Form ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
5. ಈಗ KYC ಫಾರ್ಮ್ ನಿಮ್ಮ ಮುಂದೆ ಕಾಣಿಸುತ್ತದೆ.
6. ಈ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. 
7. ಅರ್ಜಿಯಲ್ಲಿ ವಿನಂತಿಸಿದ ಮಾಹಿತಿಯನ್ನು ಭರ್ತಿ ಮಾಡಿ.
8. ಅಗತ್ಯ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ.
9.KYC ಫಾರ್ಮ್ ಅನ್ನು ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಗೆ ಸಲ್ಲಿಸಿ.



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .