Gas Cylinder Price Latest :  ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಇಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ದೇಶದ ಕೋಟ್ಯಂತರ ಕುಟುಂಬಗಳಿಗೆ ಲಾಭವಾಗಲಿದೆ. ಇಂದು ಬೆಳಗ್ಗೆ ಈ ಬಗ್ಗೆ ಟ್ವೀಟ್  ಪ್ರಧಾನಿ ಮೋದಿ  ಟ್ವೀಟ್ ಮಾಡಿದ್ದಾರೆ.   ಮಹಿಳಾ ದಿನದಂದು ನಮ್ಮ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂಪಾಯಿಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ಮಹಿಳಾ ಶಕ್ತಿಯ ಜೀವನವನ್ನು ಸುಲಭಗೊಳಿಸುವುದಲ್ಲದೆ ಕೋಟಿಗಟ್ಟಲೆ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಳು ಸಹಾಯ ಮಾಡುತ್ತದೆ. 


RBI New Guidelines for Credit Cards : ಕ್ರೆಡಿಟ್ ಕಾರ್ಡ್‌ಗಳಿಗೆ ಆರ್‌ಬಿಐ ರೂಪಿಸಿದೆ ಹೊಸ ನಿಯಮ !ಕ್ರೆಡಿಟ್ ಕಾರ್ಡ್‌ದರಾರು ತಿಳಿಯಬೇಕಾದ ವಿಚಾರ


COMMERCIAL BREAK
SCROLL TO CONTINUE READING

ಈಗ ಸಿಲಿಂಡರ್ ಬೆಲೆ ಎಷ್ಟು?
ಪ್ರಸ್ತುತ, ಬೆಂಗಳೂರಿನಲ್ಲಿ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ 905 ರೂ.ಆಗಿತ್ತು. ಈಗ ಸರಕಾರ 100 ರೂ. ಕಡಿತಗೊಳಿಸಿದೆ. ಇದಾದ ನಂತರ ಸಿಲಿಂಡರ್ ಬೆಲೆ 805 ರೂ.ಗೆ ಇಳಿಕೆಯಾಗಲಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂ.ಗಳ ಸಹಾಯಧನ ನೀಡಲಾಗುತ್ತದೆ. ಹೀಗಾಗಿ ಅವರು ಈ ಸಿಲಿಂಡರ್ ಅನ್ನು 603 ರೂ.ಗೆ ಪಡೆಯುವುದು ಸಾಧ್ಯವಾಗುತ್ತದೆ. 


ಈ ಯೋಜನೆಯು ಮಾರ್ಚ್ 2025 ರವರೆಗೆ ಮುಂದುವರಿಯುತ್ತದೆ : 
ಇದಕ್ಕೂ ಮೊದಲು ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಜ್ವಲ ಯೋಜನೆಯ ಮೇಲಿನ 300 ರೂ.ಗಳ ಸಹಾಯಧನವನ್ನು ಒಂದು ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಯಿತು. ಈಗ ಈ ಸಬ್ಸಿಡಿ  ಮಾರ್ಚ್31,  2025 ರವರೆಗೆ ಮುಂದುವರಿಯುತ್ತದೆ. ಇದರ ಅಡಿಯಲ್ಲಿ, ಉಜ್ವಲ ಯೋಜನೆಯ ಮಹಿಳಾ ಫಲಾನುಭವಿಗಳು ವಾರ್ಷಿಕವಾಗಿ 12 ಸಿಲಿಂಡರ್ ಗಳನ್ನು ಪಡೆಯುತ್ತಾರೆ. ಯೋಜನೆಯನ್ನು ಒಂದು ವರ್ಷದವರೆಗೆ ವಿಸ್ತರಿಸುವುದಾಗಿ ಘೋಷಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಮಾರ್ಚ್ 31, 2025 ರವರೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ರಾಹಕರಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ಮುಂದುವರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ :  Gratuity ಸಂಬಂಧಿಸಿದಂತೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಈಗ ಇಷ್ಟು ಲಕ್ಷದವರೆಗೆ ಇರಲ್ಲ ತೆರಿಗೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY


 


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.