LPG Price Increases : ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ.  ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಬೆಲೆಯು  ಇಂದಿನಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಮಾರ್ಚ್ 22 ರಂದು ಅಡುಗೆ ಅನಿಲದ ಬೆಲೆಯನ್ನು  ಪ್ರತಿ ಸಿಲಿಂಡರ್‌ಗೆ 50 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂ.ಗಳ ಹೆಚ್ಚಳ ಮಾಡಲಾಗಿದ್ದು, ಜನ ಸಾಮಾನ್ಯ ಪರಿತಪಿಸುವಂತಾಗಿದೆ. ಈ ಬೆಲೆ ಇಂದಿನಿಂದಲೇ ಜಾರಿಗೆ ಬಂದಿದ್ದು,  ಸಿಲಿಂಡರ್ ಖರೀದಿ ವೇಳೆ 50 ರೂ. ಹೆಚ್ಚು ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ : ಚೆನ್ನೈನಲ್ಲಿ ಇಳಿಕೆಯಾದ ಇಂಧನ ಬೆಲೆ: ನಿಮ್ಮ ಊರಲ್ಲಿ ಪೆಟ್ರೋಲ್‌ ದರ ಎಷ್ಟಿದೆ ಗೊತ್ತಾ?


ಪೆಟ್ರೋಲಿಯಂ ಉದ್ಯಮದ ಪ್ರಾಥಮಿಕ ಮಾಹಿತಿಯ ಪ್ರಕಾರ, ಏಪ್ರಿಲ್‌ನಲ್ಲಿ LPG ಬಳಕೆಯು ಮಾಸಿಕ ಆಧಾರದ ಮೇಲೆ 9.1 ಶೇಕಡಾದಿಂದ 2.2 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಇದು ಏಪ್ರಿಲ್ 2021 ಕ್ಕೆ ಹೋಲಿಸಿದರೆ 5.1 ಶೇಕಡಾದಷ್ಟು  ಹೆಚ್ಚಳವಾಗಿದೆ. ಮಾರ್ಚಿಗೂ ಮೊದಲು ಕಳೆದ ವರ್ಷ ಅಕ್ಟೋಬರ್ 6 ರಂದು  ಅಡುಗೆ ಅನಿಲದ ಬೆಲೆಯನ್ನು ಬದಲಾಯಿಸಲಾಯಿತು.


ಇತ್ತೀಚೆಗೆ ಸರ್ಕಾರಿ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿತ್ತು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.  ವಾಣಿಜ್ಯ LPG ಸಿಲಿಂಡರ್ ಬೆಲೆ 102.50 ರೂ. ಹೆಚ್ಚಳ ಮಾಡಲಾಗಿತ್ತು. ಹೊಸ ಬೆಲೆ ಜಾರಿಯಾದ ನಂತರ  19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಮೇ 1 ರಿಂದ 2253 ರಿಂದ 2355.50 ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ : Gold Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ


ಮೇ 1 ರಂದು, ಜೆಟ್ ಇಂಧನವೂ ದುಬಾರಿಯಾಗಿದೆ. ದೆಹಲಿಯಲ್ಲಿ ಏರ್ ಟರ್ಬೈನ್ ಇಂಧನ ಬೆಲೆಯನ್ನು ಪ್ರತಿ ಕಿಲೋ ಲೀಟರ್‌ಗೆ 116851.46 ರೂ.ಗೆ ಹೆಚ್ಚಿಸಲಾಗಿದೆ. ಈ ಹಿಂದೆ ಎಟಿಎಫ್ ಬೆಲೆಯನ್ನು ಏಪ್ರಿಲ್ 16 ರಂದು ಹೆಚ್ಚಿಸಲಾಗಿತ್ತು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.