Gold Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ

Gold Price Today: ಐದು ದಿನಗಳ ನಂತರ ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ  ಕಂಡು ಬಂದಿದೆ. ಪ್ರತಿ 10 ಗ್ರಾಂಗೆ ಚಿನ್ನದ ಬೆಲೆಯಲ್ಲಿ320 ರೂ. ಗಳ ಇಳಿಕೆಯಾಗಿದೆ.  

Written by - Ranjitha R K | Last Updated : May 7, 2022, 08:10 AM IST
  • ಇಳಿಕೆ ಕಂಡ ಚಿನ್ನದ ಬೆಲೆ
  • ಪ್ರತಿ 10 ಗ್ರಾಂಗೆ ಚಿನ್ನದ ಬೆಲೆಯಲ್ಲಿ 320 ರೂ. ಗಳ ಇಳಿಕೆ
  • ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ
Gold Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ  title=
Gold Price Today (file photo)

ಬೆಂಗಳೂರು  : Gold Price Today : ಮದುವೆ ಸೀಸನ್ ನಲ್ಲಿ ಆಗಾಗ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಬೆಲೆ ಇಳಿಕೆಯಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಮತ್ತೆ ಕುಸಿದಿವೆ. ಬೆಳಗಿನ ಅವಧಿಯಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಕುಸಿತ ಕಂಡುಬಂದಿದೆ. ಚಿನ್ನ ಮತ್ತು ಬೆಳ್ಳಿ ದರಗಳನ್ನು ಬುಲಿಯನ್ ವ್ಯಾಪಾರಿಗಳು ದಿನಕ್ಕೆ ಎರಡು ಬಾರಿ ನೀಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ.

22 ಕ್ಯಾರೆಟ್ ಬೆಲೆ 10 ಗ್ರಾಂಗೆ 47,100  ರೂ : 
 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 51,380 ರೂ.   22 ಕ್ಯಾರೆಟ್ 47, 100 ರೂ.  ಆದರೆ ಇದ್ದರ್ ಹೊರತಾಗಿ ಚಿನ್ನ ಖರೀದಿ ವೇಳೆ  3 ಪ್ರತಿಶತ GST ಪಾವತಿಸಬೇಕಾಗುತ್ತದೆ ಎನ್ನವುದು ನೆನಪಿರಲಿ. 

ಇದನ್ನೂ ಓದಿ : Short Nap at Office: ಕಚೇರಿಯಲ್ಲಿ ಸಣ್ಣ ನಿದ್ದೆ- ಬೆಂಗಳೂರು ಮೂಲದ ಕಂಪನಿಯಿಂದ ಮಹತ್ವದ ಘೋಷಣೆ

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ : 

ನಗರ  24 ಕ್ಯಾರೆಟ್ ಚಿನ್ನದ ಬೆಲೆ  22 ಕ್ಯಾರೆಟ್ ಚಿನ್ನದ ಬೆಲೆ                                 
ಚೆನ್ನೈ 52,810 48,410
ಮುಂಬಯಿ 51,380 47,100
ದೆಹಲಿ 51,380 47,100
ಕೋಲ್ಕತ್ತಾ  51,380 47,100
ಬೆಂಗಳೂರು  51,380 47,100
ಹೈದರಾಬಾದ್  51,380 47,100
ಕೇರಳ  51,380 47,100

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ IBJA ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ :  PAN Card ಫೋಟೋ ಬದಲಿಸುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News