ನವದೆಹಲಿ: LPG Price- ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆಯ ಪ್ರವೃತ್ತಿ ಮುಂದುವರೆದಿದೆ. ದೇಶೀಯ ಗಣಿಗಾರಿಕೆ ಕ್ಷೇತ್ರಗಳಿಂದ ಉತ್ಪತ್ತಿಯಾಗುವ ಅನಿಲದ ಮೇಲೆ ಇದರ ಪರಿಣಾಮವು ಶೀಘ್ರದಲ್ಲೇ ಗೋಚರಿಸುತ್ತದೆ. ಅಕ್ಟೋಬರ್ 1 ರಂದು ಸರ್ಕಾರ ದೇಶೀಯ ಅನಿಲದ ಹೊಸ ಬೆಲೆಗಳನ್ನು ಬಿಡುಗಡೆ ಮಾಡಲಿದೆ. ವಿಶೇಷವೆಂದರೆ ಎಲ್‌ಪಿಜಿಯ ಬೆಲೆಗಳು (LPG Price) ಶೇಕಡಾ 60 ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಎಲ್‌ಪಿಜಿ ಬೆಲೆಗಳು ಹೆಚ್ಚಾಗಬಹುದು:
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಭಾರತದ ತೈಲ ಅನಿಲ ಗಣಿಗಾರಿಕೆ ವಲಯದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಕಂಪನಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಈ ಬಾರಿ ನೈಸರ್ಗಿಕ ಅನಿಲ ಬೆಲೆಯಲ್ಲಿ ಸುಮಾರು 60 ಪ್ರತಿಶತದಷ್ಟು ಹೆಚ್ಚಳವು ಬಹುತೇಕ ಖಚಿತವಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ- LPG Cylinder Discount: ಕೇವಲ ರೂ.9 ಕ್ಕೆ ಮನೆಗೆ ಬರಲಿದೆ LPG Cylinder, ಈ ಮೊಬೈಲ್ ಆಪ್ ಮೇಲೆ ಬುಕಿಂಗ್ ಮಾಡಿ


ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ಬೆಲೆಗಳ (LPG Price) ಹೆಚ್ಚಳದಿಂದಾಗಿ, ತೈಲ ಕಂಪನಿಗಳ ಆದಾಯದ ಮೇಲೂ ಇದರ ಪರಿಣಾಮ ಗೋಚರಿಸುತ್ತದೆ. ಎಲ್‌ಪಿಜಿ ಅನಿಲದ ಮೇಲಿನ ಸಬ್ಸಿಡಿಯನ್ನೂ (LPG Subsidy) ಸರ್ಕಾರ ಕೆಲವು ದಿನಗಳ ಹಿಂದೆ ಕೊನೆಗೊಳಿಸಿದೆ. ಅದರ ನಂತರ ತೈಲ ಕಂಪನಿಗಳು ಎಲ್‌ಪಿಜಿಗೆ ಸರ್ಕಾರ ನೀಡುವ ಸಹಾಯಧನವನ್ನು ಸಹಿಸಬೇಕಾಯಿತು.


ಇದನ್ನೂ ಓದಿ- LPG Subsidy: ನಿಮ್ಮ ಖಾತೆಯಲ್ಲಿ ಎಲ್‌ಪಿಜಿ ಸಬ್ಸಿಡಿ ಬರುತ್ತಿದೆಯೋ ಇಲ್ಲವೋ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಶೀಲಿಸಿ


ಸಬ್ಸಿಡಿ ಸ್ಥಗಿತಗೊಳಿಸುವುದರಿಂದ ಒಎನ್‌ಜಿಸಿ ಲಾಭ:
ಕಂಪನಿಯ ವಾರ್ಷಿಕ ಹಣಕಾಸು ಫಲಿತಾಂಶಗಳ ಬಗ್ಗೆ ಮಾಹಿತಿ ನೀಡಿದ ಒಎನ್‌ಜಿಸಿ (ONGC) ಸಿಎಂಡಿ ಸುಭಾಷ್ ಕುಮಾರ್, 2021 ರ ಜನವರಿ-ಮಾರ್ಚ್‌ನಲ್ಲಿ ತೈಲ ಕಂಪನಿ ಕಚ್ಚಾ ತೈಲವನ್ನು ಬ್ಯಾರೆಲ್‌ಗೆ 58.05 ದರದಲ್ಲಿ ಮಾರಾಟ ಮಾಡಿದೆ ಎಂದು ಹೇಳಿದರು. ಕೆಲವು ದಿನಗಳ ಹಿಂದೆ ಗ್ರಾಹಕರಿಗೆ ನೀಡಿದ್ದ ಸಬ್ಸಿಡಿಯ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ ಕಂಪನಿಯು 6,734 ಕೋಟಿ ರೂ. ಲಾಭ ಗಳಿಸಿದೆ. ಇದಲ್ಲದೆ ಕಂಪನಿಯು ಈ ವರ್ಷ 29,500 ಕೋಟಿ ರೂ.ಗಳಲ್ಲಿ ಹೂಡಿಕೆ ಮಾಡಲಿದೆ ಎಂದು ಸುಭಾಷ್ ಕುಮಾರ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.