LPG Cylinder Discount: ಕೇವಲ ರೂ.9 ಕ್ಕೆ ಮನೆಗೆ ಬರಲಿದೆ LPG Cylinder, ಈ ಮೊಬೈಲ್ ಆಪ್ ಮೇಲೆ ಬುಕಿಂಗ್ ಮಾಡಿ

LPG Cylinder Offer: Paytm LPG Cashback Offer ಜೂನ್ 30ಕ್ಕೆ ಮುಕ್ತಾಯಗೊಳ್ಳುತ್ತಿದೆ. ಈ ಆಪ್ ಮೇಲೆ ಮೊತ್ತಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ರೂ.800 ವರೆಗೆ ಡಿಸ್ಕೌಂಟ್ ಸಿಗುತ್ತಿದೆ.

Written by - Nitin Tabib | Last Updated : Jun 26, 2021, 04:45 PM IST
  • ಅಗ್ಗದ ದರದಲ್ಲಿ ಗ್ಯಾಸ್ ಸಿಲಿಂಡರ್‌ ಖರೀದಿಸಲು ಪೇಟಿಎಂ ಕೊಡುಗೆ ನೀಡುತ್ತಿದೆ.
  • ಗ್ರಾಹಕರು ಜೂನ್ 30 ರ ಮೊದಲು ಪೇಟಿಎಂ ಅಪ್ಲಿಕೇಶನ್‌ನಿಂದ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿದರೆ ಕೊಡುಗೆ ಲಭ್ಯವಾಗಲಿದೆ.
  • ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಮತ್ತು ಇಂಡೇನ್ ಗ್ಯಾಸ್ ಗ್ರಾಹಕರು ಈ ಕೊಡುಗೆಯ ಲಾಭ ಪಡೆಯಬಹುದು.
LPG Cylinder Discount: ಕೇವಲ ರೂ.9 ಕ್ಕೆ ಮನೆಗೆ ಬರಲಿದೆ LPG Cylinder, ಈ ಮೊಬೈಲ್ ಆಪ್ ಮೇಲೆ ಬುಕಿಂಗ್ ಮಾಡಿ title=
Paytm Cashback Offer On Cylinder Booking (File Photo)

Paytm LPG Cashback Offer: LPG ಸಿಲಿಂಡರ್ ಬೆಲೆ ಏರಿಕೆಯಿಂದ ನೀವೂ ಕೂಡ ತೊಂದರೆಗೀಡಾಗಿದ್ದರೆ, ಹಣ ಉಳಿತಾಯ ಮಾಡಲು ನಿಮ್ಮ ಬಳಿ ಇದೆ ಒಂದು ಉತ್ತಮ ಅವಕಾಶ. ಪ್ರಸ್ತುತ ದೆಹಲಿಯಲ್ಲಿ 14.2 ಕೆ.ಜಿ LPG ಸಿಲಿಂಡರ್ ಬೆಲೆ ರೂ.809 ಆಗಿದೆ. ಆದರೆ, ಇಲ್ಲಿ ನಾವು ನಿಮಗೆ ಸೂಚಿಸಿರುವ ರೀತಿಯಲ್ಲಿ ಒಂದು ವೇಳೆ ನೀವು ಸಿಲಿಂಡರ್ ಬುಕ್ ಮಾಡಿದರೆ, ನೀವು ರೂ.800 ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಇದರರ್ಥ ನೀವು ಕೇವಲ 9 ರೂಗಳಲ್ಲಿ LPG ಸಿಲಿಂಡರ್ ಅನ್ನು ಮನೆಗೆ ತರಿಸಿಕೊಳ್ಳಬಹುದು. 

ರೂ.800 ಕ್ಯಾಶ್ ಬ್ಯಾಕ್ ಆಫರ್
Paytm ತನ್ನ ಬಳಕೆದಾರರಿಗೆ ಜಬರ್ದಸ್ತ್ ಕೊಡುಗೆಯನ್ನು ಪ್ರಸ್ತುತಪಡಿಸಿದೆ. ಈ ಆಫರ್ ಅಡಿ ನೀವು Paytm ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು. ಇದರಿಂದ ಕೇವಲ 9 ರೂ ಪಾವತಿಸಿ LPG ಸಿಲಿಂಡರ್ ಪಡೆಯಬಹುದು. Indane, Bharat Gas, HP Gas ಗ್ರಾಹಕರು ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಈ ಕೊಡುಗೆಯ ಅಡಿ ಯಾವುದೇ ಓರ್ವ ಗ್ರಾಹಕ ಮೊಟ್ಟಮೊದಲ ಬಾರಿಗೆ Paytm ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ರೂ.800ರವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಹೀಗಿರುವಾಗ ಒಂದು ವೇಳೆ ನೀವೂ ಕೂಡ Paytm ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಸಿಲ್ಲ ಎಂದಾದಲ್ಲಿ ಇಂದೇ ಬುಕ್ ಮಾಡಿ ಈ ಕೊಡುಗೆಯ ಲಾಭ ಪಡೆಯಬಹುದು.

ಇದನ್ನೂ ಓದಿ-Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ

ಜೂನ್ 30ರವರೆಗೆ ಮಾತ್ರ ಈ ಕ್ಯಾಶ್ ಬ್ಯಾಕ್ ಕೊಡುಗೆ
Paytm ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಈ ರೀತಿಯ ಕೊಡುಗೆಗಳನ್ನು ಪ್ರಸ್ತುತಪಡಿಸುತ್ತದೆ. ಒಂದು ವೇಳೆ ನೀವೂ ಕೂಡ ಈ ಕೊಡುಗೆಯ ಲಾಭ ಪಡೆಯಬೇಕು ಎಂದಾದರೆ, ಜೂನ್ 30ರವರೆಗೆ ನೀವು ಈ ಕೊಡುಗೆಯ ಲಾಭ ಪಡೆಯಬಹುದು. ಆದರೆ, ಮೊಟ್ಟಮೊದಲ ಬಾರಿಗೆ Paytm ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಮಾತ್ರ ಈ ಕೊಡುಗೆ ಇರಲಿದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಿ. ಈ ಕೊಡುಗೆಯ ಅಡಿ ಒಮ್ಮೆ ನೀವು LPG ಸಿಲಿಂಡರ್ ಬುಕ್ ಮಾಡಿ ಹಣವನ್ನು ಪಾವತಿಸಿದರೆ, ನಿಮಗೆ ಒಂದು ಸ್ಕ್ರ್ಯಾಚ್ ಕಾರ್ಡ್ ಸಿಗಲಿದೆ. ಈ ಕಾರ್ಡ್ ಕ್ಯಾಶ್ ಬ್ಯಾಕ್ ಮೌಲ್ಯ ರೂ.800 ಆಗಿರಲಿದೆ. ಈ ಕೊಡುಗೆ ಕನಿಷ್ಠ ಅಂದರೆ, 500 ರೂ. ಪೇಮೆಂಟ್ ಮೇಲೆ ಮಾತ್ರ ಅನ್ವಯಿಸಲಿದೆ. ಈ ಕ್ಯಾಶ್ ಬ್ಯಾಕ್ ಕೊಡುಗೆಯ ಮೊತ್ತ ರೂ.10 ರಿಂದ ರೂ.800ರವರೆಗೆ ಇರಲಿದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು ನೀವು 7 ದಿನಗಳೊಳಗಾಗಿ ತೆರೆಯಬೇಕು. ಇಲ್ಲದೆ ಹೋದಲ್ಲಿ ನಂತರ ಅದನ್ನು ನೀವೂ ಬಳಸುವ ಹಾಗಿಲ್ಲ.

ಇದನ್ನೂ ಓದಿ-PAN Card ಡೌನ್‌ಲೋಡ್ ಮಾಡುವುದು ಹೇಗೆ? ಕೇವಲ 10 ನಿಮಿಷಗಳಲ್ಲಿ ಈ ರೀತಿ ಪಡೆಯಿರಿ ನಿಮ್ಮ ಪ್ಯಾನ್ ಕಾರ್ಡ್

Paytm ನಿಂದ LPG ಸಿಲಿಂಡರ್ ಬುಕ್ ಮಾಡುವುದು ಹೇಗೆ?
>> ಒಂದು ವೇಳೆ ನೀವೂ ಕೂಡ ಈ ಕೊಡುಗೆಯ ಲಾಭ ಪಡೆಯಲು ಬಯಸುತ್ತಿದ್ದರೆ, ನಿಮ್ಮ ಫೋನ್ ನಲ್ಲಿ Paytm App ಇರಬೇಕು. 
>> ಬಳಿಕ ಮೊದಲು ನೀವು ನಿಮ್ಮ Paytm ಆಪ್ ತೆರೆಯಿರಿ. - ನಂತರ 'Recharge and Pay Bills' ಸೆಕ್ಷನ್ ಗೆ ಭೇಟಿ ನೀಡಿ.
>> ಅಲ್ಲಿ ನಿಮಗೆ 'Book a Cylinder'ಆಪ್ಶನ್ ಕಾಣಿಸಿಕೊಳ್ಳಲಿದೆ. 
>> ಇಲ್ಲಿ ನೀವು ನಿಮ್ಮ LPG ಸಿಲಿಂಡರ್ ಪೂರೈಕದಾರ ಕಂಪನಿಯನ್ನು ಆಯ್ಕೆ ಮಾಡಿ. 
>> ಇದರ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಅಥವಾ LPG ID ನಮೂದಿಸಿ. 
>> ಈಗ ನಿಮಗೆ ಪೇಮೆಂಟ್ ಮಾಡುವ ಆಪ್ಶನ್ ಕಾಣಿಸಿಕೊಳ್ಳಲಿದೆ. - ಹಣ ಪಾವತಿಸುವ ಮೊದಲು ಆಫರ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ 
>> 'FIRSTLPG' ಪ್ರೊಮೊ ಕೋಡ್ ಕಾಣಿಸಿಕೊಳ್ಳಲಿದೆ ಅದನ್ನು ನಮೂದಿಸಿ ಹಣ ಪಾವತಿ ಮಾಡಿ.

ಇದನ್ನೂ ಓದಿ-Nominee Benefits: ಜೀವ ವಿಮಾ ಪಾಲಿಸಿಯಲ್ಲಿ ನಾಮಿನಿ ನಮೂದಿಸದಿದ್ದರೆ ಭಾರಿ ನಷ್ಟವಾಗಬಹುದು

ಇದನ್ನೂ ಓದಿ-SBI, HDFC, ICICI ಖಾತೆದಾರರೇ ಎಚ್ಚರ! OTPಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೇ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News