ರೋಚಕ ಸಂಗತಿ: ನಿಮ್ಮ ಜೇಬಿನಲ್ಲಿರುವ ನೋಟಿನ ಮೇಲೆ ಮುದ್ರಿಸಲಾಗಿರುವ ಗಾಂಧೀಜಿ ಭಾವಚಿತ್ರ ಎಲ್ಲಿಂದ ಬಂದಿದೆ
ಭಾರತೀಯ ಕರೆನ್ಸಿ ನೋಟಿನ ಮೇಲೆ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ದೇಸಿ ಕಾಗದದ ಮೇಲೆ ಮುದ್ರಿಸಲಾಗಿರುವ ಈ ಭಾವಚಿತ್ರ ಕರೆನ್ಸಿ ನೋಟುಗಳ ಮೇಲೂ ಕೂಡ ಇದೆ. ಇದು ನಮ್ಮ ಕರೆನ್ಸಿಯ ಟ್ರೇಡ್ ಮಾರ್ಕ್ ಕೂಡ ಆಗಿದೆ.
ನವದೆಹಲಿ: ಮೋಹನ್ ದಾಸ್ ಕರಂ ಚಂದ್ ಗಾಂಧಿ, ಮಹಾತ್ಮಾ ಗಾಂಧಿ (Mahatma Gandhi) ಅಥವಾ ಬಾಪು, ಯಾವುದೇ ಹೆಸರಿಂದ ನೀವು ಗಾಂಧೀಜಿ ಅವರನ್ನು ಕರೆದರೂ ಅವರನ್ನು ಅವರ ಜಯಂತಿಯ ದಿನದಂದು ಸ್ಮರಿಸಲಾಗುತ್ತದೆ. ಇಂತಹುದರಲ್ಲಿ ಅವರ ಕುರಿತಾದ ಕೆಲ ರೋಚಕ ಸತ್ಯಗಳನ್ನು ನೀವು ತಿಳಿದುಕೊಳ್ಳಲೇಬೇಕು. ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರ ಭಾರತೀಯ ಕರೆನ್ಸಿಯ ಟ್ರೇಡ್ ಮಾರ್ಕ್ ರೂಪದಲ್ಲಿಯೂ ಕೂಡ ನೋಡಲಾಗುತ್ತದೆ. ಆದರೆ, ನೋಟುಗಳ ಮೇಲೆ ಮುದ್ರಣಗೊಂಡಿರುವ ಈ ಭಾವಚಿತ್ರ ಬಂದಿದ್ದಾದರೂ ಎಲ್ಲಿಂದ? ಹಾಗೂ ದೇಶದ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿ ಅವರ ಭಾವಚಿತ್ರವನ್ನೇ ಏಕೆ ಬಳಸಿದೆ?
ಇದನ್ನು ಓದಿ- ಕ್ರಿಕೆಟ್‌ನೊಂದಿಗಿನ ನಿಕಟ ಒಡನಾಟ ಹೊಂದಿದ್ದ ಮಹಾತ್ಮ ಗಾಂಧಿ
ಕರೆನ್ಸಿ ಟ್ರೇಡ್ ಮಾರ್ಕ್ ಆಗಿದ್ದಾರೆ ಮಹಾತ್ಮಾ ಗಾಂಧಿ
ಭಾರತೀಯ ಕರನ್ಸಿ ಮೇಲೆ ಮಹಾತ್ಮಾ ಗಾಂಧಿ ಭಾವಚಿತ್ರ ಮುದ್ರಿಸಲಾಗಿದೆ. ದೇಸಿ ಕಾಗದದ ಮೇಲೆ ಮುದ್ರಿಸಲಾಗುವ ಈ ಭಾವಚಿತ್ರ ಕರೆನ್ಸಿ ನೋಟುಗಳ ಮೇಲೆಯೂ ಕೂಡ ಇದೆ. ಐತಿಹಾಸಿಕ ಹಾಗೂ ಭಾರತೀಯ ಕರೆನ್ಸಿಯ ಟ್ರೇಡ್ ಮಾರ್ಕ್ ಆಗಿರುವ ಈ ಭಾವಚಿತ್ರ ಬಂದಿದ್ದಾದರೂ ಎಲ್ಲಿಂದ?. ವಿಷಯ ಏನು ಅಂದ್ರೆ ಇದು ಕೇವಲ ಪೊಟ್ರೆಸ್ ಫೋಟೋ ಅಲ್ಲ. ಇದು ಗಾಂಧೀಜಿ ಅವರಿಗೆ ಸಂಬಂಧಿಸಿದ ಭಾವಚಿತ್ರವಾಗಿದೆ. ಇದೆ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಗಾಂಧೀಜಿ ಅವರ ಪೊಟ್ರೆಸ್ ರೂಪ ಸಿಕ್ಕಿದೆ.
ಎಲ್ಲಿಂದ ಬಂದಿದೆ ಈ ಭಾವಚಿತ್ರ
ಗಾಂಧೀಜಿಯವರು ಆಗಿನ ಬರ್ಮಾ ಮತ್ತು ಭಾರತದ ಬ್ರಿಟಿಷ್ ಕಾರ್ಯದರ್ಶಿಯಾಗಿದ್ದ ಫ್ರೆಡೆರಿಕ್ ಪೆಥಿಕ್ ಲಾರೆನ್ಸ್ ಅವರನ್ನು ಕೋಲ್ಕತ್ತಾದ ವೈಸ್‌ರಾಯ್ ಮನೆಯಲ್ಲಿ ಭೇಟಿಯಾದಾಗ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಈ ಭಾವಚಿತ್ರದಿಂದ ಗಾಂಧಿಯವರ ಮುಖವನ್ನು ಭಾರತೀಯ ಕರೆನ್ಸಿಗಳಲ್ಲಿ ಭಾವಚಿತ್ರದ ರೂಪದಲ್ಲಿ ಮುದ್ರಿಸಲಾಗಿದೆ.
ಬಾಪು ಜೀವನದ ಆಸಕ್ತಿದಾಯಕ ಕಥೆಗಳಿಂದ ಹಣಕಾಸಿನ ಯೋಜನೆಯ ಮಂತ್ರಗಳನ್ನು ಅರ್ಥಮಾಡಿಕೊಳ್ಳಿ
ಕೇವಲ 1 ರೂ. ಕರೆನ್ಸಿ ನೋಟು ಬಿಡುಗಡೆ ಮಾಡುತ್ತದೆ ಸರ್ಕಾರ
ಕರೆನ್ಸಿ ಆಫ್ ಆರ್ಡಿನೆನ್ಸ್ ನಿಯಮಗಳ ಅಡಿ ಭಾರತ ಸರ್ಕಾರ ಕೇವಲ 1 ರೂಪಾಯಿ ಕರೆನ್ಸಿ ಮಾತ್ರ ಬಿಡುಗಡೆ ಮಾಡುತ್ತದೆ. ಉಳಿದ 2 ರಿಂದ 2000 ರೂಪಾಯಿಗಳ ವರೆಗಿನ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸುತ್ತದೆ. ಪ್ರಸ್ತುತ ರೂ.2 ರ ನೋಟಿನ ಮುದ್ರಣ ಬಂದ್ ಆಗಿದೆ. ಆದರೆ, ಆ ನೋಟುಗಳು ಇಂದಿಗೂ ಕೂಡ ಚಾಲ್ತಿಯಲ್ಲಿವೆ.
ಇದನ್ನು ಓದಿ- ಬಾಪು ಅವರ ಜೀವನದಲ್ಲಿ ಬಳಸಿದ ಕೆಲವು ಆಯ್ದ ಕಾರುಗಳಿವು
ಮಹಾತ್ಮಾ ಗಾಂಧಿ ಅವರ ಭಾವಚಿತ್ರಕ್ಕೂ ಮೊದಲು ಕಿಂಗ್ ಜಾರ್ಜ್ ಭಾವಚಿತ್ರವಿತ್ತು
ಇದಕ್ಕೂ ಮೊದಲು ಭಾರತಿನ ಕರೆನ್ಸಿ ನೋಟುಗಳ ಮೇಲೆ ಕಿಂಗ್ ಜಾರ್ಜ್ ಅವರ ಭಾವಚಿತ್ರ ಮುದ್ರಿಸಲಾಗುತ್ತಿತ್ತು. ಕಿಂಗ್ ಜಾರ್ಜ್ ಅವರ ಬಳಿಕ ಆ ಜಾಗದಲ್ಲಿ ಅಶೋಕ ಸ್ಥಂಬ ಮುದ್ರಿಸುವ ರೂಢಿ ಜಾರಿಗೆ ಬಂತು. 1957ರವರೆಗೆ ಭಾರತೀಯ ರೂಪಾಯಿ ಮೌಲ್ಯ 16 ಆಣೆಯಲ್ಲಿತ್ತು ಇದಾದ ಬಳಿಕ ದಶಮಾಂಶ ಕರೆನ್ಸಿ ವ್ಯವಸ್ತೆಯನ್ನು ಅನುಸರಿಸಲಾಯಿತು ಹಾಗೂ ನೂರೂ ರೂಪಾಯಿಯಲ್ಲಿ ಒಂದು ರೂಪಾಯಿ ರಚಿಸಲಾಯಿತು. ಮಹಾತ್ಮಾ ಗಾಂಧಿ ಭಾವಚಿತ್ರ ಮುದ್ರಿತ ಕರೆನ್ಸಿಗಳು 1996 ರಲ್ಲಿ ಕಾಣಿಸಿಕೊಂಡವು ಹಾಗೂ ಅವು ಇಂದಿಗೂ ಕೂಡ ಚಾಲ್ತಿಯಲ್ಲಿವೆ.