Bank Locker Rules: ನಿಮ್ಮ ಬಳಿ ಬ್ಯಾಂಕ್ ಲಾಕರ್ ಇದ್ದರೆ ಈ 5 ವಿಷಯಗಳ ಬಗ್ಗೆ ನಿಮಗೆ ತಿಳಿದಿರಲೇ ಬೇಕು !
Bank Locker Rules:ಲಾಕರ್ ಹಂಚಿಕೆಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಕಾಪಾಡಲು ಆರ್‌ಬಿಐ ಈ ನಿಯಮಗಳನ್ನು ರೂಪಿಸಿದೆ. ಇವುಗಳು ನಿಮಗೂ ತಿಳಿದಿರಲಿ.
Bank Locker Rules : ಮನೆಯಲ್ಲಿ ಒಡವೆ ಆಸ್ತಿ ಪತ್ರಗಳು, ಪ್ರಮುಖ ದಾಖಲೆಗಳನ್ನು ಇಟ್ಟುಕೊಳ್ಳುವುದು ಸೇಫ್ ಅಲ್ಲ. ಹಾಗಾಗಿ ಜನರು ಬ್ಯಾಂಕ್ ಲಾಕರ್ ಅನ್ನು ತೆಗೆದುಕೊಳ್ಳುವ ಮೂಲಕ ನಿರಾಳವಾಗಿ ಇರುತ್ತಾರೆ. ಹೀಗೆ ಬ್ಯಾಂಕ್ ಲಾಕರ್ ತೆಗೆದುಕೊಳ್ಳುವುದಾದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ನಾವು ಯಾವ ಬ್ಯಾಂಕಿನಲ್ಲಿ ಬೇಕಾದರೂ ಲಾಕರ್ ತೆರೆಯಬಹುದು. ಲಾಕರ್ ತೆರೆಯಬೇಕಾದರೆ ಆ ಬ್ಯಾಂಕಿನಲ್ಲಿ ಖಾತೆ ಹೊಂದಿರಲೇ ಬೇಕು ಎನ್ನುವುದು ಕಡ್ಡಾಯವಲ್ಲ. ನೀವು ಬ್ಯಾಂಕಿನಲ್ಲಿ ಖಾತೆ ಹೊಂದಿರುವುದಕ್ಕೂ ಲಾಕರ್ ಗೂ ಯಾವುದೇ ಸಂಬಂಧವಿಲ್ಲ. ನಿಮ್ಮ ಸ್ಯಾಲರಿ ಅಕೌಂಟ್ ಒಂದು ಬ್ಯಾಂಕಿನಲ್ಲಿದ್ದು, ಉಳಿತಾಯ ಖಾತೆ ಇನ್ನೊಂದು ಬ್ಯಾಂಕಿನಲ್ಲಿದ್ದು, ನೀವು ಲಾಕರ್ ಅನ್ನು ಬೇರೆಯೇ ಬ್ಯಾಂಕಿನಲ್ಲಿ ತೆರೆಯುವುದಕ್ಕೂ ಅವಕಾಶವಿದೆ. ಆದರೆ, ಇಲ್ಲಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅನಿವಾರ್ಯ. KYC ಪ್ರಕ್ರಿಯೆ ಪೂರ್ಣವಾದ ನಂತರ ಬ್ಯಾಂಕ್ ಲಾಕರ್ ಅನ್ನು ಪಡೆಯಬಹುದು.
ಆರ್‌ಬಿಐ ನಿಯಮ :
ನಾವು ಲಾಕರ್ ಬೇಕು ಎಂದ ತಕ್ಷಣ ನಮಗೆ ಲಾಕರ್ ಸಿಕ್ಕಿ ಬಿಡುವುದಿಲ್ಲ. ಯಾಕೆಂದರೆ ಕೆಲವು ಬ್ಯಾಂಕ್‌ಗಳಲ್ಲಿ ಲಾಕರ್‌ಗಳು ಯಾವಾಗಲೂ ಲಭ್ಯವಿರುವುದಿಲ್ಲ. ಇದು ಲಾಕರ್ ತೆರೆಯಲು ಹೋದಾಗ ಜನರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ 2021 ರಿಂದ, ಪ್ರತಿ ಬ್ಯಾಂಕ್‌ಗಳು ತಮ್ಮ ಬ್ಯಾಂಕ್‌ನಲ್ಲಿರುವ ಲಾಕರ್‌ಗಳ ಸಂಖ್ಯೆ ಮತ್ತು ಹೊಸ ಲಾಕರ್ ಅರ್ಜಿದಾರರ ವೈಟಿಂಗ್ ಲಿಸ್ಟ್ ಅನ್ನು ನಿರ್ವಹಿಸಲು ಆರ್‌ಬಿಐ ಆದೇಶ ನೀಡಿದೆ. ಬ್ಯಾಂಕ್‌ನಲ್ಲಿ ಹೊಸ ಲಾಕರ್‌ಗಾಗಿ ಅರ್ಜಿ ಸಲ್ಲಿಸಿದಾಗ, ಬ್ಯಾಂಕ್ ನಮ್ಮ ಅರ್ಜಿಯನ್ನು ಸ್ವೀಕರಿಸಲೇಬೇಕು. ಮಾತ್ರವಲ್ಲ ಆ ಅರ್ಜಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಬೇಕು.ನಂತರ, ಬಯಸಿದ ಲಾಕರ್ ಅಥವಾ ವೈಟಿಂಗ್ ಲಿಸ್ಟ್ ವಿವರಗಳನ್ನು ನೀಡಬೇಕು. ಲಾಕರ್ ಹಂಚಿಕೆಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಕಾಪಾಡಲು ಆರ್‌ಬಿಐ ಈ ನಿಯಮಗಳನ್ನು ರೂಪಿಸಿದೆ.
ಇದನ್ನೂ ಓದಿ : ಶಿವರಾತ್ರಿ ಹಬ್ಬಕ್ಕೆ ಬಿಲ್ವಪತ್ರೆಗೆ ಫುಲ್ ಡಿಮ್ಯಾಂಡ್: ಗಗನಮುಖಿಯಾದ ಹೂವು-ಹಣ್ಣಿನ ದರ
ಬ್ಯಾಂಕ್ ಹಕ್ಕು :
ನೀವು ಬ್ಯಾಂಕಿನಲ್ಲಿ ಹೊಸ ಲಾಕರ್ ಅನ್ನು ತೆರೆದಾಗ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಖಾತೆಯನ್ನು ತೆರೆಯುವಂತೆ ನಿಮ್ಮನ್ನು ಕೇಳಬಹುದು. ಆದರೆ ಇದು ಅನಗತ್ಯ. ನಿಯಮಗಳ ಪ್ರಕಾರ, ಮೂರು ವರ್ಷಗಳ ನಂತರ ಬಾಡಿಗೆ ಪಾವತಿಸದ ಮತ್ತು ಯಾವುದೇ ಚಟುವಟಿಕೆ ಇಲ್ಲದೆ ಹೋದರೆ ಬ್ಯಾಂಕ್ ಲಾಕರ್ ಅನ್ನು ಒಡೆಯುವ ಹಕ್ಕನ್ನು ಹೊಂದಿರುತ್ತದೆ.
ನಾಮಿನಿ ಕಡ್ದಾಯ :
ಪ್ರಸ್ತುತ RBI ಬ್ಯಾಂಕ್ ಲಾಕರ್‌ನಲ್ಲಿ ನಾಮಿನಿಗಳನ್ನು ದಾಖಲಿಸುವುದನ್ನು ಕಡ್ಡಾಯಗೊಳಿಸಿದೆ. ಬ್ಯಾಂಕ್ ಲಾಕರ್ ಹೊಂದಿರುವವರು ಅನಿರೀಕ್ಷಿತವಾಗಿ ಸಾವನ್ನಪ್ಪಿದರೆ ಬ್ಯಾಂಕ್‌ಗಳು ಲಾಕರ್‌ಗಳನ್ನು ನಾಮಿನಿಗಳಿಗೆ ಹಸ್ತಾಂತರಿಸುತ್ತವೆ. ಹಲವು ಲಾಕರ್‌ಗಳು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇಲ್ಲಿ ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ನೀವು ಲಾಕರ್ ನಲ್ಲಿ ಸಂಗ್ರಹಿಸುವ ಎಲ್ಲಾ ಐಟಂಗಳನ್ನು ವಿಮೆ ಮಾಡಲಾಗುವುದಿಲ್ಲ. ನಿಮ್ಮ ಲಾಕರ್‌ನಲ್ಲಿರುವ ಯಾವುದೇ ವಸ್ತುಗಳಿಗೆ ಬ್ಯಾಂಕ್ ವಿಮೆಯನ್ನು ಒದಗಿಸುವುದಿಲ್ಲ. ಆದ್ದರಿಂದ, ಆಭರಣಗಳಂತಹ ಬೆಲೆಬಾಳುವ ವಸ್ತುಗಳನ್ನು ಲಾಕರ್‌ನಲ್ಲಿ ಸಂಗ್ರಹಿಸಿದರೆ, ಅವುಗಳನ್ನು ವೃತ್ತಿಪರವಾಗಿ ನಿರ್ಣಯಿಸಿ ಪ್ರತ್ಯೇಕವಾಗಿ ವಿಮೆ ಮಾಡಿಸಿಕೊಳ್ಳುವುದು ಸೂಕ್ತ.
ಇದನ್ನೂ ಓದಿ : Credit Card Rules: ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮ ಬದಲಾಯಿಸಿದ ಆರ್‌ಬಿಐ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.