PPF-SSY ಖಾತೆದಾರರೇ ಗಮನಿಸಿ: ಮಾರ್ಚ್ 31ರ ಮೊದಲು ತಪ್ಪದೇ ಮಾಡಿ ಈ ಕೆಲಸ

PPF SSY Schemes: ನೀವೂ ಸಹ ಸರ್ಕಾರದ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ಹೊಸ ಹಣಕಾಸಿನ ವರ್ಷ ಆರಂಭವಾಗುವ ಮೊದಲು ಈ ಒಂದು ಕೆಲಸವನ್ನು ತಪ್ಪದೆ ಪೂರ್ಣಗೊಳಿಸುವುದು ಅವಶ್ಯಕವಾಗಿದೆ. 

Written by - Yashaswini V | Last Updated : Mar 6, 2024, 01:44 PM IST
  • ಪ್ರಸ್ತುತ ಸಾರ್ವಜನಿಕ ಭವಿಷ್ಯ ನಿಧಿ(ಪಿ‌ಪಿ‌ಎಫ್) ಹೂಡಿಕೆಯಲ್ಲಿ ವಾರ್ಷಿಕ 7.1% ಬಡ್ಡಿಯನ್ನು ನೀಡಲಾಗುತ್ತಿದೆ.
  • ಇದೇ ವೇಳೆ ಸುಕನ್ಯಾ ಸಮೃದ್ಧಿ ಖಾತೆಯಲ್ಲಿನ ಹೂಡಿಕೆಯ ಮೇಲೆ 8.2% ಬಡ್ಡಿಯನ್ನು ನೀಡಲಾಗುತ್ತಿದೆ.
PPF-SSY ಖಾತೆದಾರರೇ ಗಮನಿಸಿ: ಮಾರ್ಚ್ 31ರ ಮೊದಲು ತಪ್ಪದೇ ಮಾಡಿ ಈ ಕೆಲಸ  title=

PPF SSY Schemes: ಪ್ರತಿ ವರ್ಷ ಮಾರ್ಚ್ 31ಅನ್ನು ಹಣಕಾಸು ವರ್ಷದ ಕೊನೆ ದಿನವೆಂದು ಪರಿಗಣಿಸಲಾಗಿದೆ. 2023-2024 ರ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಇದಕ್ಕೂ ಮೊದಲು ನೀವೂ ಸಹ ಸರ್ಕಾರದ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡಿ. ಇಲ್ಲದಿದ್ದರೆ, ನಿಮ್ಮ ಖಾತೆಯನ್ನು ಮುಚ್ಚಬಹುದು. 

ನಿಯಮಗಳ ಪ್ರಕಾರ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ನಂತಹ ಯೋಜನೆಗಳಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ಮೊತ್ತವಹ್ಹು ಠೇವಣಿ ಮಾಡಬೇಕು. ಪಿ‌ಪಿ‌ಎಫ್ ನಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂಪಾಯಿಗಳನ್ನು ಹಾಗೂ ಎಸ್‌ಎಸ್‌ವೈ ಖಾತೆಯಲ್ಲಿ ವಾರ್ಷಿಕವಾಗಿ  ಕನಿಷ್ಠ 250 ರೂಪಾಯಿಗಳನ್ನು ಠೇವಣಿ ಮಾಡಬೇಕು. ಇಲ್ಲದಿದ್ದರೆ ಈ ಖಾತೆಗಳನ್ನು ಮುಚ್ಚಲಾಗುವುದು. ಇದನ್ನು ತಪ್ಪಿಸಲು ಆರ್ಥಿಕ ವರ್ಷ ಕೊನೆಗೊಳ್ಳುವ ಮೊದಲು ಎಂದರೆ 31 ಮಾರ್ಚ್ ಮೊದಲು ನಿಮ್ಮ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡುವುದನ್ನು ಮರೆಯಬೇಡಿ. 

ಇದನ್ನೂ ಓದಿ- UDGAM Portal: ಹಳೆಯ ಕ್ಲೈಮ್ ಮಾಡದ ಠೇವಣಿಗಳಿಂದ ಹಣ ಹಿಂಪಡೆಯಲು ಆರ್‌ಬಿ‌ಐನ ಈ ಪೋರ್ಟಲ್ ಬಳಸಿ

ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸಲು ಶುಲ್ಕ: 
ವಾಸ್ತವವಾಗಿ, ನಿಯಮಗಳ ಅನುಸಾರ ಪಿ‌ಪಿ‌ಎಫ್ ಹಾಗೂ ಎಸ್‌ಎಸ್‌ವೈ ಖಾತೆದಾರರು ಆರ್ಥಿಕ ವರ್ಷದಲ್ಲಿ ಕನಿಷ್ಠ ಠೇವಣಿ ಮಾಡದಿದ್ದರೆ ಖಾತೆಯನ್ನು ನಿಷ್ಕ್ರಿಯ ಗೊಳಿಸಲಾಗುತ್ತದೆ. ಆದಾಗ್ಯೂ, ಈ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಲು  ವರ್ಷಕ್ಕೆ  ಕನಿಷ್ಠ ಮೊತ್ತ (ಪಿಪಿಎಫ್‌ಗೆ 500ರೂ. ಮತ್ತು ಎಸ್‌ಎಸ್‌ವೈ ಯೋಜನೆಗೆ 250 ರೂ.) + 50ರೂ. ಗಳನ್ನು ಡೀಫಾಲ್ಟ್ ಶುಲ್ಕವಾಗಿ ಪ್ರತಿ ವರ್ಷದ ಆಧಾರದ ಮೇಲೆ ಠೇವಣಿ ಮಾಡಬೇಕಾಗುತ್ತದೆ. 

ಇದನ್ನೂ ಓದಿ- EPFO updated News :ನಿವೃತ್ತಿಯ ಮೊದಲು PF ಹಣವನ್ನು ಹಿಂಪಡೆಯುವುದು ಹೇಗೆ? ಏನು ಹೇಳುತ್ತದೆ ನಿಯಮ?

ಗಮನಾರ್ಹವಾಗಿ, ಪ್ರಸ್ತುತ ಸಾರ್ವಜನಿಕ ಭವಿಷ್ಯ ನಿಧಿ(ಪಿ‌ಪಿ‌ಎಫ್) ಹೂಡಿಕೆಯಲ್ಲಿ ವಾರ್ಷಿಕ 7.1% ಬಡ್ಡಿಯನ್ನು ನೀಡಲಾಗುತ್ತಿದೆ. ಇದೇ ವೇಳೆ ಸುಕನ್ಯಾ ಸಮೃದ್ಧಿ ಖಾತೆಯಲ್ಲಿನ ಹೂಡಿಕೆಯ ಮೇಲೆ 8.2% ಬಡ್ಡಿಯನ್ನು ನೀಡಲಾಗುತ್ತಿದೆ. ಈ ಎರಡೂ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕ ವರ್ಷದಲ್ಲಿ ಠೇವಣಿ ಮಾಡಲಾದ ಮೊತ್ತಕ್ಕೆ ಆದಾಯ ತೆರಿಗೆ ಕಾಯಿದೆ 80C ಅಡಿಯಲ್ಲಿತೆರಿಗೆ ವಿನಾಯಿತಿ ಪ್ರಯೋಜನವನ್ನು ಸಹ ಪಡೆಯಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News