ನೌಕರ ವರ್ಗದವರಿಗೊಂದು ಕಹಿ ಸುದ್ದಿ, 2023 ರಲ್ಲಿ ಭಾರಿ ಪ್ರಮಾಣದಲ್ಲಿ ನೌಕರಿ ಕಡಿತಕ್ಕೆ ಮುಂದಾಗಲಿವೆ ಟೆಕ್ ಕಂಪನಿಗಳು
Layoffs In 2023: ವರ್ಷ 2023 ರಲ್ಲಿ ಭಾರಿ ಪ್ರಮಾಣದಲ್ಲಿ ನೌಕರರು ತಮ್ಮ ನೌಕರಿಯನ್ನು ಕಳೆದುಕೊಳ್ಳಲಿದ್ದಾರೆ. ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಹಾಗೂ ಸೆಲಫೋರ್ಸ್ ಗಳಂತಹ ಕಂಪನಿಗಳು ಇದರಲ್ಲಿ ಶಾಮೀಲಾಗಿದ್ದು, ಭಾರಿ ಪ್ರಮಾಣದಲ್ಲಿ ಲೇಆಫ್ ನಡೆಸಲು ಯೋಜನೆ ರೂಪಿಸಿವೆ ಎನ್ನಲಾಗಿದೆ.
Tech Companies Layoff in 2023: 2023 ವರ್ಷವು ಟೆಕ್ ಕಂಪನಿಗಳ ಪಾಲಿಗೆ ಅಷ್ಟೊಂದು ಉತ್ತಮವಾಗಿಲ್ಲ ಎನ್ನಲಾಗುತ್ತಿದೆ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕೋವಿಡ್ -19 ಸಾಂಕ್ರಾಮಿಕದ ಭೀತಿ ಹಿನ್ನೆಲೆ, ಟೆಕ್ ಕಂಪನಿಗಳಿಂದ ಹಿಡಿದು ಇತರ ವಲಯದ ಕಂಪನಿಗಳು ಭಾರಿ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಿವೆ ಎನ್ನಲಾಗುತ್ತದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, 2023 ರಲ್ಲಿಯೂ ಇದು ಮುಂದುವರೆಯಲಿದೆ, ಅನೇಕ ಟೆಕ್ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿವೆ. ಈ ಕಂಪನಿಗಳಲ್ಲಿ ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್, ಸೇಲ್ಸ್‌ಫೋರ್ಸ್ ಮತ್ತು ಇಂತಹ ಅನೇಕ ದೈತ್ಯ ಕಂಪನಿಗಳು ಶಾಮೀಲಾಗಿವೆ.
ಕನ್ಸಲ್ಟಿಂಗ್ ಫರ್ಮ್ ಗ್ರೇ ಅಂಡ್ ಕ್ರಿಸ್‌ಮಸ್ ಇಂಕ್ 2022 ರಲ್ಲಿ 52,771 ಜನರನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು, ಜಾಗತಿಕವಾಗಿ ಟೆಕ್ ಕಂಪನಿಗಳು ಒಟ್ಟು 80,978 ನೌಕರರನ್ನು ವಜಾಗೊಳಿಸಿವೆ. 2000ನೇ ಇಸವಿಯ ನಂತರ ಯಾವುದೇ ಉದ್ಯಮದಿಂದ ಒಂದು ತಿಂಗಳ ಅವಧಿಯಲ್ಲಿ ನಡೆದ ಅತಿ ದೊಡ್ಡ ಕಡಿತ ಇದಾಗಿದೆ. ಇತ್ತೀಚೆಗೆ, ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂಬ ವರದಿಗಳು ಪ್ರಕಟಗೊಂಡಿವೆ.
ಸಾಂಕ್ರಾಮಿಕದ ಕಾಲದಲ್ಲಿ ಕಂಪನಿಗಳು ಭಾರಿ ಲಾಭ ದಾಖಲಿಸಿವೆ
2020 ರ ವರ್ಷದಲ್ಲಿ, ಟೆಕ್ ಕಂಪನಿಗಳು ವರ್ಕ್ ಫ್ರಮ್ ಹೋಂ ಸೌಲಭ್ಯವನ್ನು ಒದಗಿಸಿದ್ದವು, ಇದರಿಂದ ಕಂಪನಿಗಳು ಮಾಡುವ ವೆಚ್ಚದಲ್ಲಿ ಭಾರಿ ಕಡಿತ ಕಂಡುಬಂದಿತ್ತು ಈ ಕಡಿತದ ನಂತರ, ಕಂಪನಿಗಳ ಲಾಭವೂ ಹೆಚ್ಚಾಗಿದೆ ಮತ್ತು ಷೇರುಗಳಲ್ಲೂ ಏರಿಕೆ ಕಂಡುಬಂದಿದ್ದು, ಇದೀಗ ಕಂಪನಿಗಳು ನಷ್ಟದತ್ತ ಸಾಗುತ್ತಿವೆ. ಹೀಗಾಗಿ ನೌಕರರ ಹಿಂಬಡ್ತಿಗೆ ಸಿದ್ಧತೆ ನಡೆದಿದೆ.
ಯಾವ ಕಂಪನಿ ಎಷ್ಟು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ
>> ಬ್ಲೂಮ್ ಬರ್ಗ್ ವರದಿಯ ಪ್ರಕಾರ, ಇ-ಕಾಮರ್ಸ್ ವೆಬ್‌ಸೈಟ್ ಕಂಪನಿ ಅಮೆಜಾನ್ ಜಾಗತಿಕವಾಗಿ 18000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
>> ಫೇಸ್ ಬುಕ್ ಒಡೆತನದ ಕಂಪನಿ 10,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ.
>> ಟೆಕ್ ಸಂಸ್ಥೆ ಮೈಕ್ರೋಸಾಫ್ಟ್ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
>> ಸೇಲ್ಸ್‌ಫೋರ್ಸ್ ಒಟ್ಟು 8000 ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
>> HP 6000, Twitter 6,700 ಮತ್ತು ಸೀಗೇಟ್ 3,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿವೆ.
ಇದನ್ನೂ ಓದಿ-ಇನ್ಮುಂದೆ ವಿದೇಶಗಳಲ್ಲಿಯೂ ಕೂಡ ಧೂಳೆಬ್ಬಿಸಲಿದೆ ಈ ಮೇಡ್ ಇನ್ ಇಂಡಿಯಾ ಕಾರು
ಈ ಕಂಪನಿಗಳು ಕೂಡ ವಜಾಗೊಳಿಸಲು ಯೋಜನೆ ರೂಪಿಸಿವೆ
ಮೈಕ್ರೋಸಾಫ್ಟ್ 10,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಕಂಪನಿಯ ಒಟ್ಟು ಜಾಗತಿಕ ಉದ್ಯೋಗಿಗಳ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ. ಅಡೋಬ್ ತನ್ನ 100 ಉದ್ಯೋಗಿಗಳನ್ನು ವಜಾಗೊಳಿಸಿದರೆ, ಟೆಕ್ ಕಂಪನಿ ಸಿಸ್ಕೊ ತನ್ನ ಶೇ. 5 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಿದೆ. Coinbase 1200 ಉದ್ಯೋಗಿಗಳು, Dapper Labs ಶೇ. 22, Qualcomm, Silvergate, Upstart ಮತ್ತು ಇತರ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತೆಗೆದುಹಾಕಲು ಯೋಜಿಸಿವೆ. ಈ ಕಂಪನಿಗಳು 2023 ರಲ್ಲಿ ಜನರನ್ನು ವಜಾ ಮಾಡುತ್ತಿವೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.