ಬಜೆಟ್ ಮಂಡನೆಗೂ ಮುನ್ನವೇ ನೌಕರ ವರ್ಗಕ್ಕೆ ಭಾರಿ ಸಂತಸದ ಸುದ್ದಿ! ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಗೊತ್ತಾ?

Salary Hike: ಕಾರ್ನ್ ಫೆರಿಯ ಅಧ್ಯಕ್ಷ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ನವನೀತ್ ಸಿಂಗ್, ವಿಶ್ವಾದ್ಯಂತದ ದೇಶಗಳಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಮಂದಗತಿಯ ಬಗ್ಗೆ ಮಾತನಾಡಿದ್ದಾರೆ, ಆದರೆ ಭಾರತದ ಆರ್ಥಿಕತೆಯ ಸಂದರ್ಭದಲ್ಲಿ, ಜಿಡಿಪಿ ಶೇಕಡಾ ಆರು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.  

Written by - Nitin Tabib | Last Updated : Jan 17, 2023, 07:24 PM IST
  • ಕಂಪನಿಗಳ ಪ್ರಮುಖ ಪ್ರತಿಭೆಗಳ ವೇತನ ಹೆಚ್ಚಳವು
  • ಶೇಕಡಾ 15 ರಿಂದ 30 ರಷ್ಟು ಹೆಚ್ಚಾಗಬಹುದು ಎಂದು ಸಿಂಗ್ ಹೇಳಿದ್ದಾರೆ.
  • ಇತರ ಕೆಲ ವಲಯಗಳಿಗೆ ಈ ಹೆಚ್ಚಳವು ಭಿನ್ನವಾಗಿರಬಹುದು.
ಬಜೆಟ್ ಮಂಡನೆಗೂ ಮುನ್ನವೇ ನೌಕರ ವರ್ಗಕ್ಕೆ ಭಾರಿ ಸಂತಸದ ಸುದ್ದಿ! ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಗೊತ್ತಾ? title=
ವೇತನ ಹೆಚ್ಚಳ ಸಮೀಕ್ಷೆ

Salary Hike In Indian Companies: ವಿಶ್ವಾದ್ಯಂತ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆ ಒಂದೆಡೆ ಜನ ಕೆಲಸ ಕಳೆದುಕೊಳ್ಳುತ್ತಿದ್ದು, ಹಲವು ಕಂಪನಿಗಳು ಲೇಆಫ್ ತಂತ್ರ ಅನುಸರಿಸುತ್ತಿವೆ, ಹೀಗಿರುವಾಗ ನೌಕರರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ವಾಸ್ತವದಲ್ಲಿ  ಭಾರತೀಯ ಕಂಪನಿಗಳು ಈ ವರ್ಷ ವೇತನವನ್ನು ಹೆಚ್ಚಿಸಲಿವೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ವರ್ಷ ಭಾರತೀಯ ಕಂಪನಿಗಳು ಸರಾಸರಿ ವೇತನವನ್ನು ಶೇಕಡಾ 9.8 ರಷ್ಟು ಹೆಚ್ಚಿಸಬಹುದು ಎಂದು ಸಮೀಕ್ಷೆ ಹೇಳಿದೆ. ಇದು ಹಿಂದಿನ ವರ್ಷ ಅಂದರೆ 2022 ರ ಶೇಕಡಾ 9.4 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಕಾರ್ನ್ ಫೆರ್ರಿಯ ಸಮೀಕ್ಷೆಯ ಪ್ರಕಾರ, ಉನ್ನತ ಪ್ರತಿಭೆಗಳ ವೇತನ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳಿದೆ.

ವೇತನ ಹೆಚ್ಚಳ
8 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸುಮಾರು 818 ಸಂಸ್ಥೆಗಳನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಲಾಗಿತ್ತು. ಈ ಸಮೀಕ್ಷೆಯ ಪ್ರಕಾರ, 2023 ರಲ್ಲಿ, ಭಾರತದಲ್ಲಿ ವೇತನವು 9.8% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. 2020 ರಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ವೇತನ ಹೆಚ್ಚಳವು ಶೇಕಡಾ 6.8 ಕ್ಕಿಂತ ಕಡಿಮೆಯಾಗಿತ್ತು. ಪ್ರಸ್ತುತ ಪರಿಸ್ಥಿತಿಯು ಉತ್ತಮ ಸೂಚನೆಗಳನ್ನು ನೀಡುತ್ತಿದೆಯಾದರೂ.  ಡಿಜಿಟಲ್ ಸಾಮರ್ಥ್ಯ ವೃದ್ಧಿಯ  ಮೇಲೆ ಭಾರತದ ಗಮನ ಕೇಂದ್ರೀಕರಣಕ್ಕೆ ಅನುಗುಣವಾಗಿ, ಸಮೀಕ್ಷೆಯು ಜೀವ ವಿಜ್ಞಾನ ಮತ್ತು ಆರೋಗ್ಯ ಮತ್ತು ಹೈಟೆಕ್ ವಲಯಗಳಲ್ಲಿನ ಬೆಳವಣಿಗೆಯನ್ನು ಕ್ರಮವಾಗಿ 10.2 ಪ್ರತಿಶತ ಮತ್ತು 10.4 ಪ್ರತಿಶತಕ್ಕೆ ತಲುಪುವ ಗುರಿಯನ್ನು ಹೊಂದಿವೆ.

ಇದನ್ನೂ ಓದಿ-Economic Recession: ಭಾರತಕ್ಕೂ ತಟ್ಟಲಿದೆ ಆರ್ಥಿಕ ಹಿಜರಿತದ ಬಿಸಿ, ಕೇಂದ್ರ ಸಚಿವರ ಬೆಚ್ಚಿಬೀಳಿಸುವ ಹೇಳಿಕೆ

ಸ್ಯಾಲರಿ ಹೈಕ್ 
ಕಾರ್ನ್ ಫೆರಿಯ ಅಧ್ಯಕ್ಷ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ನವನೀತ್ ಸಿಂಗ್, ವಿಶ್ವಾದ್ಯಂತದ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಮಂದಗತಿಯ ಬಗ್ಗೆ ಮಾತನಾಡಿದ್ದಾರೆ, ಆದರೆ ಭಾರತದ ಆರ್ಥಿಕತೆಯ ಸಂದರ್ಭದಲ್ಲಿ, ಜಿಡಿಪಿ ಶೇಕಡಾ 6ರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Best Mileage Car: 35 ಕಿಮೀ ಮೈಲೇಜ್, ಅದ್ಭುತ ವೈಶಿಷ್ಟ್ಯಗಳು, ಬೆಲೆ ಕೇವಲ 5.25 ಲಕ್ಷ

ವೇತನ
ಕಂಪನಿಗಳ ಪ್ರಮುಖ ಪ್ರತಿಭೆಗಳ ವೇತನ ಹೆಚ್ಚಳವು ಶೇಕಡಾ 15 ರಿಂದ 30 ರಷ್ಟು ಹೆಚ್ಚಾಗಬಹುದು ಎಂದು ಸಿಂಗ್ ಹೇಳಿದ್ದಾರೆ. ಇತರ ಕೆಲ ವಲಯಗಳಿಗೆ ಈ ಹೆಚ್ಚಳವು ಭಿನ್ನವಾಗಿರಬಹುದು. ಅಂದರೆ ಸೇವಾ ವಲಯದಲ್ಲಿ  9.8%, ವಾಹನ ವಲಯದಲ್ಲಿ 9%, ರಾಸಾಯನಿಕ ವಲಯದಲ್ಲಿ 9.6%, ಗ್ರಾಹಕ ಸರಕುಗಳ ವಲಯದಲ್ಲಿ 9.8% ಮತ್ತು ಚಿಲ್ಲರೆ ವಲಯದಲ್ಲಿ ಇದು 9% ರಂತೆ ಇದ್ರಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News