ನವದೆಹಲಿ : ವಿವಿಧ ವರ್ಗದ ಜನರ ಅನುಕೂಲಕ್ಕಾಗಿ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಜನರಿಗೆ ಸಾಕಷ್ಟು ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ. ಉತ್ತರ ಪ್ರದೇಶದ ಯೋಗಿ ಸರ್ಕಾರವು ಜನರ ಹಿತದೃಷ್ಟಿಯಿಂದ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಯೋಜನೆಗಳಲ್ಲಿ ಒಂದು ಮದುವೆಗೆ ಸಂಬಂಧಿಸಿದ್ದಾಗಿದೆ.  ಮದುವೆಯಾದ ಮೇಲೆ ಸರ್ಕಾರದ ವತಿಯಿಂದ ಹಣ ನೀಡಲಾಗುತ್ತಿದೆ. ಆದರೆ ಈ ಮೊತ್ತವನ್ನು ಪಡೆಯಲು, ಕೆಲವು ಷರತ್ತುಗಳನ್ನು ಅನುಸರಿಸುವುದು ಅಗತ್ಯವಾಗಿದೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ  ಸಾಮೂಹಿಕ ವಿವಾಹ ಯೋಜನೆ :
ಅಕ್ಟೋಬರ್ 2017 ರಿಂದ, "ಮುಖ್ಯಮಂತ್ರಿ  ಸಾಮೂಹಿಕ ವಿವಾಹ ಯೋಜನೆ"ಯನ್ನು ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿದೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಸಮುದಾಯಗಳು ಮತ್ತು ಧರ್ಮಗಳ ಸಂಪ್ರದಾಯಗಳ ಪ್ರಕಾರ ವಿವಾಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ವಿವಾಹ ಸಮಾರಂಭದಲ್ಲಿ ಅನಗತ್ಯ ಪ್ರದರ್ಶನ ಮತ್ತು ವ್ಯರ್ಥ ಖರ್ಚುಗಳನ್ನು ತೊಡೆದುಹಾಕುವುದು ಯೋಜನೆಯ ಉದ್ದೇಶವಾಗಿದೆ.


ಇದನ್ನೂ ಓದಿ : Renault Kiger 2023: ಭಾರಿ ಅಬ್ಬರ ಸೃಷ್ಟಿಸಲು ಬಂದೆ ಬಿಟ್ತು 8 ಲಕ್ಷಕ್ಕೂ ಕಡಿಮೆ ಬೆಲೆಯ ಎಸ್ಯುವಿ, ಪಂಚ್, ಬ್ರೆಜ್ಜಾಗೆ ನೇರ ಪೈಪೋಟಿ


ಈ ಯೋಜನೆಯಡಿ ಇಷ್ಟು ಪ್ರಯೋಜನವನ್ನು ಪಡೆಯಬಹುದು : 
ಯಾವ  ಕುಟುಂಬಗಳ ವಾರ್ಷಿಕ ಆದಾಯ ಮಿತಿ  2 ಲಕ್ಷದ ಅಡಿಯಲ್ಲಿ ಬರುತ್ತದೆಯೋ ಅವರು ಈ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಯೋಜನೆಯಡಿ ವಿಧವೆ, ಪರಿತ್ಯಕ್ತ, ವಿಚ್ಛೇದಿತ ಮಹಿಳೆಯರ ವಿವಾಹಕ್ಕೂ ಅವಕಾಶವಿದೆ. ಈ ಯೋಜನೆಯಲ್ಲಿ ವೈವಾಹಿಕ ಜೀವನ ನಡೆಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಮದುವೆಯ ವಿಧಿವಿಧಾನಗಳಿಗೆ ಬೇಕಾಗುವ ಬಟ್ಟೆ, , ಕಾಲುಂಗುರ, ಕಾಲ್ಗೆಜ್ಜೆ ಪಾತ್ರೆ ಮುಂತಾದ ವಸ್ತುಗಳನ್ನು ಖರೀದಿಸಲು 35,000 ಅನುದಾನವನ್ನು ವಧುವಿನ ಖಾತೆಗೆ ಹಾಕಲಾಗುತ್ತದೆ. ಅಲ್ಲದೆ  10,000 ನಗದನ್ನು ವಿವಾಹ ಸಂದರ್ಭದಲ್ಲಿ ನೀಡಲಾಗುವುದು. 


ಯೋಜನೆಯ ಪ್ರಯೋಜನ ಪಡೆಯಲು ಇಲ್ಲಿ ಅರ್ಜಿ ಸಲ್ಲಿಸಬಹುದು :
ಇದಲ್ಲದೆ, ಪ್ರತಿ ಜೋಡಿಯ ವಿವಾಹ ಸಮಾರಂಭಕ್ಕೆ 6,000 ರೂ.ಗಳನ್ನು ಖರ್ಚು ಮಾಡುವ ಸಲುವಾಗಿ ನೀಡಲಾಗುತ್ತದೆ. ಈ ರೀತಿಯಾಗಿ, ಯೋಜನೆಯಡಿ, ದಂಪತಿಗಳ ಮದುವೆಗೆ ಒಟ್ಟು 51,000 ರೂ. ಸರ್ಕಾರದ ವತಿಯಿಂದ ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯಲು ನಗರ ಪಾಲಿಕೆ (ನಗರ ಪಂಚಾಯತ್, ಪುರಸಭೆ, ನಗರಸಭೆ), ಕ್ಷೇತ್ರ ಪಂಚಾಯತ್, ಜಿಲ್ಲಾ ಪಂಚಾಯತ್ ಮಟ್ಟದ ನೋಂದಣಿ ಮಾಡಬೇಕಾಗುತ್ತದೆ. ಕನಿಷ್ಠ 10 ಜೋಡಿಗಳ ವಿವಾಹವನ್ನು ಸಾಮೂಹಿಕ ವಿವಾಹದಲ್ಲಿ ಆಯೋಜಿಸಲು ವ್ಯವಸ್ಥೆ ಮಾಡಲಾಗುತ್ತದೆ.  


ಇದನ್ನೂ ಓದಿ : Pension News: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, ಮೇ 3 ದಿನಾಂಕ ಬರೆದಿಟ್ಟುಕೊಳ್ಳಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.