7th Pay Commission DA Hike : ಸರ್ಕಾರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದ ನಂತರ, 52 ಲಕ್ಷ ಕೇಂದ್ರ ನೌಕರರು ಮತ್ತು 48 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆಯ ಬಗ್ಗೆ ಒಳ್ಳೆಯ ಸುದ್ದಿ ಸಿಗಲಿದೆ. ಜನವರಿ 1ರಿಂದ ಜಾರಿಗೆ ಬಂದಿರುವ ತುಟ್ಟಿ ಭತ್ಯೆಯ ನಿರ್ಧಾರವನ್ನು ಸರ್ಕಾರ ಮಾರ್ಚ್ 27ಕ್ಕೆ ತೆಗೆದುಕೊಂಡಿತ್ತು. ಈ ಮೂಲಕ ಉದ್ಯೋಗಿಗಳು ಮತ್ತು ಪಿಂಚಣಿದಾರರ ಡಿಎ ಜನವರಿ ಒಂದರಿಂದ 4 ಶೇ. ದಷ್ಟು ಹೆಚ್ಚಳವಾಗಿದೆ. ಮುಂದಿನ ತುಟ್ಟಿಭತ್ಯೆ ಜುಲೈ 1 ರಿಂದ ಅನ್ವಯವಾಗಲಿದೆ.
ಫೆಬ್ರವರಿಯಲ್ಲಿ ಕುಸಿತ ಕಂಡಿದ್ದ AICPIIndex ಮಾರ್ಚ್ ನಲ್ಲಿ ಏರಿಕೆ ಕಂಡಿದೆ. ಜುಲೈ ತಿಂಗಳ ಡಿಎ ಜಾರಿಯಾಗುವ ಮುನ್ನವೇ ಕೇಂದ್ರ ನೌಕರರಿಗೆ ದೊಡ್ಡ ಅಪ್‌ಡೇಟ್ ಬಂದಿದೆ. ಹೌದು, ಮಾರ್ಚ್ ತಿಂಗಳ ಎಐಸಿಪಿಐ ಸೂಚ್ಯಂಕ ಡೇಟಾವನ್ನು ಕಾರ್ಮಿಕ ಸಚಿವಾಲಯವು ಏಪ್ರಿಲ್ 28 ರಂದು ಬಿಡುಗಡೆ ಮಾಡಿದೆ. ಇದರ ಪ್ರಕಾರ ಫೆಬ್ರವರಿಯಲ್ಲಿ ಕುಸಿತ ಕಂಡಿದ್ದ ಅಂಕಿ ಅಂಶ ಮಾರ್ಚ್‌ನಲ್ಲಿ ಏರಿಕೆಯಾಗಿರುವುದು ಸ್ಪಷ್ಟವಾಗಿದೆ. ಫೆಬ್ರವರಿ 2023ರಲ್ಲಿ, ಈ ಅಂಕಿ ಅಂಶದಲ್ಲಿ ಕುಸಿತ ಕಂಡು ಬಂದಿತ್ತು. ಇದೀಗ AICPIIndex ನಲ್ಲಿ ಏರಿಕೆಯಾಗಿರುವುದರಿಂದ ನಿರೀಕ್ಷೆಯಂತೆ 4 ಪ್ರತಿಶತದವರೆಗೆ ಡಿಎ ಹೆಚ್ಚಳವಾಗಬಹುದು.
ಇದನ್ನೂ ಓದಿ : ಮೇ ತಿಂಗಳಲ್ಲಿ 14 ಬ್ಯಾಂಕ್ ರಜೆ ! ರಜಾದಿನಗಳ ಪೂರ್ಣ ಪಟ್ಟಿ ಇಲ್ಲಿದೆ
ಮಾರ್ಚ್‌ನಲ್ಲಿ ಏರಿಕೆ ಕಂಡ ಎಐಸಿಪಿಐ ಸೂಚ್ಯಂಕ :
ಡಿಸೆಂಬರ್ 2022 ರವರೆಗಿನ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳ ಆಧಾರದ ಮೇಲೆ ಜನವರಿ 2023ರಲ್ಲಿ ತುಟ್ಟಿ ಭತ್ಯೆಯನ್ನು ಘೋಷಿಸಲಾಯಿತು. ಆದರೆ, 2023ರ ಜನವರಿಯಿಂದ ಜೂನ್‌ವರೆಗಿನ ಅಂಕಿಅಂಶಗಳನ್ನು ಆಧಾರವಾಗಿ ಪರಿಗಣಿಸಿ ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಘೋಷಿಸಲಾಗುತ್ತದೆ. ಜನವರಿಯಲ್ಲಿ, ಈ ಅಂಕಿ ಅಂಶವು 132.8 ಅಂಕಗಳಿಗೆ ಏರಿತ್ತು. ಇದಾದ ನಂತರ ಫೆಬ್ರವರಿಯಲ್ಲಿ ಕುಸಿತ ಕಂಡು 132.7 ಅಂಕಗಳಿಗೆ ಇಳಿದಿತ್ತು. ಇದೀಗ ಮತ್ತೆ ಮಾರ್ಚ್‌ನ ಹೆಚ್ಚಳದೊಂದಿಗೆ 133.3 ಪಾಯಿಂಟ್‌ಗಳಿಗೆ ಏರಿದೆ.
ಹೆಚ್ಚಳವಾಗುವುದು ತುಟ್ಟಿ ಭತ್ಯೆ :
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 46 ಕ್ಕೆ ತಲುಪಲಿದೆ. ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 42 ರಷ್ಟಿದೆ. ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಎಐಸಿಪಿಐ ಸೂಚ್ಯಂಕ ದತ್ತಾಂಶದ ಆಧಾರದ ಮೇಲೆ ಜೂನ್ ತಿಂಗಳೊಳಗೆ ಪ್ರಕಟಿಸಲಾಗುವುದು. ಈ ಬಾರಿ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಹೊಸ ತುಟ್ಟಿಭತ್ಯೆ ಹೆಚ್ಚಳವನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸಬಹುದು. ಆದರೆ ಇದು ಜುಲೈ 1 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ : LPG Price: ತಿಂಗಳ ಮೊದಲ ದಿನವೇ ಗುಡ್ ನ್ಯೂಸ್: LPG ಸಿಲಿಂಡರ್ ಬೆಲೆ ಭಾರೀ ಇಳಿಕೆ; ಎಷ್ಟು ಅಗ್ಗವಾಯ್ತು ದರ?
ಡಿಎ ಎಷ್ಟು ಹೆಚ್ಚಾಗುತ್ತದೆ :
ಜನವರಿಯಲ್ಲಿ ಡಿಎಯಲ್ಲಿ ಶೇಕಡಾ 4ರಷ್ಟು ಹೆಚ್ಚಳದ ನಂತರ, ಕೇಂದ್ರ ನೌಕರರ ತುಟ್ಟಿಭತ್ಯೆ ಶೇಕಡಾ 42 ಕ್ಕೆ ಏರಿದೆ. ಈಗ ಇದರಲ್ಲಿ ಇನ್ನೂ ಶೇ.4ರಷ್ಟು ಹೆಚ್ಚಳವಾದರೆ, ಡಿಎ ಶೇ.46ಕ್ಕೆ ಏರಿಕೆಯಾಗಲಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ಡಿಎ ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ. ಜನವರಿ 2023 ರ ಡಿಎಯನ್ನು ಈಗಾಗಲೇ ಘೋಷಿಸಲಾಗಿದೆ. ಜುಲೈ 2023 ರ ಡಿಎಯನ್ನು ಇನ್ನು ಘೋಷಿಸಬೇಕಿದೆ.
ಡೇಟಾವನ್ನು ಯಾರು ಬಿಡುಗಡೆ ಮಾಡುತ್ತಾರೆ?
ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು, ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ : Business Idea: ಈ ಬಿಸ್ನೆಸ್ ಆರಂಭಿಸಿದರೆ ಹಣದ ಸುರಿಮಳೆಯಾಗುತ್ತದೆ, ಸರ್ಕಾರ ನೀಡುತ್ತೇ 7.35 ಲಕ್ಷ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ