Maruti Black Edition : ಮಾರುತಿ ತನ್ನ 40 ನೇ ವಾರ್ಷಿಕೋತ್ಸವ  ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ, ಕಂಪನಿಯು ತನ್ನ ಪ್ರೀಮಿಯಂ ರಿಟೇಲ್ ನೆಟ್‌ವರ್ಕ್ ನೆಕ್ಸಾ ಮೂಲಕ ಮಾರಾಟವಾಗುವ ಎಲ್ಲಾ ಐದು ಕಾರುಗಳ ಬ್ಲಾಕ್ ಎಡಿಶನ್ ಬಿಡುಗಡೆ ಮಾಡಿದೆ. Nexa ಹೊಸ ಬ್ಲಾಕ್ ಆವೃತ್ತಿಯು ಇಗ್ನಿಸ್, ಬಲೆನೊ, ಸಿಯಾಜ್, XL6 ಮತ್ತು ಗ್ರಾಂಡ್ ವಿಟಾರಾವನ್ನು ಒಳಗೊಂಡಿದೆ. ಈ ಎಲ್ಲಾ ಕಾರುಗಳು ಈಗ ಹೊಸ ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಶೇಡ್‌ನಲ್ಲಿ ಲಭ್ಯವಿರಲಿದೆ. ಪ್ರೀಮಿಯಂ ಮೆಟಾಲಿಕ್ ಬ್ಲ್ಯಾಕ್ ಕಲರ್ ಸ್ಕೀಮ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎನ್ನಲಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ತನ್ನ ಹಲವು ಮಾದರಿಗಳ ಡಾರ್ಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ, ಮಾರುತಿ ಇಲ್ಲಿಯವರೆಗೆ ವಿಶೇಷ ಡಾರ್ಕ್ ಆವೃತ್ತಿಯನ್ನು ಹೊಂದಿರಲಿಲ್ಲ. 


COMMERCIAL BREAK
SCROLL TO CONTINUE READING

ಮಾರುತಿ ಸುಜುಕಿಯ 40 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ನೆಕ್ಸಾದ 7 ನೇ ವಾರ್ಷಿಕೋತ್ಸವವೂ ಹೌದು. ಈ ಸಂದರ್ಭದಲ್ಲಿ ನೆಕ್ಸಾದ ನೆಕ್ಸಾ ಬ್ಲ್ಯಾಕ್ ಎಡಿಷನ್ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ ಎಂದು  ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ. ನೆಕ್ಸಾ ಬ್ಲಾಕ್ ಎಡಿಷನ್ ಕಾರುಗಳು ನೆಕ್ಸಾದ  ಮೇಲೆ ಗ್ರಾಹಕರು ಇಟ್ಟಿರುವ ನಿರೀಕ್ಷೆಯ ಸಂಕೇತ ಎಂದು ಅವರು ಹೇಳಿದ್ದಾರೆ. ಗ್ರಾಹಕರು ಈ ವಾಹನಗಳಿಗೆ ಅಳವಡಿಸಲಾದ ಸೀಮಿತ ಆವೃತ್ತಿಯ ಬಿಡಿಭಾಗಗಳನ್ನು ಸಹ ಪಡೆಯಬಹುದು.


ಇದನ್ನೂ ಓದಿ : Arecanut price: ಇಂದಿನ ಅಡಿಕೆ ದರ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ?
 
Nexa ಬ್ಲಾಕ್ ಆವೃತ್ತಿಯನ್ನು ಇಗ್ನಿಸ್‌ನ ಝೀಟಾ ಮತ್ತು ಆಲ್ಫಾ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರ ಹೊರತಾಗಿ, ಸಿಯಾಜ್‌ನ ಎಲ್ಲಾ ರೂಪಾಂತರಗಳು XL6 ನ ಆಲ್ಫಾ ಮತ್ತು ಆಲ್ಫಾ + ರೂಪಾಂತರಗಳಲ್ಲಿ ಮತ್ತು ಗ್ರ್ಯಾಂಡ್ ವಿಟಾರಾದ ಝೀಟಾ, ಝೀಟಾ+, ಆಲ್ಫಾ, ಆಲ್ಫಾ+ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ನೆಕ್ಸಾ ಬ್ಲ್ಯಾಕ್ ಎಡಿಷನ್ ಶ್ರೇಣಿಯ ಬೆಲೆಗಳು ನೆಕ್ಸಾ ಕಾರುಗಳ ಪ್ರಮಾಣಿತ ಶ್ರೇಣಿಗೆ ಅನುಗುಣವಾಗಿರುತ್ತವೆ. ಅಂದರೆ, ಸಾಮಾನ್ಯ ಮಾದರಿಯ ಬೆಲೆಗಳ ರೇಂಜ್ ನಲ್ಲಿಯೇ ಬ್ಲಾಕ್ ಎಡಿಶನ್ ಕೂಡಾ ಇರಲಿದೆ. ಈ ಪೈಕಿ ಇಗ್ನಿಸ್ ನೆಕ್ಸಾದ ಅಗ್ಗದ ಕಾರು  ಆಗಿದೆ. ಇದರ ಬೆಲೆ ಕೇವಲ  5.35 ಲಕ್ಷ ರೂಪಾಯಿಯಿಂದ   ಪ್ರಾರಂಭವಾಗುತ್ತದೆ.


ಇದನ್ನೂ ಓದಿ : PPF ಖಾತೆದಾರರ ಗಮನಕ್ಕೆ : ನಿಮಗೆ ಸರ್ಕಾರದಿಂದ ಹೊಸ ಷರತ್ತು!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.