ಬೆಂಗಳೂರು : ಹೊಸ ವರ್ಷ ಪ್ರಾರಂಭವಾಗಿದೆ. ಇದರೊಂದಿಗೆ ಹೊಸ ವರ್ಷದಲ್ಲಿ ಹೊಸದನ್ನು ಮಾಡಬೇಕೆಂಬ ಆಸೆ ಪ್ರತಿಯೊಬ್ಬರಲ್ಲಿಯೂ ಮೂಡುವುದು ಸಹಜ. ಹೊಸ ವರ್ಷದಲ್ಲಿ, ವಿದ್ಯಾರ್ಥಿಗಳು ತಮ್ಮ ಖರ್ಚಿಗೆ ಬೇಕಾದ ಹಣವನ್ನು ತಾವೇ ಸಂಪಾದಿಸಿಕೊಳ್ಳಬೇಕು ಎಂದು ಬಯಸಿದರೆ ಅದಕ್ಕೂ ಬೇಕಾದಷ್ಟು ಮಾರ್ಗಗಳಿವೆ. ಈ ಮೂಲಕ ಫ್ರೀ ಸಮಯವನ್ನು ಸದುಪಯೋಗ ಪಡಿಸಿಕೊಂಡ ಹಾಗೆಯೂ ಆಗುವುದು ಮಾತ್ರವಲ್ಲ, ನಿಮ್ಮ ಪಾಕೆಟ್ ಮನಿಯನ್ನು ನೀವೇ ಸಂಪಾದಿಸಿಕೊಂಡಂತೆಯೂ ಆಗುವುದು.
ಪಾರ್ಟ್ ಟೈಮ್ ಜಾಬ್ :
ವಿದ್ಯಾರ್ಥಿಗಳು ಅರೆಕಾಲಿಕ ಕೆಲಸ ಮಾಡಬಹುದು. ಕಾಲೇಜು ವಿದ್ಯಾರ್ಥಿಯಾಗಿದ್ದರೆ, ಕ್ಯಾಂಪಸ್ನಲ್ಲಿರುವ ಲೈಬ್ರರಿ, ಡೈನಿಂಗ್ ಹಾಲ್ ಅಥವಾ ಇತರ ಅರೆಕಾಲಿಕ ಕೆಲಸವನ್ನು ಪಡೆದುಕೊಳ್ಳಬಹುದು. ಇದಲ್ಲದೆ, ಕ್ಯಾಂಪಸ್ನ ಹೊರಗೆ ಕೂಡಾ ಅರೆಕಾಲಿಕ ಉದ್ಯೋಗವನ್ನು ಹುಡುಕಬಹುದು. ರೆಸ್ಟೋರೆಂಟ್ ಅಥವಾ ಕಾಫಿ ಶಾಪ್ ಗಳಲ್ಲಿ ಕೆಲಸ ಮಾಡಬಹುದು.
ಇದನ್ನೂ ಓದಿ : Arecanut today price: ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಅಡಿಕೆ ಧಾರಣೆ
ಫ್ರೀಲ್ಯಾನ್ಸಿಂಗ್ :
ಫ್ರೀಲ್ಯಾನ್ಸಿಂಗ್ ಮೂಲಕವೂ ಉತ್ತಮ ಗಳಿಕೆ ಸಾಧ್ಯವಾಗುತ್ತದೆ. ಬರವಣಿಗೆ, ಗ್ರಾಫಿಕ್ ಡಿಸೈನಿಂಗ್ ಅಥವಾ ಪ್ರೋಗ್ರಾಮಿಂಗ್ ಇತ್ಯಾದಿಗಳಲ್ಲಿ ಫ್ರೀಲ್ಯಾನ್ಸಿಂಗ್ ಮಾಡಬಹುದು. ಇದೀಗ ಹಲವಾರು ವೆಬ್ಸೈಟ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಫ್ರೀಲ್ಯಾನ್ಸಿಂಗ್ ಮಾಡಬಹುದು.
ಆನ್ಲೈನ್ನಲ್ಲಿ ಮಾರಾಟ :
ನಿಮಗೆ ಅಗತ್ಯವಿಲ್ಲದ ಸರಕುಗಳು ನಿಮ್ಮ ಬಳಿ ಇದ್ದರೆ ಅದನ್ನು ಆನ್ಲೈನ್ನಲ್ಲಿ ಮಾರಾಟ ಮಾಡಬಹುದು. ಇದಲ್ಲದೇ ಇನ್ನೂ ಕೆಲವು ಸಣ್ಣ ಪುಟ್ಟ ವಸ್ತುಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಬಹುದು. ಆನ್ಲೈನ್ನಲ್ಲಿ ಸರಕುಗಳನ್ನು ಮಾರಾಟ ಮಾಡಬಹುದಾದ ಹಲವಾರು ವೆಬ್ಸೈಟ್ಗಳು ಲಭ್ಯವಿದೆ.
ಟೀಚಿಂಗ್ :
ಯಾವುದಾದರು ವಿಷಯದಲ್ಲಿ ಉತ್ತಮವಾಗಿದ್ದರೆ, ಟ್ಯೂಷನ್ ಪ್ರಾರಂಭಿಸಬಹುದು. ಮನೆಯಲ್ಲಿಯೇ ಟ್ಯೂಷನ್ ಆರಂಭಿಸುವ ಮೂಲಕ ಉತ್ತಮ ಹಣವನ್ನು ಸಂಪಾದಿಸಬಹುದು. ಆನ್ಲೈನ್ ಮೂಲಕ ಕೂಡಾ ಟ್ಯೂಷನ್ ನೀಡಬಹುದು.
ಇದನ್ನೂ ಓದಿ : Aadhar Card New Rule :ಈಗ ದಾಖಲೆಗಳಿಲ್ಲದೆಯೇ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಿಸಿಕೊಳ್ಳಬಹುದು.! ಜಾರಿಯಾಗಿದೆ ಹೊಸ ನಿಯಮ
ನಿಮ್ಮಲ್ಲಿರುವ ವಸ್ತುಗಳನ್ನು ಬಾಡಿಗೆಗೆ ನೀಡಿ :
ಕಾರ್, ಬೈಕ್ ಅಥವಾ ಕ್ಯಾಮೆರಾದಂತಹ ವಸ್ತುಗಳು ನಿಮ್ಮ ಬಳಿ ಇದ್ದು, ಅವುಗಳನ್ನು ನೀವು ನಿರಂತರವಾಗಿ ಬಳಸುತ್ತಿಲ್ಲ ಎಂದಾದರೆ ಬಾಡಿಗೆಗೆ ನೀಡಿ ಹಣ ಸಂಪಾದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.